|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಭಿಜ್ಞಾನ ಪ್ರಕಾಶನ, Abhijnana Prakashana |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2018 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
124 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9788188278275 |
ಕೋಡ್ |
: |
1116499 |
ಸೂರ್ಯಪ್ರಕಾಶ ಪಂಡಿತ್ ಮಹನೀಯರ ಕೃತಿಗಳಿಂದ, ಮಹಿಮೋನ್ನತರ ಬಾಳಿನಿಂದ ಮಿಗಿಲಾದ ಪ್ರೇರಣೆ ಪಡೆದವರು. ಹೀಗೆ ಕಲೆ ಮತ್ತು ಜೀವಗಳ ಸ್ವಾರಸ್ಯ–ಸೂಕ್ಷ್ಮತೆಗಳನ್ನು ನಿರಂತರವಾಗಿ ಅನುಸಂಧಾನಿಸುತ್ತ ಬಂದವರು. ತಾವೊಲಿದ ತತ್ವಕ್ಕೆ ಸಮರ್ಪಿತವಾಗಿ ಸಲ್ಲುವಲ್ಲಿ "ಜೀವನವದೊಂದು ಕಲೆ" ಅವರ ನೆಲೆ, ಬಲ. ಇಂಥ ಸಂವೇದನಶೀಲರ ಹೃದಯಂಗಮ ವಿಚಾರ ಲಹರಿ ಸದ್ಯದ ಕಿರು ಹೊತ್ತಿಗೆಯಲ್ಲಿ ಅಂದವಾಗಿ ಅಡಕವಾಗಿದೆ.
ಇಲ್ಲಿಯ ಹೂರಣವಂತೂ ವಿಶ್ವಜೀವನ, ಜಗತ್ಕಲೆಯ ಸ್ವಾರಸ್ಯಭೂಮಿಕೆಗಳನ್ನು ಬಗೆಗಾಣಿಸುವ ಋಷಿಪರಂಪರೆಯ ಪರಿಪಾಕ, ವಿಭೂತಿವಾಕ್ಯಗಳ ಮಣಿಪ್ರವಾಳ. ಇದಕ್ಕೆ ಸರಿಮಿಗಿಲೆನಿಸುವಂಥದ್ದು ಪಂಡಿತರ ಪಾವನೋದಾರ–ಭಾಷಾಪಾಕ. ಇಂಥ ಕನ್ನಡವು ಎಂದೆಂದೂ ಬಾಳಬೇಕಾದ ಭಾಗ್ಯ. ಇದು ನಿಜಕ್ಕೂ ಕಲೆಯಾದ ನುಡಿಯ ಜೀವನ.
ಡಿವಿಜಿಯವರು "ಜೀವನವದೊಂದು ಕಲೆ" ಎಂದು ಹೇಳುತ್ತಲೇ "ಕಲಿಸುವುದೆಂತು" ಎನ್ನುತ್ತ ಸವಾಲನ್ನೂ ಹಾಕುತ್ತಾರೆ. ಈ ಪ್ರಶ್ನೆಗೆ ಪಂಡಿತ್ ಅವರದು ಅನುತ್ತರವಾಗುವ ಹವಣು ಸದ್ಯದ ಕೃತಿಯಲ್ಲಿದೆ. ಏಕೆಂದರೆ ಅವರು ಸದಾ " ಆ ವಿವರ ನಿನ್ನೊಳಗೆ" ಎಂಬ ಅದೇ ಡಿವಿಜಿಯವರ ಕಾಣ್ಕೆಯಲ್ಲಿ ಶ್ರದ್ಧೆಯಿರಿಸಿದವರು. ಪ್ರಸ್ತುತ ಕನ್ನಡ ಪತ್ರಿಕೋದ್ಯಮದಲ್ಲಿ ಸೂರ್ಯಪ್ರಕಾಶರದು ದಿಟವಾದ ಸತ್ತ್ವನಿಷ್ಠೆ. ಪ್ರಬುದ್ಧವೂ ಪ್ರಾಮಾಣಿಕವೂ ಆದ ಹದದಿಂದ ಸನಾತನ ಧರ್ಮದ ಸ್ವಾರಸ್ಯಗಳನ್ನು ಮನಮುಟ್ಟುವಂತೆ ಹಂಚಿಕೊಳ್ಳುತ್ತಿರುವ ಕೆಲವೇ ಮಂದಿ ಸೀಳಿಲ್ಲದ ಸಹೃದಯರ ಪೈಕಿ ಇವರು ಸಲ್ಲುತ್ತಾರೆ. ಹೀಗಾಗಿಯೇ ಇಲ್ಲಿಯ ಬರಹಗಳ ರೂಪ–ಸ್ವರೂಪಗಳಲ್ಲಿ ಅದೊಂದು ಬಗೆಯ ಅನುಷ್ಠಾನಕಾಂತಿ ಪ್ರಜ್ವಲಿಸಿದೆ. ಈ ಕಾರಣದಿಂದಲೇ ಈ ಕೃತಿಯಲ್ಲಿ ಸಜ್ಜುಗೊಂಡ "ಪುರಾತನ"ವೂ "ಅಧುನಾತನ"ವಾಗಿದೆ, ಇದೇ "ಸನಾತನದ" ಸೊಗಸು.
|
| |
|
|
|
|
|
|
|
|