|
|

| Rs. 80 | 10% |
Rs. 72/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಂಕಿತ ಪುಸ್ತಕ, Ankita Pustaka |
ಈಗಿನ ಮುದ್ರಣದ ಸಂಖ್ಯೆ |
: |
3 |
ಮುದ್ರಣದ ವರ್ಷ |
: |
2006 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
176 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
139342 |
ಶ್ರೀಮತಿ ಸುನಂದಾ ಅವರು ಈ ಪ್ರಬಂಧಗಳ ಮೂಲಕ ತಾವು ಕಂಡದ್ದರ ವಿಶಿಷ್ಟತೆಯನ್ನು ಪೊರೆ ಬೆಳೆದು ಜಡ್ಡದ ನಮ್ಮ ಕಣ್ಣಿಗೆ ಹಿಡಿದಿದ್ದಾರೆ. ತಮಗನುಭವವಾದ ನೋವು-ನಲಿವುಗಳನ್ನು ನಮ್ಮದಾಗಿಸಿದ್ದಾರೆ. ಅವರ ಕಣ್ಣು ನೀರೊಡೆದಾಗ ನಮ್ಮ ಕಣ್ಣು ಮಂಜಾಗುವುದು ಅನಿವಾರ್ಯವೆನ್ನುವಂತೆ ಬರೆದಿದ್ದಾರೆ. ಇದೇ ತಾನೆ ಒಳ್ಳೆಯ ಸಾಹಿತ್ಯ ಮಾಡುವ ಕೆಲಸ? ಮಾಡಬೇಕಾದ ಕೆಲಸ?
ಇವರ ಬರಹದ ಇನ್ನೊಂದು ಮನಸೆಳೆಯುವ ಅಂಶವೆಂದರೆ ಅವರಿಗೆ ಹೊಳೆಯುವ ಹೋಲಿಕೆಗಳು. ‘ಬೆಲ್ಲ ಒಡೆದ ಕಲ್ಲಿನಂತೆ ಆಕೆ ಒಮ್ಮೆ ಆಲಸಿಯಾಗಿ ಕೂರುತ್ತಾರೆ.’ ‘ಗರಿಗೆದರಿದ ನವಿಲು ತನ್ನ ಬೀಸಣಿಕೆಯನ್ನು ಮುಚ್ಚಿ ಬಿಚ್ಚುವಂತೆ ಹಳೆಯ ನೆನಪುಗಳನ್ನು ಬಿಚ್ಚುತ್ತ ಇನ್ನೊಮ್ಮೆ ಕೋಣೆ ಸೀರುತ್ತಾರೆ’ ಅಥವಾ ‘ಕಲ್ಲೊಗೆತದಿಂದ ಮುಖ ಎತ್ತುತ್ತಾರೆ.’ ‘ಒಮ್ಮೆ ನೀರಿನಲ್ಲಿ ಹಾವು ಹರಿದಂತೆ ಅಪಸ್ವರ ಕೇಳಿದರೆ, ಇನ್ನೊಮ್ಮೆ ವಿಚಾರಗಳು ಗೂಡಿಗೆ ಬೆಂಕಿಯಿಟ್ಟಾಗ ಓಡುವ ಇರುವೆಗಳಂತೆ ಹುಚ್ಚು ಹುಚ್ಚಾಗಿ ಹರಿಯುತ್ತಲೇ ಇರುತ್ತವೆ.’ ‘ಅಕ್ಕ ಪಾತ್ರೆಗೆ ಹಾಕಿದ ನೀರಿನಂತೆ ಪರಿಸರಕ್ಕೆ ಹೊಂದಿಕೊಂಡರೆ, ಚೆನ್ನಮ್ಮನ ಬಗೆಗೆ ಚಿಂತಿಸುವ ಇವರ ಚಿತ್ತ, ಹುಳ ತಿಂದ ಎಲೆಯಾಗುತ್ತದೆ.’ ಒಂದೇ? ಎರೆಡೇ? ಈ ತರಹದ ಬರಹ ಚಮತ್ಕಾರ ಮಾತ್ರವೇ? ಹೀಗೆ ಬರೆಯುವುದನ್ನು ಬಿಟ್ಟು ಕೊಟ್ಟು ಬೇರೆ ಹೇಗೂ ಬರೆಯುವುದು ಸಾಧ್ಯವಿಲ್ಲವೆನ್ನುವಷ್ಟು ಸಹಜವಾಗಿರುವ ಸುನಂದಾ ಅವರ ಬರಹ ಕೇವಲ ಚಮತ್ಕಾರವಾಗಲಾರದು. ಒಟ್ಟಿನಲ್ಲಿ ನೋಡಿದಾಗ ಸುನಂದಾ ಅವರ ಪ್ರಬಂಧಗಳು ಅವರನ್ನು ಸಮರ್ಥ ಬರಹಗಾರರ ಸಾಲಿನಲ್ಲಿ ಕೂಡಿಸುತ್ತವೆ.
|
| |
|
|
|
|
|
|
|
|
|