|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
‘ಕನ್ನಡವನ್ನು ತಪ್ಪಿಲ್ಲದೆ ಓದಿ ಬರೆಯುವುದು ಹೇಗೆ?‘ ಎಂಬ ಪ್ರಶ್ನೆಯೇ ಕನ್ನಡದ ಬಳಕೆಯ ಅವಸ್ಥೆಯನ್ನು ಹೇಳುತ್ತದೆ. ಕನ್ನಡವನ್ನು ಕಲಿಯುವವರು, ಮಾತೃಭಾಷೆಯಾಗಿ ಕಲಿಯಲೀ ಅಥವಾ ಇತರ ಭಾಷೆಯಾಗಿ ಕಲಿಯಲೀ, ಹಲವಾರು ಎಡರುತೊಡರುಗಳು ಬರುತ್ತವೆ. ಈ ಎಡರುತೊಡರುಗಳನ್ನು ಎಳೆಎಳೆಯಾಗಿ ಬಿಡಿಸಿ, ತಿಳಿಸಿ ಅದಕ್ಕೆ ಪರಿಹಾರೋಪಾಯಗಳನ್ನು ಕೊಟ್ಟಿರುವ ಟಿ. ಎಸ್. ಗೋಪಾಲ್ ಅವರ ಪ್ರಯತ್ನ ಶ್ಲಾಘನೀಯ. ಕನ್ನಡ ಕಲಿಕೆಯ ಬೋಧನೆಯ ಬಗ್ಗೆ ಅನೇಕ ಸಂಶೋಧನೆಗಳಿವೆ, ಆದರೆ ಈ ಈ ಪುಸ್ತಿಕೆಯಲ್ಲಿ ಕೊಟ್ಟಿರುವಷ್ಟು ಸಂಕ್ಷಿಪ್ತವಾಗಿ, ಒಪ್ಪವಾಗಿ ತಪ್ಪುಗಳ ಬಗ್ಗೆ ಪರಿಹಾರಾತ್ಮಕವಾಗಿ ಅಭ್ಯಾಸಗಳನ್ನು ಪಠ್ಯದೊಳಗೇ ಮೇಳೈಸಿರುವುದೊಂದು ವೈಶಿಷ್ಟ್ಯ. ಹಳಗನ್ನಡ ಮತ್ತು ನಂತರದ ಬದಲಾವಣೆಗಳು ಹೇಗೆ ಐತಿಹಾಸಿಕವಾಗಿ ಮೂಡಿಬಂದಿವೆ ಎಂಬುದನ್ನು ತಿಳಿಸುತ್ತಾ ಅವುಗಳನ್ನು ಬೋಧನೆಯಲ್ಲಿ ಅಳವಡಿಸಿಕೊಳ್ಳಲು ಇರುವ ಅನಿವಾರ್ಯವನ್ನು ತಿಳಿಹೇಳುತ್ತಾರೆ. ಅಕ್ಷರಗಳ ರೂಪಸ್ವಾಮ್ಯ, ಧ್ವನಿಸ್ವಾಮ್ಯ ಇತ್ಯಾದಿಗಳಿಂದಾಗುವ ತೊಡರುಗಳನ್ನಂತೂ ಚರ್ಚೆ ಮಾಡಿ ಅವುಗಳಲ್ಲಿ ಆಸಕ್ತಿ ಮೂಡಿಸಿದ್ದಾರೆ. ಈ ಪುಸ್ತಿಕೆಯು ಕನ್ನಡ ಕಲಿಕೆ ಹಾಗೂ ಬೋಧನೆಯಲ್ಲಿ ನಿರೀಕ್ಷಿತ ಪರಿಣಾಮವನ್ನು ಬೀರುತ್ತದೆ.
|
ಶ್ರೀ ಟಿ ಎಸ್ ಗೋಪಾಲ್ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಹಾಗೂ ಎಂ.ಎ. ಪದವಿಗಳನ್ನು ಚಿನ್ನದ ಪದಕಗಳೊಂದಿಗೆ ಪಡೆದವರು. ಕೊಡಗಿನ ಶ್ರೀಮಂಗಲ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರು. ನಾಗರಹೊಳೆ ವನ್ಯಜೀವಿಸಂರಕ್ಷಣಾ ಶಿಕ್ಷಣ ಯೋಜನೆಯಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ಇವರು ಬರೆದ ‘ನವಕರ್ನಾಟಕ ಕನ್ನಡ ಕಲಿಕೆ’ ಮಾಲೆಯ ಹತ್ತು ಪುಸ್ತಕಗಳು ನವಕರ್ನಾಟಕದಿಂದ ಪ್ರಕಟವಾಗಿವೆ.
|
|
| |
|
|
|
|
|
|
|
|
|