Items
0
Total
  0.00 
Welcome Guest.

 
Rs. 70   
10%
 
 
Rs. 63/-
 
 
Dispatched within 7 Business Days
FREE Home Delivery
(For purchase of Rs 250/- and above)

    
ಶ್ರೇಷ್ಠ ಅನುವಾದಕ್ಕಾಗಿ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಪ್ರಶಸ್ತಿ 2013
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 120
ಪುಸ್ತಕದ ಗಾತ್ರ : 1/8 Demy Size
ISBN : 9788184672787
ಕೋಡ್ : 001944

ಸುಸಂಸ್ಕೃತ ಮನೆತನದಲ್ಲಿ ಹುಟ್ಟಿ, ನಿರ್ಭಯ - ಮುಕ್ತ ವಾತಾವರಣದಲ್ಲಿ ಬೆಳೆದು ಇಂದಿನ ಮಹಿಳೆಯರಿಗೆ ಸ್ಫೂರ್ತಿ ನೀಡುವಂಥ ಬದುಕನ್ನು ಬಾಳಿದ ಕಮಲಾದೇವಿ ಚಟ್ಟೋಪಾಧ್ಯಾಯರ ಪೂರ್ಣ ಪ್ರಮಾಣದ ಜೀವನ ಚರಿತ್ರೆಯಿದು. ಬಲು ದಿಟ್ಟೆಯಾದ ಅವರು ಸಹಕಾರಿ ಸೇವಾಕ್ಷೇತ್ರದಲ್ಲೂ, ಸ್ವಾತಂತ್ರ್ಯ ಚಳುವಳಿಯ ಸ್ವದೇಶೀ ಆಂದೋಲನದಲ್ಲೂ ಭಾಗವಹಿಸಿದವರು. ದೇಶಪ್ರೇಮಿಗಳ ಒಡನಾಟ, ನಿಷ್ಠಾವಂತ ಸಮಾಜ ಸೇವಕರ ಪರಿಚಯ ಚಿಕ್ಕಂದಿನಿಂದಲೂ ಇವರಿಗಿತ್ತು. ಓರ್ವ ಸ್ವಯಂಸೇವಕಿಯಾಗಿ ಸೇವಾದಳದಲ್ಲಿ ಪ್ರವೇಶ ಪಡೆದ ಕಮಲಾದೇವಿ ಮುಂದೆ ಸಕ್ರಿಯ ರಾಜಕಾರಣಕ್ಕೆ ಪದಾರ್ಪಣೆ ಮಾಡಿದರು. ಸ್ವಾತಂತ್ರ್ಯ ಸಂಗ್ರಾಮದ ಎಲ್ಲ ಚಳುವಳಿಗಳಲ್ಲಿ ಭಾಗವಹಿಸಿ ಕಾರಾಗೃಹ ಸೇರಿ ಅತ್ಯಂತ ಕಠಿಣ ದಿನಗಳನ್ನು ಕಳೆದರು. ವೈಯುಕ್ತಿಕ, ಕೌಟುಂಬಿಕ ಸುಖ ಸಂತೋಷವನ್ನು ದೇಶಕ್ಕಾಗಿ ತ್ಯಾಗ ಮಾಡಿದರು. ಉಪ್ಪಿನ ಸತ್ಯಾಗ್ರಹದ ಕಾಲ್ನಡಿಗೆಯಲ್ಲಿ ಮಹಿಳೆಯರನ್ನು ಸೇರಿಸಿಕೊಳ್ಳಲಿಲ್ಲವೆಂದು ಗಾಂಧೀಜಿಯೊಂದಿಗೆ ತಕರಾರು ತೆಗೆದ ಮಹಿಳೆ ಈಕೆ. ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರೊಂದಿಗೂ, ಮಹಿಳಾ ಅಭಿವೃದ್ಧಿಗೆ ಅಡ್ಡಿಯಾಗಿರುವ ಸಮಾಜದ ಕೊಳಕು ಮನಸ್ಸಿನವರೊಂದಿಗೂ ಹೋರಾಡಬೇಕಾದ ಅನಿವಾರ್ಯತೆ ಇವರಿಗಿತ್ತು. ಅಂದಿನ ರಾಷ್ಟ್ರಮಟ್ಟದ ಗಣ್ಯರೊಂದಿಗೆ ನಿಕಟಸಂಪರ್ಕವಿದ್ದ ಕಮಲಾದೇವಿ ತನ್ನ ವ್ಯವಹಾರ ಚತುರತೆಯಿಂದ ಯಶಸ್ವಿಯಾಗಿ ಎಲ್ಲವನ್ನೂ ನಿಭಾಯಿಸಿದರು. ಕರಕುಶಲ ಮಂಡಳಿಯ ಮೂಲಕ ವಿವಿಧ ನೇಯ್ಗೆ, ಹಸ್ತಕೌಶಲ್ಯದ ಸಾಮಗ್ರಿ ತಯಾರಿಕೆಗೆ ಪ್ರೋತ್ಸಾಹ ನೀಡಿದ ಅವರ ಸೇವೆ ಸ್ಮರಣೀಯ.

