|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕಳೆದ ಸಹಸ್ರಮಾನದಲ್ಲಿ ತನ್ನ ಅಭೂತಪೂರ್ವ ಚಿಂತನೆಗಳು, ಸಿದ್ಧಾಂತ ಮತ್ತು ಮಧ್ಯಪ್ರವೇಶದ ಮೂಲಕ ಜಗತ್ತಿನಾದ್ಯಂತ ಪಲ್ಲಟಗಳು ಜರುಗುವುದರಲ್ಲಿ ಪೂರಕ ಪಾತ್ರ ವಹಿಸಿದವರಲ್ಲಿ ಕಾರ್ಲ್ ಮಾರ್ಕ್ಸ್ (1818-1883) ಗಣ್ಯ ಸ್ಥಾನದಲ್ಲಿದ್ದಾನೆ. ಮೊದಲು ಜರ್ಮನಿಯ ತತ್ವಜ್ಞಾನಿ ಹೆಗೆಲ್ನ ಶಿಷ್ಯನಾಗಿದ್ದ ಮಾರ್ಕ್ಸ್ ತರುವಾಯ ಚಾರಿತ್ರಿಕ ಭೌತವಾದ, ಗತಿತಾರ್ಕಿಕ ಭೌತವಾದದಂತಹ ಮಹತ್ವದ ಪರಿಕಲ್ಪನೆಗಳನ್ನು ನೀಡಿ, ಶ್ರಮಿಕವರ್ಗದ ಸಾರಥ್ಯದಲ್ಲಿ ಸಮಸಮಾಜದಂತಹ ಸಿದ್ಧಾಂತದ ಮಂಡನೆ ಮಾತ್ರವಲ್ಲದೆ ಯೂರೋಪಿನ ಹಲವು ದೇಶಗಳಲ್ಲಿ ಕಾರ್ಮಿಕ ಹೋರಾಟಗಳಿಗೆ ಪ್ರೇರಕಶಕ್ತಿಯಾಗಿ ದುಡಿದ.
ಮಾರ್ಕ್ಸ್ ಅನೇಕ ಜ್ಞಾನಕ್ಷೇತ್ರಗಳಲ್ಲಿ ಆಳವಾಗಿ ಅಧ್ಯಯನ ನಡೆಸಿ, ಜೀವದ ಸಂಗಾತಿ ಫ್ರೆಡರಿಕ್ ಏಂಗೆಲ್ಸ್ ಸಹಯೋಗದಲ್ಲಿ ಹಲವು ಮೌಲ್ಯಯುತ ಲೇಖನಗಳನ್ನೂ ಕೃತಿಗಳನ್ನೂ ನೀಡಿದ್ದಾನೆ. ಇವರೀರ್ವರ ‘ಕಮ್ಯುನಿಸ್ಟ್ ಪ್ರಣಾಳಿಕೆ’ ಎಂಬ ಸಣ್ಣ ಕೃತಿ ಪ್ರಪಂಚದ ನೂರಕ್ಕೂ ಹೆಚ್ಚು ಭಾಷೆಗಳಲ್ಲಿ ಪ್ರಕಟಗೊಂಡಿದೆ; ಬೈಬಲ್ಗಿಂತಲೂ ಹೆಚ್ಚು ಮುದ್ರಣಗಳನ್ನು ಕಂಡಿದೆ.
|
| |
|
|
|
|
|
|
|
|
|