|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಜ್ಯೋತಿ ಬಸು ಭಾರತೀಯ ರಾಜಕೀಯದಲ್ಲಿ ಕಮ್ಯುನಿಸ್ಟ್ ಸರ್ಕಾರವನ್ನು 23 ವರ್ಷಗಳ ಕಾಲ ನಿರಂತರವಾಗಿ ನಡೆಸಿದ ವ್ಯಕ್ತಿ. 1996ರ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ದೊರೆಯಲಿಲ್ಲ. ಮಾಜಿ ಪ್ರಧಾನಿ ವಿ.ಪಿ. ಸಿಂಗ್ ಬಸುರವರಿಗೆ ದೂರವಾಣಿಯ ಮೂಲಕ, ಪ್ರಸ್ತುತ ಸಂದರ್ಭದಲ್ಲಿ ಜ್ಯೋತಿ ಬಸು ಅವರಿಗಿಂತ ಅನುಭವದಲ್ಲಿ ಹಿರಿಯರು ಯಾರೂ ಇಲ್ಲದ ಕಾರಣ, ಅವರೇ ಭಾರತದ ಪ್ರಧಾನಿಯಾಗಬೇಕೆಂದು ಹೇಳಿದರು. ಆದರೆ ಕಮ್ಯುನಿಸ್ಟ್ ಪಕ್ಷದಲ್ಲಿ ನಾಯಕ ಎಷ್ಟೇ ದೊಡ್ಡವನಾದರೂ, ಉನ್ನತ ಸ್ತರ ಸಮಿತಿಯ ತೀರ್ಮಾನಕ್ಕೆ ಬದ್ಧನಾಗಲೇಬೇಕು. ಬಸು ಪ್ರಧಾನ ಮಂತ್ರಿಯಾಗಬೇಕೇ? ಬೇಡವೇ? ಎನ್ನುವುದರ ಬಿಸಿ ಬಿಸಿ ವಾಗ್ವಾದಗಳಾದವು. ಕೊನೆಗೆ ವಿಷಯವನ್ನು ಮತಕ್ಕೆ ಹಾಕಿದಾಗ 20 ಮಂದಿ ಪರವಾಗಿ 35 ಮಂದಿ ವಿರೋಧವಾಗಿ ಮತ ಚಲಾಯಿಸಿದರು. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ಬಿಟ್ಟು ಉಳಿದ ಪಕ್ಷಗಳ ನಾಯಕರು ಒತ್ತಡವನ್ನು ತಂದಾಗ, ನಕಾರಾತ್ಮಕ ಮತದಾನ ಮಾಡಿದ್ದ 9 ಜನರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. ಆದರೆ, ಅದು ಆಗಲೇ ತಡವಾಗಿತ್ತು. ಪಕ್ಷದಲ್ಲಿ ಸೂಕ್ತ ರಾಜಕೀಯ ಕೊರತೆ ಇದ್ದದ್ದನ್ನು ಮನಗಂಡ ಬಸು ‘ಅದೊಂದು ಚಾರಿತ್ರಿಕ ಪ್ರಮಾದ‘ ಎಂದು ಬಣ್ಣಿಸಿದರು. ಹೀಗೆ ಓರ್ವ ಕಮ್ಯುನಿಸ್ಟ್ ನಾಯಕ ಭಾರತದ ಪ್ರಧಾನಿಯಾಗುವ ಅವಕಾಶ ತಪ್ಪಿಹೋಯಿತು.
|
ಬ್ಯಾಂಕ್ ನೌಕರ ಚಳವಳಿಯ ಸಕ್ರಿಯ ಕಾರ್ಯಕರ್ತ ರಾಗಿರುವ ಶ್ರೀ ಮ. ಶ್ರೀ. ಮುರಳಿ ಕೃಷ್ಣ ಪತ್ರಿಕೆ, ನಿಯತಕಾಲಿಕೆ ಗಳಿಗೆ ಲೇಖನಗಳನ್ನು ಬರೆಯುತ್ತ ಬಂದಿದ್ದಾರೆ. ಪ್ರಕಟಿತ ಬರೆಹಗಳನ್ನೊಳಗೊಂಡ "ಸ್ಪಂದನ" ಇವರ ಪ್ರಥಮ ಪುಸ್ತಕ. ಡಾ|| ದೇವಿಪ್ರಸಾದ್ ಚಟ್ಟೋಪಾಧ್ಯಾಯರ "ತತ್ತ್ವಶಾಸ್ತ್ರ ಮತ್ತು ಮಾನವ ಜನಾಂಗದ ಭವಿಷ್ಯ" ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಸಾಹಿತ್ಯ, ಸಂಗೀತ, ಸಿನಿಮಾ, ಚಾರಣ ಇತ್ಯಾದಿ ಅವರ ಆಸಕ್ತಿಯ ಕ್ಷೇತ್ರಗಳಾಗಿವೆ.
|
|
| |
|
|
|
|
|
|
|
|
|