|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಯಾವುದೇ ತರಬೇತಿ ಇಲ್ಲದೆ, ಗಣಿತದ ಜ್ಞಾನವಿಲ್ಲದೆಯೂ ತಮ್ಮ ನಿತ್ಯಜೀವನದಲ್ಲಿ ಯಂತ್ರ, ತಂತ್ರ ಮತ್ತು ಗಣಿತದ ತತ್ವಗಳನ್ನಳವಡಿಸಿಕೊಂಡ ಅನೇಕ ಜೀವಿಗಳೂ ನಮ್ಮ ಸುತ್ತಮುತ್ತ ಇವೆ. ಅವುಗಳನ್ನು ಸೂಕ್ಷ್ಮವಾಗಿ ವೀಕ್ಷಿಸುವ, ಪರಿಶೀಲಿಸುವ, ಕಡೇಪಕ್ಷ ಗಮನಿಸುವ ತಾಳ್ಮೆ ಬೆಳೆಸಿಕೊಂಡಾಗ ಈ ವಿಚಿತ್ರ ಜಗತ್ತಿನ ರಹಸ್ಯಗಳನ್ನು ಅರಿಯಲು ಸಾಧ್ಯವಾಗುತ್ತದೆ.
|
ಡಾ|| ಎನ್ ಎಸ್ ಲೀಲಾ, ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನಲ್ಲಿ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿದ್ದಾರೆ. ಇವರ ಜನಪ್ರಿಯ ವಿಜ್ಞಾನ ಲೇಖನಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಹಲವಾರು ಕೃತಿಗಳನ್ನು ನವಕರ್ನಾಟಕ ಪಬ್ಲಿಕೇಷನ್ಸ್, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ವಿಶ್ವವಿದ್ಯಾಲಯ, ಸಪ್ನ ಮತ್ತು ಪ್ರಿಸಂ ಬುಕ್ ಹೌಸ್ ಪ್ರಕಟಿಸಿವೆ. ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಜ್ಞಾನ ಸಮ್ಮೇಳನಗಳಲ್ಲಿ ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಜ್ಞಾನವಾಣಿ ಮತ್ತು ಆಕಾಶವಾಣಿಗಳಲ್ಲಿ ಇವರ ಭಾಷಣ ಬಿತ್ತರಗೊಂಡಿವೆ. ಅಧ್ಯಯನ ಕ್ಷೇತ್ರದಲ್ಲಿ ಸಲ್ಲಿಸಿರುವ ಅನುಪಮ ಸೇವೆಗಾಗಿ ೨೦೦೨ನೇ ಸಾಲಿನ ‘ಸದೋದಿತ’ ಪ್ರಶಸ್ತಿ, ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟಿನ ‘ಶಾಶ್ವತಿ’ಯಿಂದ ಇವರಿಗೆ ದೊರೆತಿದೆ. ಜವಹರಲಾಲ್ ನೆಹರು ಸೆಂಟರ್ ಫಾರ್ ಎಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಯ ೨೦೦೫ರ ‘ಅನುಪಮ ವಿಜ್ಞಾನ ಶಿಕ್ಷಕಿ’ ಪ್ರಶಸ್ತಿಯ ಭಾಜನರು. ಕರ್ನಾಟಕ ಸ್ಟೇಟ್ ವುಮೆನ್ ಎಕ್ಸಲೆನ್ಸ್ ಅವಾರ್ಡ್, ವಿಮೆನ್ ಇಂಟರ್ ನ್ಯಾಷನಲ್ ನೆಟ್ವರ್ಕ್ ವತಿಯಿಂದ ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್ ೨೦೧೧. ಪ್ರಸ್ತುತ ಅಗಸ್ತ್ಯ ಇಂಟರ್ನ್ಯಾಷನಲ್ ಫೌಂಡೇಷನ್ ಸಲಹೆಗಾರರು ಹಾಗೂ ಎಂ.ಎಸ್. ರಾಮಯ್ಯ ಮೆಡಿಕಲ್ ಕಾಲೇಜಿನ ಎಥಿಕಲ್ ಕಮಿಟಿ ಸದಸ್ಯರಾಗಿದ್ದಾರೆ.
|
|
| |
|
|
|
|
|
|
|
|
|