|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
1 |
ಪುಸ್ತಕದ ಮೂಲ |
: |
ತೆಲುಗು |
ಮುದ್ರಣದ ವರ್ಷ |
: |
2005 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
72 |
ಪುಸ್ತಕದ ಗಾತ್ರ |
: |
1/8 Crown Size |
ISBN |
: |
9788173027086 |
ಕೋಡ್ |
: |
000774 |
ನಾಗರಿಕತೆಯ ವಿಕಾಸ ಮಾರ್ಗದಲ್ಲಿ ಮನುಷ್ಯ ಹಲವಾರು ಕಾಲ ಘಟ್ಟಗಳನ್ನು ದಾಟಿ ಬಂದಿದ್ದಾನೆ. ಸಮಾಜ ವ್ಯವಸ್ಥೆ ರೂಪುಗೊಳ್ಳುತ್ತಿದ್ದ ಸಂದರ್ಭದಲ್ಲಿ, ಪ್ರಾಯಶಃ ಹೆಂಗಸು ಗಂಡಿನ ಆಸ್ತಿ ಎಂಬ ನಂಬಿಕೆ ಬೇರೂರಲು ಪ್ರಾರಂಭವಾಗಿ, ಮುಂದೆ ಪ್ರಚಲಿತವಾಗಿರಬೇಕು. ಈ ಆಸ್ತಿಯನ್ನು ರಕ್ಷಿಸುವುದು, ಅದನ್ನು ಅನ್ಯರು ಆಕ್ರಮಿಸದಂತೆ ನೋಡಿಕೊಳ್ಳುವುದು ಗಂಡಿನ ಕರ್ತವ್ಯ ಆಯಿತು. ಈ ಪ್ರಯತ್ನದಲ್ಲಿ ತೊಡಕುಗಳು, ಕಷ್ಟ ಸಂಕಟಗಳು ಎದುರಾಗದೆ ಇರಲಿಲ್ಲ. ಹೆಣ್ಣೀಗೆ ಪಾತಿವ್ರತ್ಯದ ಸಂಕೋಲೆ ತೊಡಿಸಿದ್ದು ಸಹ ಈ ಆಸ್ತಿ ರಕ್ಷಿಸುವ ಮಾರ್ಗದಲ್ಲಿ ಸಮಾಜ ರೂಪಿಸಿದ ಉಪಾಯವಾಗಿರಬೇಕು! ಮನುಷ್ಯನ ಬುದ್ಧಿಗೆ ಹೊಳೆಯುವ ಉಪಾಯಗಳಾದರೂ ಎಂಥವು! ತನ್ನ ಆಸ್ತಿಯಾದ ಹೆಂಗಸನ್ನು ಅನ್ಯ ಗಂಡಸಿಗೆ ಸುಲಭವಶಳಾಗುವುದನ್ನು ತಡೆಯುವ ಒಂದು ಉಪಾಯವೇ ಅವಳಿಗೆ ಕಬ್ಬಿಣದ ಕಾಚಾ ತೊಡಿಸಿ, ಅದಕ್ಕೊಂದು ಬೀಗ ಹಾಕಿ ಕೀಲಿಕೈಯನ್ನು ತನ್ನಲ್ಲಿರಿಸಿಕೊಳ್ಳುವುದು! ಕಾರ್ಯ ನಿಮಿತ್ತ ವರ್ಷಗಳ ಕಾಲ ಮನೆಯಿಂದ ಹೊರಗಿರಬೇಕಾದರೂ ಏನಂತೆ, ಕೀಲಿ ಕೈ ತನ್ನಲ್ಲಿದೆಯಷ್ಟೆ! ಈ ವಿಚಾರಪೂರ್ಣ ಕೃತಿಯನ್ನು ರಚಿಸಿದವರು ತಾಪೀ ಧರ್ಮಾರಾವು. ತೆಲುಗಿನಲ್ಲಿ ಅತ್ಯಂತ ಜನಪ್ರಿಯವಾದ ಈ ಕೃತಿಯನ್ನು ಸ. ರಘುನಾಥ ಬಹಳ ಸೊಗಸಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.
|
ದಿವಂಗತ ತಾಪಿ ಧರ್ಮಾರಾವ್ (1887-1973) ವೇಗು ಚುಕ್ಕ ಗ್ರಂಥಮಾಲೆ ಸ್ಥಾಪಿಸಿ ತಮ್ಮ ವಿಚಾರಪೂರ್ಣ ಸಾಹಿತ್ಯ ಕೃತಿಗಳ ಮೂಲಕ ಆಂಧ್ರದಲ್ಲಿ ವಿಚಾರಕ್ರಾಂತಿಯನ್ನು ಹರಡಲು ಬದುಕಿನ ಕೊನೆಯ ದಿನಗಳವರೆಗೂ ಶ್ರಮಿಸಿದವರು. ಬಹುಮುಖ ಪ್ರತಿಭಾಶಾಲಿ, ಕವಿ, ಪಂಡಿತ, ವಿಮರ್ಶಕ, ನಾಟಕಕಾರ ಹಾಗೂ ವಿಚಾರವಾದಿ.
|
|
| | |
|
|
|
|
|
|
|
|