|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಂಕಿತ ಪುಸ್ತಕ, Ankita Pustaka |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
256 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
182835 |
ಜೋಗಿ ಕನ್ನಡ ಸಾರಸ್ವತ ಲೋಕದ ವಿಸ್ಮಯ, ಕುಡ್ಲಸೀಮೆಯ ಗಿರೀಶ್ ರಾವ್ ಎಂಬ ಹೆಸರಿನ ಈ ಗೆಳೆಯ ತಮ್ಮ ಪತ್ನಿ ಜ್ಯೋತಿಯ ಹೆಸರನ್ನು ತಮ್ಮ ನಾಮವಾಚಕದೊಂದಿಗೆ ಸಾಂಕೇತಿಕವಾಗಿ ಅಲಂಕರಿಸಿಕೊಂಡವರು, ಆ ಕಾವ್ಯನಾಮದೊಂದಿಗೆ ನಿರಂತರವಾಗಿ ಸವೆಯದೇ ಬರೆಯುತ್ತಿರುವವರು. ತಮ್ಮ ಬರಹಗಳಿಂದ ಅಪಾರ ಜನಪ್ರಿಯತೆ ಸಂಪಾದಿಸಿರುವ ಈತ ಕಣ್ಣಿಗೆ ಸಿಕ್ಕ ಕೃತಿಯನ್ನು ಓದಿ ಅರಗಿಸಿಕೊಳ್ಳುವ ವಾತಾಪಿ. ಈ ಅಪ್ರತಿಮ ಸೃಜನಶೀಲ ಸಾಹಸಿ ಸಾವಿರಾರು ಕೃತಿಗಳನ್ನು ಓದಿರಬಹುದು, ಅಷ್ಟೇ ಸಂಖ್ಯೆಯ ಜಗದ್ವಿಖ್ಯಾತ ಚಲನಚಿತ್ರಗಳನ್ನು ನೋಡಿರಲೂಬಹುದು. ಸದಾ ನೂರಾರು ಗೆಳೆಯರಿಂದ ಅಲಂಕೃತಗೊಂಡಿರುವ ಜೋಗಿ ಸರ್ವಋತು ಸ್ನೇಹಶೀಲ ವ್ಯಕ್ತಿ.
ಈಗ ಜೋಗಿ ಬರಹಗಳಿಗೆ ದಿಕ್ಸೂಚಿಯಾಗುವ ‘ಜೋಗಿ ವಾಚಿಕೆ’ ಹೊರಬರುತ್ತಿದೆ. ಈ ಜೋಗಿ ಜೋಳಿಗೆಯೊಳಗೆ ನೀವು ಕೈ ಹಾಕಲೇಬೇಕು. ಕನ್ನಡದ ಉತ್ತಮ ಓದುಗರಲ್ಲಿ ಒಬ್ಬರಾದ ಎನ್ ಸಂಧ್ಯಾರಾಣಿ ಅವರು ಈ ವಾಚಿಕೆಯನ್ನು ಸಂಪಾದಿಸಿದ್ದಾರೆ. ಕನ್ನಡದ ಸತ್ವವನ್ನು ಸರಿಯಾಗಿ ಮೊಗೆದು ಕೊಡುವ ಇವರು ಇಲ್ಲೂ ಯಶಸ್ವಿಯಾಗಿದ್ದಾರೆ.
|
| |
|
|
|
|
|
|
|
|
|