Items
0
Total
  0.00 
Welcome Guest.

 
Rs. 80    
10%
Rs. 72/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಕ್ಷರ ಪ್ರಕಾಶನ, Akshara Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2017
ರಕ್ಷಾ ಪುಟ : ಸಾದಾ
ಪುಟಗಳು : 104
ಪುಸ್ತಕದ ಗಾತ್ರ : 1/8 Demy Size
ಕೋಡ್ : 1102158

ಕಮಲಾಕರರದು ನವೋದಯದ ಈಚೆಗಿನ ಓದು ಮತ್ತು ಪ್ರಭಾವಗಳಿಂದ ತಯಾರಾದ ಒಂದು ಸ್ಪಷ್ಟ ಮತ್ತು ವಿಶಿಷ್ಟ ಸಂವೇದನೆ. ಆ ಸಂವೇದನೆಯಲ್ಲಿ ನವೋದಯದ ಭೌಮದ, ಅತೀತದ ಆವೇಶ, ಆಟಾಟೋಪಗಳಿಲ್ಲ. ನವ್ಯದ ನವಿರಾದ ವ್ಯಂಗ್ಯವಿಲ್ಲ. ತದನಂತರದ ಬಂಡಾಯದ ಕೂಗಾಟ, ರೇಗಾಟಗಳಿಲ್ಲ. ಮರ್ತ್ಯದ ಪರಿಧಿಯೊಳಗೆ, ಕ್ಷಣಭಂಗುರತೆಯ ಅವಧಿಯೊಳಗೆ ಹಾದು ಹೋಗುತ್ತಿರುವ ಜೀವಜಾತಗಳ ಲೋಕದ ಧ್ಯಾನದಿಂದೊದಗಿದ ಅನಿರೀಕ್ಷಿತ ಹೊಳಹುಗಳ, ಅಪರಿಚಿತ ಕೌತುಕಗಳ ಸೂಕ್ಷ್ಮ ನೋಟಗಳು ಈ ಕವಿತೆಗಳ ಮುಖ್ಯಪ್ರಾಣ.

ಇದರ ಜೊತೆಗೆ ಜೀವಜಗತ್ತು, ಸಂಬಂಧಗಳ ಜೋಡಿ ಸದಾ ಸಂವಾದ ನಿರತವಾಗಿ ಹೊಸ ಅರ್ಥಗಳನ್ನು ಕಟ್ಟಿಕೊಳ್ಳುತ್ತಿದ್ದರೂ ತನ್ನ ವ್ಯಕ್ತಿತ್ವದ ಖಾಸಗಿತನವನ್ನೂ ಸ್ಲೋಗನ್ನುಗಳಿಗೆ ಮಣಿಯದ ಅಧಿಕೃತತೆಯನ್ನು ಕಾಪಾಡಿಕೊಳ್ಳುವ ಕಾರಣ ಕಮಲಾಕರರ ಕಾವ್ಯ ಹಿಂಸೆ ಮತ್ತು ಮೃತ್ಯು ಪರವಾಗಿ ಎಕ್ಕುಟ್ಟಿ ಹೋಗುತ್ತಿರುವ ನಮ್ಮ ಹೊತ್ತುಗೊತ್ತುಗಳಲ್ಲಿ ಬಾಳಿನಾಸೆಗೆ ಹಾಲನೆರೆಯುವ ಸಾರ್ಥಕ ಕೆಲಸ ಮಾಡುತ್ತಿದೆ.

ದಿನೇದಿನೇ ಹೆಚ್ಚುಹೆಚ್ಚು ಉದಾಸೀನಕ್ಕೆ ಒಳಗಾಗುತ್ತಿರುವ ಕವಿತೆ ಇದಕ್ಕಿಂತಾ ಹೆಚ್ಚಿನ ಇನ್ನು ಏನನ್ನು ತಾನೇ ಲೋಕಕ್ಕಾಗಿ ಮಾಡಬಲ್ಲದು

ಕಮಲಾಕರರ ಕವಿತೆಗಳು ನನ್ನೊಳಗೆ ಅಣುರಣಿಸುತ್ತಿರುವ ಹಾಗೇ ಸಹೃದಯರ ಮನಸುಗಳಲ್ಲೂ ನಿಡುಗಾಲ ಮಾರ್ದನಿಸಲಿ.

ಎಚ್.ಎಸ್. ಶಿವಪ್ರಕಾಶ್
(ಮುನ್ನುಡಿಯಲ್ಲಿ)


Best Sellers
ದೇವರನ್ನು ಅರಿಯುದು ಹೇಗೆ - How To Know God
ದೀಪಕ್ ಚೋಪ್ರಾ, Deepak Chopra
Rs. 176/-   Rs. 195
ಭೂಗೋಳ ಕ್ವಿಜ್ (Geography Quiz)
ವಿರುಪಾಕ್ಷಪ್ಪ ಬಿ ಸಜ್ಜನ್, Virupakshappa B Sajjan
Rs. 45/-   Rs. 50
ಫಲಾಮೃತ (ಅಡಿಗೆ ಪುಸ್ತಕ)
ವಾಸಂತಿ, vasanthi
Rs. 27/-   Rs. 30
ಕರುಣಾಳು ಬಾ ಬೆಳಕೆ--(ಭಾಗ-13,14,15)
ಗುರುರಾಜ ಕರಜಗಿ, Gururaj Karajagi
Rs. 319/-   Rs. 375

Latest Books
ನಾಡಿಮಿಡಿತ : ಕಾದಂಬರಿ
ಕೆ ಶ್ರೀನಾಥ್, K Srinath
Rs. 203/-   Rs. 225
ಇಂಗ್ಲಿಷ್ ನುಡಿಗಟ್ಟು ಮತ್ತು ಪಡೆನುಡಿಗಳ ವಿವರಣಾತ್ಮಕ ಕೋಶ
ಬೇದ್ರೆ ಮಂಜುನಾಥ, Bedre Manjunatha
Rs. 90/-   Rs. 100
ಕನ್ನಡ ಕಾವ್ಯಗಳಲ್ಲಿ ಚಾರಿತ್ರಿಕ ಅಂಶಗಳು

Rs. 180/-   Rs. 200
ಅಮೆರಿಕಾ ಎಂಬ ಅದ್ಭುತ ಲೋಕ (ಪ್ರವಾಸ ಕಥನ)
ರಮೇಶ್ ಬೆ ಗೋ, Ramesh B G
Rs. 90/-   Rs. 100


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.