Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 380/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಉದಯರವಿ ಪ್ರಕಾಶನ, Udayaravi Prakashana
ಈಗಿನ ಮುದ್ರಣದ ಸಂಖ್ಯೆ : 19
ಮುದ್ರಣದ ವರ್ಷ : 2012
ರಕ್ಷಾ ಪುಟ : ಉತ್ತಮ
ಪುಟಗಳು : 637
ಪುಸ್ತಕದ ಗಾತ್ರ : 1/8 Demy Size
ಕೋಡ್ : 172118

ಕಾದಂಬರಿ ಕರತಲ ರಂಗಭೂಮಿ. ಅಂಗೈಮೇಲಣ ನಾಟಕಶಾಲೆ. ಆದ್ದರಿಂದ ಕಾದಂಬರಿಯನ್ನು ಓದುವ ವಾಚಕರು ನಾಟಕವನ್ನು ನೋಡುವ ಪ್ರೇಕ್ಷಕರೂ ಆಗಬೇಕಾಗುತ್ತದೆ. ಈ ಕಾದಂಬರಿಯನ್ನು ಓದುವವರಲ್ಲಿ ಒಂದು ವಿಜ್ಞಾಪನೆ. ಇದನ್ನು ಕಥೆಯ ಕೋಲಾಹಲಕ್ಕಾಗಿ ಓದಬೇಡಿ. ಸಾವಧಾನವಾಗಿ ಸಚಿತ್ರವಾಗಿ ಸಜೀವವಾಗಿ ಓದಿ. ಇಲ್ಲಿ ಚಿತ್ರಿತವಾಗಿರುವುದು ಮಲೆನಾಡಿನ ಬಾಳಿನ ಕಡಲಿನಲ್ಲಿ ಒಂದು ಹನಿ. ಅನೇಕರಿಗೆ ಅದು ಸಂಪೂರ್ಣವಾಗಿ ಹೊಸ ಪ್ರಪಂಚವಾಗುತ್ತದೆ. ಹೊಸ ಊರಿಗೆ ಹೋಗುವವರು ಅಲ್ಲಿಯ ಜನ ಮತ್ತು ಜೀವನದ ವಿಚಾರಕ್ಕಾಗಿ ತಟಕ್ಕನೆ ಯಾವ ನಿರ್ಣಯಗಳನ್ನೂ ಮಾಡಿಕೊಳ್ಳದೆ ಸ್ವಲ್ಪಕಾಲ ತಾಳ್ಮೆಯಿಂದಿದ್ದು ಕ್ರಮೇಣ ಬಳಕೆಯಿಂದ ಜನರನ್ನೂ ಜೀವನವನ್ನೂ ಪರಿಚಯ ಮಾಡಿಕೊಳ್ಳುವಂತೆ ಈ ಕಾದಂಬರಿಯ ಅರಣ್ಯಜಗತ್ತನ್ನು ಪ್ರವೇಶಿಸುವ ವಾಚಕರು ವರ್ತಿಸಬೇಕಾಗುತ್ತದೆ. ಎಂದರೆ, ಮೊದಲನೆಯ ಸಾರಿ ಓದಿದೊಡನೆ ಎಲ್ಲವನ್ನೂ ಪೂರೈಸಿದೆವು ಎಂದುಕೊಳ್ಳುವವರು, ಮೋಟಾರಿನಲ್ಲಿ ಕುಳಿತು ಒಂದೂರಿನ ಪೂರ್ವದ್ವಾರದಿಂದ ಒಳನುಗ್ಗಿ, ಅದರ ಬೀದಿಗಳಲ್ಲಿ ಸರ್ರನೆ ಸಂಚರಿಸಿ, ಪಶ್ಚಿಮ ದ್ವಾರದಿಂದ ಹೊರಹೊರಟು, ಆ ಊರಿನ ಪೂರ್ಣಪರಿಚಯ ಮಾಡಿಕೊಂಡಿದ್ದೇವೆ ಎನ್ನುವವರಂತೆ ಹಾಸ್ಯಾಸ್ಪದರಾಗುತ್ತಾರೆ. ಈ ಕಾದಂಬರಿಯನ್ನು ರಚಿಸುವಾಗಲೂ, ತರುವಾಯ ಮತ್ತೆ ಮತ್ತೆ ಓದುವಾಗಲೂ ಬಹುವಾಗಿ ಬಂದಿರುವ ರಸಸುಖದಲ್ಲಿ ಒಂದಿನಿತನ್ನಾದರೂ ಇದನ್ನು ಓದುವವರು ಸವಿಯುತ್ತಾರೆಂದು ಗೊತ್ತಾದರೆ ಈ ಕೃತಿ ಸಾರ್ಥಕವಾಗುತ್ತದೆ.

ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ(ಡಿಸೆಂಬರ್ 29, 1904 - ನವೆಂಬರ್ 11, 1994)ನವರು ತಮ್ಮ ಕುವೆಂಪು ಎನ್ನುವ ಕಾವ್ಯನಾಮದಿಂದಲೇ ಪ್ರಸಿದ್ಧರು. 20ನೆಯ ಶತಮಾನದ ಮಹಾನ್ ಕನ್ನಡ ಕವಿ, ಸಾಹಿತಿ ಹಾಗೂ ಮಹಾಮಾನವತಾವಾದಿ. ಕುವೆಂಪು ಅವರು ತಮ್ಮ ಅಮರಕೃತಿ `ಶ್ರೀರಾಮಾಯಣ ದರ್ಶನಂ` ಬರೆದು `ಮಹಾಕಾವ್ಯ`ಯುಗಕ್ಕೆ ಮತ್ತೊಮ್ಮೆ ಮರುಚೇತನ ನೀಡಿದರು. ಈ ಕೃತಿಯು ಕರ್ನಾಟಕ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಅಪರೂಪದ ಕೃತಿಯಾಗಿದೆ. ರಾಷ್ಟ್ರಕವಿ ಪ್ರಶಸ್ತಿಯೊಂದಿಗೆ `ಪದ್ಮವಿಭೂಷಣ` ಪ್ರಶಸ್ತಿ ಪಡೆದಿರುವ ಕನ್ನಡದ ಏಕೈಕ ಕವಿ. ಕುವೆಂಪು ಬರೆದ `ಜಯಭಾರತ ಜನನಿಯ ತನುಜಾತೆ` ನಾಡಗೀತೆಯಾಗಿ ಇಂದು ಸುಪ್ರಸಿದ್ಧವಾಗಿದೆ.

ಕುವೆಂಪು ಅವರು ಗಂಭೀರ ವ್ಯಕ್ತಿ. ಇದು ಎಲ್ಲರಿಗೂ ತಿಳಿದ ವಿಷಯ. ಆದರೆ ಅವರು ಅಷ್ಟೇ ಹಾಸ್ಯಪ್ರಿಯರು ಎನ್ನುವುದು ಹೆಚ್ಚಿಗೆ ತಿಳಿದಿಲ್ಲ. ಕುವೆಂಪು ಅವರ ಪರಿಚಯವನ್ನು ಶ್ರೀ ಟಿ.ಎಸ್.ಗೋಪಾಲ್ ಅವರು ಈ ಪುಸ್ತಕದಲ್ಲಿ ಸೊಗಸಾಗಿ ಮಾಡಿಕೊಟ್ಟಿದ್ದಾರೆ.

uploads/authorimages/546.jpg
ಲೇಖಕರ ಇತರ ಕೃತಿಗಳು
10%
ಶೂದ್ರ ತಪಸ್ವಿ (ನಾಟಕ)
ಕುವೆಂಪು, Kuvempu
Rs. 38    Rs. 34
5%
ವಿಚಾರ ಕ್ರಾಂತಿಗೆ ಆಹ್ವಾನ
ಕುವೆಂಪು, Kuvempu
Rs. 90    Rs. 86
5%
ನವಿಲು (ಕಾವ್ಯ)
ಕುವೆಂಪು, Kuvempu
Rs. 68    Rs. 65
5%
ಪಾಂಚಜನ್ಯ (ಕಾವ್ಯ)
ಕುವೆಂಪು, Kuvempu
Rs. 60    Rs. 57
Best Sellers
ಜುಗಾರಿ ಕ್ರಾಸ್
ಪೂರ್ಣಚಂದ್ರ ತೇಜಸ್ವಿ ಕೆ ಪಿ, Poornachandra Tejasvi K P
Rs. 194/-   Rs. 216
ಪ್ರಕೃತಿ ಚಿಕಿತ್ಸೆ
ಜಿಂದಾಲ್ ಎಸ್ ಆರ್, Jindal N R
Rs. 68/-   Rs. 75
ಗಾಜು ಮೋಜು (ಗಾಜಿನ ಲೋಟದ ಪ್ರಯೋಗಗಳು)
ರಾಘವೇಂದ್ರರಾವ್ ಎಂ ಎಲ್, Ragahvendrarao M L
Rs. 36/-   Rs. 40
ಕನ್ನಡ ಕನ್ನಡಿಗ ಕರ್ನಾಟಕ
ಶೇಷಗಿರಿ ರಾವ್ ಎಲ್ ಎಸ್, Sheshagiri Rao L S
Rs. 325/-

Latest Books
ಎಸ್ ಎಲ್ ಭೈರಪ್ಪ ಇಷ್ಟೇ : ಸತ್ಯಶೋಧನ ಅಂಕಣ ಬರಹಗಳು
ಹರಿಹರಪ್ರಿಯ, Hariharapriya
Rs. 203/-   Rs. 226
1962 ಯುದ್ಧಕಾಂಡ
ಯಡೂರ ಮಹಾಬಲ, Yadoor Mahabala
Rs. 270/-   Rs. 300
ಕುವೆಂಪು (ವಿಶ್ವಮಾನ್ಯರು)
ಗೋಪಾಲ್ ಟಿ ಎಸ್, Gopal T S
Rs. 27/-   Rs. 30
ಕನ್ನಡನಾಡು ರಸಿಕರ ಕಂಗಳ ಬೀಡು
ಕೆ ಆರ್ ಜಯಶ್ರೀ, K R Jayashree
Rs. 225/-   Rs. 250


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.