|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಭಾಷಾ ಪ್ರಕಾಶನ, Bhasha Prakashana |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2019 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
|
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
1115729 |
ಡಾ. ಡಿ. ಎನ್. ಶಂಕರ ಭಟ್ ಅವರು ಜಗತ್ತಿನ ಹೆಸರಾಂತ ಭಾಷಾ ವಿಜ್ಞಾನಿಗಳು. ಮದ್ರಾಸ್ ವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಎಂ.ಎ. ಮತ್ತು ಪುಣೆ ವಿಶ್ವವಿದ್ಯಾಲಯದಿಂದ ನುಡಿಯರಿಮೆ(linguistics)ಯಲ್ಲಿ ಪಿ.ಎಚ್.ಡಿ. ಪಡೆದಿರುವ ಭಟ್ಟರು, ಅಮೇರಿಕಾದ ಸ್ಟ್ಯಾನ್ ಫೋರ್ಡ್ ಯೂನಿವರ್ಸಿಟಿ, ಆಸ್ಟ್ರೇಲಿಯಾದ ಲಾ ಟ್ರೋಬೆ ಯೂನಿವರ್ಸಿಟಿ, ಬೆಲ್ಜಿಯಂ ದೇಶದ ಆಂಟ್ವರ್ಪ್ ಯೂನಿವರ್ಸಿಟಿ, ಜರ್ಮನಿಯ ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್ನಂತಹ ಜಗತ್ತಿನ ಹಲವಾರು ಮುಂಚೂಣಿಯ ವಿಶ್ವವಿದ್ಯಾಲಯಗಳಲ್ಲಿ ಮತ್ತು ಮೈಸೂರಿನಲ್ಲಿರುವ ಭಾರತೀಯ ಭಾಷಾ ಸಂಸ್ಥಾನ, ಮಣಿಪುರ ವಿಶ್ವವಿದ್ಯಾಲಯ, ಪುಣೆಯಲ್ಲಿರುವ ಡೆಕ್ಕನ್ ಕಾಲೇಜ್ ಮುಂತಾದೆಡೆ ಕಲಿಸುಗರಾಗಿ, ಸಂಶೋಧಕರಾಗಿ ಕೆಲಸ ಮಾಡಿದ್ದಾರೆ. ನುಡಿಯರಿಮೆಯ ಸುತ್ತ ಬರೆದಿರುವ ಅವರ ಹತ್ತಾರು ಹೊತ್ತಗೆಗಳು ಮತ್ತು ಸಂಶೋಧನೆಯ ಪೇಪರಗಳು (research papers) ಜಗತ್ತಿನೆಲ್ಲೆಡೆ ಹೆಸರುಗಳಿಸಿವೆ.
ಕನ್ನಡ ನುಡಿಯ ಬಗ್ಗೆ ಶಂಕರ ಭಟ್ಟರು ಹಲವು ವರ್ಷಗಳ ಆಳವಾದ ಸಂಶೋಧನೆ ನಡೆಸಿದ್ದು, ಈ ನಿಟ್ಟಿನಲ್ಲಿ ಪಡೆದುಕೊಂಡ ತಿಳುವಳಿಕೆಗಳನ್ನು ಒಗ್ಗೂಡಿಸಿ ಹಲವು ಹೊತ್ತಗೆಗಳನ್ನು ಬರೆದಿದ್ದಾರೆ. ಕನ್ನಡ ನುಡಿಯು ನಡೆದು ಬಂದ ದಾರಿ, ಕನ್ನಡದಲ್ಲಿರುವ ವ್ಯಾಕರಣದ ನಿಜವಾದ ಕಟ್ಟಲೆಗಳು, ಕನ್ನಡದ ಪದ ಸೊಗಡು ಮುಂತಾದವುಗಳ ಕುರಿತು ಭಟ್ಟರು ಬರೆದಿರುವ ಕನ್ನಡ ನುಡಿಯರಿಮೆಯ ಹೊತ್ತಗೆಗಳು, ಹಿಂದಿನಿಂದ ಕಣ್ಣುಮುಚ್ಚಿ ನಂಬಿಕೊಂಡು ಬಂದಿದ್ದ ಹಲವಾರು ತಪ್ಪು ತಿಳುವಳಿಕೆಗಳನ್ನು ಮತ್ತು ಅವುಗಳನ್ನು ಸರಿಪಡಿಸುವ ಬಗೆಗಳನ್ನು ಕನ್ನಡ ಸಮಾಜಕ್ಕೆ ತೋರಿಸಿಕೊಟ್ಟಿವೆ.
ಭಾಷಾ ವಿಜ್ಞಾನದಲ್ಲಿ ಇವರ ಕೆಲಸವನ್ನು ಗುರುತಿಸಿ ಹಂಪಿ ವಿಶ್ವವಿದ್ಯಾಲಯವು ಇವರಿಗೆ `ನಾಡೋಜ` ಪದವಿಯನ್ನೂ ಹಾಗೂ ಕರ್ನಾಟಕ ಸರಕಾರವು ಪಂಪ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ.
|
|
| |
|
|
|
|
|
|
|
|
|