Items
0
Total
  0.00 
Welcome Guest.

 
Rs. 150    
10%
Rs. 135/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್, Sawanna Enterprises
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2019
ರಕ್ಷಾ ಪುಟ : ಸಾದಾ
ಪುಟಗಳು : 152
ಪುಸ್ತಕದ ಗಾತ್ರ : 1/8 Demy Size
ISBN : 9789382348832
ಕೋಡ್ : 1120791

ಪ್ರೊ ಬಿ ಎ ವಿವೇಕ ರೈ ಅವರ ಬದುಕಿನ ಪಯಣದಲ್ಲಿ ನಾನೂ ಸಹಯಾತ್ರಿ ಎನ್ನುವುದು ನನಗೆ ಹೆಮ್ಮೆಯ ಸಂಗತಿ. ಅವರು ಬದುಕಿದ ರೀತಿಯ ಒಂದಿಷ್ಟು ಮುಖಗಳನ್ನಾದರೂ ನಾನು ಹತ್ತಿರದಿಂದ ಕಂಡಿದ್ದೇನೆ. ನನ್ನ ಮನದ ``ಗಿಳಿಸೂವೆ``ಗೆ ಕಂಡಿದ್ದಕ್ಕಿಂತ ವಿಶೇಷವಾದ, ಅಪರೂಪವಾದ ಲೋಕ ಈ ಕೃತಿಯಲ್ಲಿದೆ.

ನಾಲ್ಕು ಗೋಡೆಗಳ ಒಳಗೂ ಅದರಾಚೆಗೂ ವಿವೇಕ ರೈ ಕಲಿತಿದ್ದಾರೆ ಹಾಗೂ ಕಲಿಸಿದ್ದಾರೆ. ನಿರಂತರ ಕಲಿಯುವಿಕೆಗೆ ರೈ ಅವರು ಒಂದು ಶ್ರೇಷ್ಠ ಮಾದರಿ. ಈ ಕೃತಿ ನಮ್ಮ ಬದುಕಿನ ಬಾಗಿಲನ್ನೂ ತೆರೆಯುತ್ತದೆ ಎನ್ನುವ ನಂಬಿಕೆ ನನ್ನದು

- ಜಿ ಎನ್ ಮೋಹನ್

ಡಾ. ಬಿ. ಎ. ವಿವೇಕ್ ರೈ ಇವರು ತುಳು ವಿದ್ವಾಂಸರು, ಕನ್ನಡ ಪ್ರಾಧ್ಯಾಪಕರು, ವಿಮರ್ಶಕರು. ಕಳೆದ ೫೦ ವರ್ಷದಿಂದ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನ ತನ್ನನ್ನು ಅರ್ಪಿಸಿಕೊಂಡಿದ್ದಾರೆ ಕರ್ನಾಟಕದ ಕನ್ನಡಕ್ಕು, ಕರಾವಳಿಯ ತುಳುವಿನ ಬೆಳವಣಿಗೆಗೆ ದುಡಿಯುತ್ತಿದ್ದಾರೆ.ಇವರ ಮನೆ ಭಾಷೆ ತುಳು. ಇವರಿಗೆ ಚಿಕ್ಕ ವಯಸ್ಸಿಗೆ ಕಾರಂತರ ಪರಿಚಯ ಇತ್ತು. ಆ ಕಾರಣದಿಂದ ಭಾಷೆ, ಸಂಸ್ಕೃತಿಯ ಕ್ಷೇತ್ರದಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.

