|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
‘ಡಿ.ವಿ.ಜಿ.’ ಎಂಬ ಸಂಕೇತಾಕ್ಷರಗಳಿಂಗ ಖ್ಯಾತರಾದ ಡಾ|| ಡಿ.ವಿ. ಗುಂಡಪನವರು ರಚಿಸಿದ ‘ಮಂಕುತಿಮ್ಮನ ಕಗ್ಗ’ ಇಪ್ಪತ್ತನೇ ಶತಮಾನದ ಉತ್ತರಾರ್ಧದ ಕನ್ನಡ ಕೃತಿಗಳಲ್ಲಿ ಅತ್ಯಂತ ವಿಶಾಲ ಜನಾದರಣೆಯನ್ನು ಪಡೆದ ಕೃತಿ ಎಂಬ ಸಂಗತಿಯು ವಿವಾದಾತೀತವಾಗಿ ಸಿದ್ಧಪಟ್ಟಿದೆ. ವರ್ಷಗಳು ಕಳೆದಂತೆ ‘ಕಗ್ಗ’ದ ಜನಪ್ರಿಯತೆ ನೂರ್ಮಡಿಯಾಗಿ ಹೆಚ್ಚುತ್ತಿರುವುದು ಸಾಹಿತ್ಯಲೋಕದ ಒಂದು ವಿಸ್ಮಯ. ಹೀಗೆ ವರ್ಧಿಸುತ್ತ ಸಾಗಿರುವ ‘ಕಗ್ಗ’ ವಾಙ್ಮಯಕ್ಕೆ ಇದೀಗ ಸೇರ್ಪಡೆಯಾಗುತ್ತಿರುವುದು ಶ್ರೀ ರವಿ ತಿರುಮಲೈ ರಚಿಸಿರುವ ‘ಕಗ್ಗ ರಸಧಾರೆ’ ಎಂಬ ಶೀರ್ಷಿಕೆಯ ನೂತನ ವ್ಯಾಖ್ಯಾನ. ‘ಕಗ್ಗ’ದ ಒಂದೊಂದು ಮುಕ್ತಕದಲ್ಲಿಯೂ ಜಗದ್ವಿಶಾಲವಾದ ಭಾವನಾ ಪ್ರಪಂಚವು ಘನೀಕೃತವಾಗಿದೆ. ಮನನಮಾಡಿ ಧ್ಯಾನಿಸಿದೆಂತೆಲ್ಲ ಹೆಚ್ಚುಹೆಚ್ಚು ಅರ್ಥಸೂಕ್ಷ್ಮಗಳು ಹೊಳೆಯುತ್ತಾ ಹೋಗುತ್ತವೆ.
ಈ ಸತ್ತ್ವವಂತಿಕೆಯ ಕಾರಣದಿಂದ ‘ಕಗ್ಗ’ವನ್ನು ಕುರಿತು ಈಗಾಗಲೇ ಹಲವಾರು ಕೃತಿಗಳು ಹೊರಬಂದಿದ್ದರೂ ನೂತನ ಅರ್ಥಶೋಧಗಳಿಗೆ ಸದಾ ಅವಕಾಶ ಉಳಿದೇ ಇರುತ್ತದೆ. ಅದರಂತೆ ಪ್ರಕೃತ ‘ಕಗ್ಗ ರಸಧಾರೆ’ ವ್ಯಾಖ್ಯಾನ ಕೃತಿಯಲ್ಲಿ ಶ್ರೀ ರವಿ ತಿರುಮಲೈ ಅವರು ಒಂದು ವಿನೂತನ ಪ್ರಸ್ಥಾನವನ್ನು ಸಂಯೋಜಿಸಲು ಯತ್ನಿಸಿದ್ದಾರೆ. ಇಲ್ಲಿ ಪ್ರತಿ ಪದ್ಯದ ಪದವಿಭಾಗ, ಅಲ್ಲಲ್ಲಿ ಕಠಿಣ ಶಬ್ದಾರ್ಥ ಇದ್ದು ಅನಂತರ ಇಂಗಿತಾರ್ಥದ ವ್ಯಾಖ್ಯೆ ಇದೆ.
ಹೀಗೆ ‘ಕಗ್ಗ’ದ ಪದ್ಯಗಳ ಆಶಯದ ತಳಹದಿಯಾಗಿರುವ ಸತರ್ಕ ಚಿಂತನ ವಿನ್ಯಾಸದ ಹಂತಗಳನ್ನು ಸ್ಫುಟಗೊಳಿಸುವ ರೀತಿಯಲ್ಲಿ ಪ್ರಕೃತ ‘ಕಗ್ಗ-ರಸಧಾರೆ’ ವ್ಯಾಖ್ಯಾನವು ರೂಪುಗೊಂಡಿದೆ. ಪ್ರಕೃತ ಸಂಪುಟದಲ್ಲಿ ‘ಕಗ್ಗ’ದ ಇನ್ನೂರ ಒಂದರಿಂದ ನಾನೂರ ಐವತ್ತರ ತನಕದ ಪದ್ಯಗಲ ಮೇಲಣ ವ್ಯಾಖ್ಯಾನವಿದೆ. ಉಳಿದ ಮುಂದಿನ ಪದ್ಯಗಳ ವ್ಯಾಖ್ಯಾನಗಳು ಈ ಸರಣಿಯ ಮೂರು ಮತ್ತು ನಾಲ್ಕನೇ ಸಂಪುಟಗಳಲ್ಲಿ ಸಂಪನ್ನಗೊಳ್ಳಲಿವೆ.
|
| |
|
|
|
|
|
|
|
|
|