Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಕಾಗೆ ಮತ್ತು ಕಡ್ಲೆಬೇಳೆ ಪಾಯಸ ಮತ್ತು ಸವಾರಿ ಗಿರಿ.. ಗಿರಿ Set of 2 Books
ಲೇಖಕರು: ಸಂತೋಷ್ ಅನಂತಪುರ, Santosh Ananthapura

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 250    
10%
Rs. 225/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2020
ರಕ್ಷಾ ಪುಟ : ಸಾದಾ
ಪುಟಗಳು : 2 Boks
ಪುಸ್ತಕದ ಗಾತ್ರ : 1/8 Demy Size
ಕೋಡ್ : 00112325

ಲೇಖಕ ಹಾಗೂ ಕಥೆಗಾರ ಸಂತೋಷ ಅನಂತಪುರ ಅವರ ಕಥಾ ಸಂಕಲನ-ಕಾಗೆ ಮತ್ತು ಕಡ್ಲೆಬೇಳೆ ಪಾಯಸ. ಹರಿವ ತೊರೆಯ ಲಹರಿ, ಸಂಸಾರ ಬಂಧನಾತ್, ಹೇಳಿಕೊಳ್ಳಲಾಗದ ನಾನು, ಕಿ....ಕಾ.... ಚೆಂಡೆ, ಪೈದಂಗಳೆ, ಕಾಗೆ ಮತ್ತು ಕಡ್ಲೆಬೇಳೆ ಪಾಯಸ, ಮಧುಕರ ವೃತ್ತಿ ಎನ್ನದು, ನಂಬಿದ ದೈವ, ಜನ್ಮಾಂತರ ಹಾಗೂ ಗಂಧ ಹೀಗೆ ಒಟ್ಟು 11 ಕಥೆಗಳನ್ನು ಒಳಗೊಂಡಿದೆ. ಕಥಾ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕಥೆಗಳು ಓದುಗರ ಗಮನ ಸೆಳೆಯುತ್ತವೆ.

ಕೃತಿಗೆ ಮುನ್ನುಡಿ ಬರೆದ ಸಾಹಿತಿ ಡಾ. ನಾ. ದಾಮೋದರ ಶೆಟ್ಟಿ "ಹೇಳುವ ವಿಷಯ ಸೀಮಿತ ರೂಪದ್ದಾದರೂ, ಭಾಷೆ ಭಾವಗಳ ಮೂಲಕ ವಸ್ತುವನ್ನು ಕಟ್ಟಿಕೊಡುವ ತಂತ್ರಗಾರಿಕೆ ಇದೆ. ಪ್ರಯೋಗಶೀಲತೆಯೂ ಇದೆ" ಎಂದು ಕಥೆಗಳನ್ನು ಪ್ರಶಂಸಿಸಿದ್ದಾರೆ.

ಲೇಖಕ ಹಾಗೂ ಕಥೆಗಾರ ಸಂತೋಷ ಅನಂತಪುರ ಅವರ ಪ್ರವಾಸ ಕಥನ "ಸವಾರಿ ಗಿರಿ...ಗಿರಿ. ..." .ಗಗನದಲ್ಲಿ ಸಂಚರಿಪ, ಕಾಪಾಡು ರಜನಿ ದೇವರೇ, ಪಾಟ್ನಾದ ಅಂಧಿಯೂ ಬರೇಲಿಯ ಬಜಾರೂ, ರಾಂಚಿಯ ಲೆಟ್ಟಿ ಮತ್ತು ಕೊಲ್ಕತ್ತಾದ ಕೆಂಪು, ಬೊಕಾರೋದ ಬಿರುಬಿಸಿಲು ಮತ್ತು ಬಡೆದು ಹೋದ ಕಾರಿನ ಟಯರು, ಥಿಂಪುವಿನಲ್ಲಿ ಅನುಭವಿಸಿದ ತಂಪು, ಬಿಳಿ ಕತ್ತಿನ ಕಾಗೆ ಮತ್ತು ಜಾಂಬಿಯಾ, ವಿಂಡುಹೂಕನ ವಿಂಡೋದಲ್ಲಿ, ಸೀತಾ ನದಿ, ಪಡಿಯಾರರ ಬಿಸಿ ಚಹಾ ಹಾಗೂ ಆಶಾವರಿ ರಾಗ ಹೀಗೆ ಒಟ್ಟು 16 ಅಧ್ಯಾಯಗಳಿರುವ ಈ ಪ್ರವಾಸ ಕಥನವು, ತನ್ನ ಸರಳ ಭಾಷೆಯ ಮೂಲಕ ಓದುಗರನ್ನು ಸೆಳೆಯುತ್ತದೆ.