ವಿವೇಕ ರೈಯವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಳಿಯ ಪುಣಚಾ ಗ್ರಾಮದ ವಿವೇಕ ರೈ (1946)ಅಗ್ರಾಳ ಪುರಂದರ ರೈಯವರು ಇವರ ತಂದೆ, ಶಿವರಾಮ ಕಾರಂತ ರ ಶಿಷ್ಯ ಹಾಗೂ, ಅವರ ದೊಡ್ಡ ಅಭಿಮಾನಿ. ಪುರಂದರ ರೈಯವರ ಸಾಹಿತ್ಯ ಸ್ಪಂದನೆಯಲ್ಲಿ, ಬೆಳೆದ ವಿವೇಕ ರೈಯವರು, ದೊಡ್ಡ ವಿದ್ವಾಂಸರಾಗಿದ್ದಾರೆ.ಇವರು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಬಿ ಎಸ್ಸಿ., ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಎಂಎ ಪದವಿ ಮತ್ತು ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದರು. ಮಂಗಳೂರು ಸ್ನಾತಕೋತ್ತರ ಕೇಂದ್ರ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ 34 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ, 18 ವರ್ಷಗಳ ಕಾಲ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು. ಕನ್ನಡ ವಿಶ್ವವಿದ್ಯಾಲಯ ಹಂಪಿ (2004-07) ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು (2007-09)ಗಳಲ್ಲಿ ಕುಲಪತಿಗಳಾಗಿ ಸಂಸ್ಥೆಗಳನ್ನು ಮುನ್ನಡೆಸಿದರು. ಜರ್ಮನಿಯ ವ್ಯೂರ್ತ್ಸ್ ಬುರ್ಗ್ ವಿವಿಯ ಇಂಡಾಲಜಿ ವಿಭಾಗದಲ್ಲಿ ಅತಿಥಿ-ಪ್ರಾಧ್ಯಾಪಕರಾಗಿ ಯುರೋಪಿಯನ್ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಯನ್ನು ಬೋಧಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸ್ಥಾಪಕ ಅಧ್ಯಕ್ಷರು (1994-98). ಕನ್ನಡದಲ್ಲಿ ಇವರ 21 ಸ್ವತಂತ್ರ ಕೃತಿಗಳು ಮತ್ತು 18 ಸಂಪಾದಿತ ಕೃತಿಗಳು, ತುಳುವಿನಲ್ಲಿ ಎರಡು ಕೃತಿಗಳು, ಇಂಗ್ಲಿಷ್ ನಲ್ಲಿ ಇತರರೊಡನೆ ಆರು ಕೃತಿಗಳು ಪ್ರಕಟವಾಗಿವೆ. ಇವರು ಡಾ. ಕತ್ರಿನ್ ಬಿಂದರ್ ಜೊತೆಗೆ ತೇಜಸ್ವಿ ಅವರ ``ಕರ್ವಾಲೊ`` ಕಾದಂಬರಿಯನ್ನು ಜರ್ಮನ್ ಭಾಷೆಗೆ ಅನುವಾದಿಸಿದ್ದಾರೆ. ಇವರು ಹೆಂಡತಿ ವಸಂತಕೋಕಿಲ ಅವರ ಜೊತೆಗೆ ಮಂಗಳೂರಿನಲ್ಲಿ ನೆಲೆಸಿದ್ದಾರೆ.

ಲೇಖಕರ ಇತರ ಕೃತಿಗಳು
Rs. 200    Rs. 180
10%
ಮೊದಲ ಮೆಟ್ಟಿಲು
ವಿವೇಕ ರೈ ಬಿ ಎ, Viveka Rai B A
Rs. 200    Rs. 180
10%
ರೂಪಾಂತರ - ಸಿ ....
ವಿವೇಕ ರೈ ಬಿ ಎ, Viveka Rai B A
Rs. 295    Rs. 266
10%
ಅರಿವು ಸಾಮಾನ್ಯವೆ : ....
ವಿವೇಕ ರೈ ಬಿ ಎ, Viveka Rai B A
Rs. 250    Rs. 225
Best Sellers
ಹೈಸ್ಕೂಲ್ ಇಂಗ್ಲಿಷ್ ಗ್ರಾಮರ್ ಆಂಡ್ ಕಂಪೋಜಿಶನ್
Wren And Martin
Rs. 261/-   Rs. 275
ಸಿರಿಗನ್ನಡ ಮಗ್ಗಿ ಪುಸ್ತಕ
ಪದ್ಮಲತಾ ಡಿ, Padmalatha D
Rs. 23/-   Rs. 25
ಸಸ್ಯ ಸಗ್ಗ (ನಾಲ್ಕು ದಶಕಗಳ ಸಸ್ಯ ಸಂಶೋಧನೆಯಲ್ಲಿ ಅವರು ಕಂಡ ಸಸ್ಯ ಜಗತ್ತಿನ ಸೋಜಿಗಗಳು)
ಗಣೇಶಯ್ಯ ಕೆ ಎನ್, Ganeshaiah K n
Rs. 315/-   Rs. 350
ರಾಜ್ ಕುಮಾರ್ ಒಂದು ಬೆಳಕು (with Colour, Black and white Photo)
ಪ್ರವೀಣ್ ನಾಯಕ್ ಕೆ, Praveen Nayak K
Rs. 1440/-   Rs. 1600

Latest Books
ಪುರೋಹಿತಶಾಹಿ ಮತ್ತು ಗುಲಾಮಗಿರಿ
ಜ್ಯೋತಿಬಾ ಫುಲೆ, Jyothibha Pule
Rs. 90/-   Rs. 100
ನವಿಲು ಕೊಂದ ಹುಡುಗ : ಕಥೆಗಳು
ಸಚಿನ್ ತೀರ್ಥಹಳ್ಳಿ, Sachin Teerthahalli
Rs. 86/-   Rs. 95
ಧರೆಹೊತ್ತಿ ಉರಿದಾಗ (ಭಾರತ ವಿಭಜನೆಯ ದುರಂತ ಕಥೆಗಳು--ಭಾಗ--3)
ಅಲೋಕ್ ಭಲ್ಲಾ, Alok Bhalla
Rs. 383/-   Rs. 425
ವಿತ್ತ ಜಗತ್ತು ತಿಳಿಯಬೇಕಾದ ವಿಷಯ ಹಲವು ಹತ್ತು
ರಂಗಸ್ವಾಮಿ ಮೂಕನಹಳ್ಳಿ, Rangaswamy Mookanahalli
Rs. 171/-   Rs. 190


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.