Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 75    
10%
Rs. 68/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಪುಸ್ತಕ ಪ್ರಕಾಶನ, Pustaka Prakashana
ಈಗಿನ ಮುದ್ರಣದ ಸಂಖ್ಯೆ : 9
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 98
ಪುಸ್ತಕದ ಗಾತ್ರ : 1/8 Demy Size
ಕೋಡ್ : 165599

ಕೆನೆತ್ ಆಂಡರ್ಸನ್ ಕಥೆಗಳನ್ನು ನಾವು ಕೇವಲ ಶಿಕಾರಿಯ ಅನುಭವಗಳೆಂದು ಮಾತ್ರ ಓದಿದರೆ ಬಹು ದೊಡ್ಡ ತಪ್ಪು ಮಾಡಿದಂತೆ. ಏಕೆಂದರೆ, ಈ ಪುಸ್ತಕದ ಮೂರು ಕಥೆಗಳಲ್ಲೂ ಅವರು ಚಿತ್ರಿಸಿರುವ ಪಾತ್ರಗಳು, ಸಾಮಾಜಿಕ ಚಿತ್ರಣ ಮುಂತಾದವುಗಳು ನಮ್ಮ ಕಾಲದ ಯಾವ ಶ್ರೇಷ್ಠ ಸಾಹಿತ್ಯಕ್ಕೂ ಕಿಂಚಿತ್ತೂ ಕಡಿಮೆ ಇಲ್ಲದವು ಎಂಬುದನ್ನು ಇಲ್ಲಿ ನೋಡಬಹುದು. ಅಷ್ಟಲ್ಲದೆ ಒಬ್ಬ ಸೃಷ್ಟಿಶೀಲ ಲೇಖಕನಿಗೆ ಇರಬೇಕಾದ ಸಾಮಾಜಿಕ ಕಳಕಳಿ, ವಿಮರ್ಶಾತ್ಮಕ ದೃಷ್ಟಿ, ಪ್ರತಿಯೊಂದೂ ಕೆನೆತ್ ಆಂಡರ್ಸನ್ನರ ಅನುಭವಗಳಲ್ಲಿ ಹೇರಳವಾಗಿರುವುದರಿಂದ ಈ ಕಥೆಗಳನ್ನು ವಾಸ್ತವ ಜೀವನದ ಸಾಹಸಗಳಂತೆ ನೋಡದೆ ಕಲಾಕೃತಿಗಳೆಂದೇ ನೋಡಬಹುದು. ಇವರು ಬರೆದದ್ದು ಕಾಡಿನ ಕಥೆಗಳಾದರೂ ಅವುಗಳಲ್ಲಿ ಅವರ ಕಾಲದ ಅತ್ಯಂತ ಕೆಳವರ್ಗದ ನೋಟ ಒಂದು ನಮಗೆ ನಿರಾಯಾಸವಾಗಿ ದೊರೆಯುತ್ತದೆ. ಸಮಾಜ ಶಾಸ್ತ್ರಜ್ಞನಂತಾಗಲಿ, ಸುಧಾರಕನಂತಾಗ್ಲಲೀ ಎಂದೂ ನೋಡದೆ ಭಾರತವನ್ನು ಅವರೊಳಗೊಬ್ಬನಾಗಿ ಚಿತ್ರಿಸಿರುವುದರಿಂದಲೇ ಈ ಕಥೆಗಳು ಶ್ರೇಷ್ಠ ಕಲಾಕೃತಿಗಳ ಮಟ್ಟಕ್ಕೇರುತ್ತವೆ.

