|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಹನ್ನೆರಡನೇ ಶತಮಾನದ ಪ್ರಾರಂಭದೊಂದಿಗೆ ಹೊಯ್ಸಳ ಸಾಮ್ರಾಜ್ಯವೊಂದನ್ನು ಬಿಟ್ಟರೆ ಕರ್ನಾಟಕದ ಮುಖ್ಯ ಚಕ್ರಾಧಿಪತ್ಯಗಳೆಲ್ಲ ಕೊನೆಗೊಂಡು ಅರಸೊತ್ತಿಗೆ ಛಿದ್ರ ಛಿದ್ರವಾಗಿತ್ತು. ಚಕ್ರಾಧಿಪತ್ಯಗಳು, ಅವುಗಳ ಆಶ್ರಯದಲ್ಲಿ ಬೆಳೆದ ರಾಜಮಠಗಳು, ರಾಜವರ್ತಕರ ದಬ್ಬಾಳಿಕೆಗೆ ತುತ್ತಾದ ಜನರು ಮತ್ತು ಜನರ ನಡುವೆಯೇ ಇದ್ದ ಕೆಲವು ಧರ್ಮ ಪ್ರಚಾರಕರು ಸಂಘಟಿತರಾಗಿ ಹೊಸ ದನಿಯೊಂದನ್ನು ಎತ್ತಿದ್ದರು. ಈ ಅಂಶ ಸ್ಪಷ್ಟವಾಗಿ ಕಾಣಿಸಿಕೊಳ್ಳುವುದು ಕ್ರಿಸ್ತಶಕ 1100ರಲ್ಲಿದ್ದನೆಂದು ಹೇಳಲಾದ ನಯಸೇನನಲ್ಲಿ. ಸಂಘಟಿತವಾಗಿ ಕಾಣಿಸಿಕೊಳ್ಳುವುದು ವಚನ ಚಳವಳಿಯಲ್ಲಿ, ನಯಸೇನನಿಂದ ಅಂದರೆ ಕ್ರಿಸ್ತಶಕ 1100ರಿಂದ ಆರಂಭಿಸಿ 1500ರವರೆಗಿನ ಅವಧಿಯನ್ನು ಸ್ಥೂಲವಾಗಿ ರಾಜಸತ್ತೆಯ ವಿಘಟನೆ ಮತ್ತು ಧಾರ್ಮಿಕ ಚಳವಳಿಯ ಮೇಲುಗೈ ಕಾಲವೆಂದು ಈ ಅವಧಿಯ ಸಾಹಿತ್ಯವನ್ನು ಮಧ್ಯಕಾಲೀನ ಸಾಹಿತ್ಯವೆಂದು ಕರೆಯಬಹುದು. ಆಡುನುಡಿ ಕಾವ್ಯದ ಪಟ್ಟಕ್ಕೆ ಏರಿದ್ದು ಈ ಅವಧಿಯ ವಿಶೇಷ. ಎರಡನೆಯ ಸಂಪುಟ ಈ ಕಾಲ ವ್ಯಾಪ್ತಿಯ ಸಂಗತಿಗಳಿಗೆ ಸಂಬಂಧಿಸಿದೆ.
|
| |
|
|
|
|
|
|
|
|
|