ಡಾ|| ಜ್ಯೋತ್ಸ್ನಾ ಅವರು ವಿವಿಧ ರಾಜ್ಯಗಳಲ್ಲಿ ಆಕಾಶವಾಣಿಯಲ್ಲಿ ಉದ್ಯೋಗಿಯಾಗಿದ್ದು ನಿವೃತ್ತಿ ಹೊಂದಿದ್ದಾರೆ. ಎಂ.ಎ., ಪಿಎಚ್.ಡಿ. ಪದವೀಧರರು. ಕನ್ನಡ, ಕೊಂಕಣಿ, ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಇತರ ಹಲವು ಪ್ರಶಸ್ತಿಗಳು ಇವರಿಗೆ ಸಂದಿವೆ. ಇದೀಗ www.kamatspotpourri.com ಎಂಬ ವೆಬ್‌ಸೈಟೊಂದನ್ನು ನಡೆಸುತ್ತಿದ್ದಾರೆ. ಇವರ ‘ಕಮಲಾದೇವಿ ಚಟ್ಟೋಪಾಧ್ಯಾಯ’ ಎಂಬ ಕೊಂಕಣಿ ಕೃತಿಯ್ ಕನ್ನಡ ಅನುವಾದವನ್ನು ನವಕರ್ನಾಟಕ ಪ್ರಕಟಿಸಿದೆ.

ಲೇಖಕರ ಇತರ ಕೃತಿಗಳು
Best Sellers
21 ನೇ ಕ್ರೋಮೋಜೋಮ್ ಮತ್ತು ಇಅತರೆ ಕಥನಗಳು
ಚಂಪ ಜೈಪ್ರಕಾಶ್, Champa Jaiprakash
Rs. 108/-   Rs. 120
ನಮ್ಮ ಒಗಟುಗಳು
ರಾಗೌ, Ragow
Rs. 108/-   Rs. 120
ಪರಿಸರ ಸಂರಕ್ಷಣೆಗಾಗಿ ಗಟ್ಟಿ ಕಸದ ನಿರ್ವಹಣೆ
ನಿರಂಜನ ಆರಾಧ್ಯ ಎಚ್ ಎಸ್, Niranjana Aradya H S
Rs. 23/-   Rs. 25
ಕನ್ನಡದಲ್ಲಿ ಕುರ್‌ಆನ್ ಅನುವಾದ
ಅಬ್ದುಸ್ಸಲಾಮ್ ಪುತ್ತಿಗೆ, Abdussalam Puttige
Rs. 180/-   Rs. 200

Latest Books
ಸರ್ ಜೋಸೆಫ್ ಲಿಸ್ಟರ್ (ವಿಶ್ವಮಾನ್ಯರು)
ಚಂದ್ರಶೇಖರ್ ಸಿ ಆರ್, Chandrashekar C R
Rs. 23/-   Rs. 25
ಕಾಕ ಭುಶುಂಡಿ ಮತ್ತು ಇತರ ಪ್ರಬಂಧಗಳು : ಪ್ರಾಣಿಪಕ್ಷಿ ಚಿತ್ರ ಪ್ರಬಂಧಗಳು
ಸುನಂದಾ ಬೆಳಗಾಂವಕರ, Sunanda Belgaumkar
Rs. 203/-   Rs. 225
ಓಬಳವ್ವನಾಗತಿ
ವೇಣು ಬಿ ಎಲ್, Venu B L
Rs. 225/-   Rs. 250
ನಮ್ಮ ಮನೆಗೂ ಬಂದರು ಗಾಂಧೀಜಿ
ರಾಜೇಶ್ವರಿ ತೇಜಸ್ವಿ, Rajeshwari Tejasvi
Rs. 135/-   Rs. 150


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.