ಕೆ.ಪಿ. ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭)- ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರುಗಳಲ್ಲಿ ಪೂರ್ಣಚಂದ್ರ ತೇಜಸ್ವಿಯವರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು. ತೇಜಸ್ವಿ ಆರಂಭದಲ್ಲಿ ಬೇರೊಂದು ಹೆಸರಲ್ಲಿ ಕಾವ್ಯ ರಚನೆ ಮಾಡಿದ್ದರೂ, ನಂತರ ಕಥಾ ಸಾಹಿತ್ಯ, ಕಾದಂಬರಿ, ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು. ೧೯೮೭ರಲ್ಲಿ `ಚಿದಂಬರ ರಹಸ್ಯ` ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದಿರುವ ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ತಂದೆ-ಮಕ್ಕಳಿಬ್ಬರೂ ಪ್ರಶಸ್ತಿ ಗಳಿಸಿದ ವಿಕ್ರಮವನ್ನು ಸೃಷ್ಟಿಸಿದ ಜೋಡಿಯಲ್ಲಿ ಎರಡನೆಯವರು. ವಿಜ್ಞಾನ ಮತ್ತು ಇತರ ಕೆಲವು ಸಾಹಿತ್ಯೇತರ ಕ್ಷೇತ್ರಗಳಲ್ಲಿಯೂ ತಮ್ಮತನವನ್ನು ಮೆರೆದಿರುವ ವಿಶಿಷ್ಟ ಲೇಖಕರಾಗಿದ್ದಾರೆ. ಕನ್ನಡ ಕಥೆ-ಕಾದಂಬರಿಗಳ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲುಗಳನ್ನೇ ನೆಟ್ಟ ತೇಜಸ್ವಿ ಅವರು ವಿಶಿಷ್ಟ ಪ್ರವಾಸ ಕಥನ, ಬೇಟೆ ಸಾಹಿತ್ಯ ಹಾಗೂ ಅನುವಾದಿತ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಹಾದಿಯನ್ನು ನಿರ್ಮಿಸಿಕೊಂಡು ಹೊರಟವರು, ಯಶಸ್ಸನ್ನು ಮೆರೆದವರು. ತೇಜಸ್ವಿಯವರನ್ನು ಕುರಿತು ಸಂಶೋಧನೆ ನಡೆಸಿ ಪಿ‌ಎಚ್.ಡಿ ಪದವಿ ಗಳಿಸಿದ್ದಾರೆ.

uploads/authorimages/545.jpg
 Reviews

 Good book.,Nice packing

ಲೇಖಕರ ಇತರ ಕೃತಿಗಳು
Rs. 183    Rs. 165
Rs. 1392    Rs. 1183
Best Sellers
ಪರಿಸರಶಾಸ್ತ್ರ ಪರಿಸರ ಅಧ್ಯಯನ (KAS, D.ED - TET) 2015-16
ಅಝ್ರೂಪರ್ವಿನ್ ಆರ್ ಶೇಖಾ, Ajrupraveen R Shek
Rs. 288/-   Rs. 320
ಅಜೇಯ - ಕ್ರಾಂತಿಕಾರಿ ಹುತಾತ್ಮ ಚಂದ್ರಶೇಖರ್ ಆಜಾದ್ ಜೀವನಗಾಥೆ
ಬಾಬು ಕೃಷ್ಣಮೂರ್ತಿ, Babu Krishnamurthy
Rs. 304/-   Rs. 320
ಸಮಾಜವಾದಿ ಎಸ್ ಬಂಗಾರಪ್ಪ (ಜೀವನ ಚರಿತ್ರೆ)
ನಿಂಗಣ್ಣ ಚಿ ಸಿ, Ninganna Chi S
Rs. 90/-   Rs. 100
Alphabet (Mini Book)
Navakarnataka
Rs. 14/-   Rs. 15

Latest Books
ಧೀರೂಭಾಯಿ ಅಂಬಾನಿ : ಉದ್ಯಮಲೋಕದ ದಂತಕಥೆ
ಎನ್ ಚೊಕ್ಕನ್, N Chokkan
Rs. 113/-   Rs. 125
ಅಲ್ಲಮನ ವಚನಗಳು : ವಚನಗಳ ಆಯ್ಕೆ ಮತ್ತು ಟಿಪ್ಪಣಿಗಳು
ಡಾ ಪಿ ವಿ ನಾರಾಯಣ, Dr P V Narayana
Rs. 135/-   Rs. 150
ಔದುಂಬರ ಗಾಥೆ (ಬೇಂದ್ರೆ ಸಮಗ್ರ ಪದ್ಯ) (ಭಾಗ 1 ರಿಂದ 6 ಸಂಪುಟ)
ದ ರಾ ಬೇಂದ್ರೆ, ಅಂಬಿಕಾತನಯದತ್ತ, Bendre D R
Rs. 3200/-
ಜನ ಸಾಮಾನ್ಯರಿಗಾಗಿ ಬ್ಯಾಂಕಿಂಗ್
ಎರ‍್ರಿಸ್ವಾಮಿ ಎನ್ ಟಿ, Yeerriswamy N T
Rs. 90/-   Rs. 100


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.