ಚಿಂತಕ ನಾಗರಾಜ ರಾಮಸ್ವಾಮಿ ವಸ್ತಾರೆ ಮುನ್ನುಡಿ ಬರೆದು "ಕಾಸರಗೋಡಿನ ಮೂಲದ ಗಂಡಸು, ತಾನು ಕಲಿತ ಅಷ್ಟೂ" ಕನ್ನಡವನ್ನು ಅಷ್ಟಿಷ್ಟು ತಮಿಳು, ಮಲಯಾಳವನ್ನು, "ಸಾಕಷ್ಟು" ಹಿಂದಿಯನ್ನು ಇದೇ ದೇಶ-ಕೋಶಗಳನ್ನು ಓದುವ ಮತ್ತು ಸುತ್ತಿದ ಅನುಭವದ ಮೂಲಕ ಕನ್ನಡದಲ್ಲಿ ನಮಗೆ ದಾಟಿಸಿರುವ ಪರಿ-ಎಲ್ಲವೂ ಬೆರಗುಗೊಳಿಸಿದೆ’ ಎಂದು ಪ್ರಶಂಸಿಸಿದ್ದರೆ, ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಬೆನ್ನುಡಿ ಬರೆದು "ಕೃತಿಯ ಯಾವುದೇ ಅಧ್ಯಾಯವನ್ನು ಓದಿದರೂ ಓದಿನ ಅನುಭವ ಮುಕ್ಕಾಗಿಸುವುದಿಲ್ಲ" ಎಂದು ಪ್ರವಾಸ ಕಥನದ ಶೈಲಿಯಲ್ಲಿ ಶ್ಲಾಘಿಸಿದ್ದಾರೆ


ಕನ್ನಡಕ್ಕೂ ಕರ್ನಾಟಕಕ್ಕೂ ಬೇಕಿದ್ದೂ ಬೇಡವಾದ ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಅನಂತಪುರದಲ್ಲಿ ಹುಟ್ಟಿ ಬೆಳೆದು, ಪದವಿ ಪೂರ್ವದವರೆಗಿನ ಶಿಕ್ಷಣವನ್ನು ಕೇರಳದಲ್ಲಿ ಪೂರೈಸಿ, ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು, ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ. ಸಾಹಿತ್ಯ, ಸಂಗೀತ, ಯಕ್ಷಗಾನ, ರಂಗಭೂಮಿಯಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ, ಜಾಲತಾಣಗಳಲ್ಲಿ ಕತೆ-ಲೇಖನ-ಕವನ-ಪ್ರವಾಸಿ ಲೇಖನಗಳು ಪ್ರಕಟಗೊಂಡಿವೆ. "ಜಿಡ್ಡು ಕೃಷ್ಣಮೂರ್ತಿ"ಯವರ ಕುರಿತಾದ ಪುಸ್ತಕ ಮತ್ತು ಅವರ ಇಂಗ್ಲಿಷ್ ಬರಹಗಳ ಕನ್ನಡ ತರ್ಜುಮೆ. ಪ್ರತಿಷ್ಠಿತ ವಿದ್ಯಾಸಂಸ್ಥೆ ಮತ್ತು ಕಾರ್ಪೊರೇಟ್ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಇವರದ್ದು. ಪ್ರಸ್ತುತ ಬೆಂಗಳೂರಿನ ಇನ್ಫೋಸಿಸ್ ಲಿಮಿಟೆಡ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಲೇಖಕರ ಇತರ ಕೃತಿಗಳು
10%
ಸವಾರಿ ಗಿರಿ.. ಗಿರಿ.. ....
ಸಂತೋಷ್ ಅನಂತಪುರ, Santosh Ananthapura
Rs. 125    Rs. 113
10%
ಕಾಗೆ ಮತ್ತು ಕಡ್ಲೆಬೇಳೆ ....
ಸಂತೋಷ್ ಅನಂತಪುರ, Santosh Ananthapura
Rs. 125    Rs. 113
10%
ಜಿಡ್ಡು ಕೃಷ್ಣಮೂರ್ತಿ
ಸಂತೋಷ್ ಅನಂತಪುರ, Santosh Ananthapura
Rs. 35    Rs. 32
Best Sellers
ಸೌಂದರ್ಯ ವರ್ಧಕ ಗಿಡಮೂಲಿಕೆಗಳು
ವಸುಂಧರ ಎಂ, Vasundhara M
Rs. 117/-   Rs. 130
5 ಪೈಸೆ ವರದಕ್ಷಿಣೆ (ಸುಲಲಿತ ಪ್ರಬಂಧಗಳು)
ವಸುಧೇಂದ್ರ, Vasudhendra
Rs. 209/-   Rs. 220
ಇಂಗ್ಲಿಷನ್ನು ಪಳಗಿಸೋಣ
ಅಜಕ್ಕಳ ಗಿರೀಶ ಭಟ್ , Ajakkala Girisha Bhat
Rs. 90/-   Rs. 100
JNU ಮೇಲೆ ದಾಳಿ ಭಾರತದ ಮೇಳೆ ದಾಳಿ
ನೀಲಾ ಕೆ, Neela K
Rs. 63/-   Rs. 70

Latest Books
ಏಳು : ಅಹೋರಾತ್ರ
ಅಹೋರಾತ್ರ / Ahoratra, Ahoratra
Rs. 108/-   Rs. 120
ಈ ಕ್ಷಣದ ಶಕ್ತಿ ಮನಮಗ್ನತೆ (ಬುದ್ಡ ನಡೆ - 4)
ನಟರಾಜ ಬೂದಾಳು ಎಸ್, Nataraja Budalu S
Rs. 54/-   Rs. 60
PSI ಭಾಷಾಂತರ ಮತ್ತು ಸಾರಾಂಶ ಬರವಣಿಗೆ
ಬಾಬು ರೆಡ್ಡಿ, Babu Reddy
Rs. 225/-   Rs. 250
ಕರ್ನಾಟಕ ಸಾಂಸ್ಕೃತಿಕ ಇತಿಹಾಸ : ಫಾಲಾಕ್ಷ
ಫಾಲಾಕ್ಷ, Phalaksha
Rs. 162/-   Rs. 180


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.