|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕರ್ನಾಟಕದ ಪ್ರಾಗೈತಿಹಾಸಿಕ ಚಿತ್ರಕಲೆ ಕುರಿತು ಈವರೆಗೂ ಬಂದಿರುವ ಕೃತಿಗಳು ಬೆರಳೆಣಿಕೆ ಮಾತ್ರ. ಅವುಗಳ ಕೊರತೆಯನ್ನು `ಕರ್ನಾಟಕದ ಆದಿಮ ಚಿತ್ರಕಲೆ` ಸಮರ್ಥವಾಗಿ ತುಂಬಬಲ್ಲದು. ಈ ಕೃತಿಯು ಕರ್ನಾಟಕದಲ್ಲಿ ಈವರೆಗೂ ದಾಖಲಾಗಿರುವ ಬಂಡೆಚಿತ್ರ ನೆಲೆಗಳನ್ನು ಸಮಗ್ರವಾಗಿ ಒಂದೆಡೆ ಕಟ್ಟಿಕೊಟ್ಟಿದೆ. ಬಂಡೆಚಿತ್ರಗಳ ಕ್ಷೇತ್ರಕಾರ್ಯ ಮಾಡುವ ಮತ್ತು ಕ್ಷೇತ್ರಕಾರ್ಯ ಸಂದರ್ಭದಲ್ಲಿ ವಿವಿಧ ಉಪಕರಣಗಳನ್ನು ಬಳಸುವ ವಿಧಾನ ಹಾಗೂ ಕಾಲನಿರ್ಣಯ ಮಾಡುವ ವಿಧಾನಗಳನ್ನು ತಿಳಿಸಿ ಕೊಡುತ್ತದೆ. ಅಲ್ಲದೆ
ಕರ್ನಾಟಕದ ಪ್ರತಿಯೊಂದು ನೆಲೆಯ ಬಗೆಗೆ ಸಂಕ್ಷಿಪ್ತ ವಿವರಗಳನ್ನು ಆಕರ ಸಹಿತ ನೀಡುತ್ತದೆ. ಇದು ಮುಂದಿನ ಅಧ್ಯಯನಕಾರರಿಗೆ ಉಪಯುಕ್ತವಾಗಬಲ್ಲದು.
ಒಟ್ಟಾರೆ, ಇತಿಹಾಸ, ಪುರಾತತ್ವಶಾಸ್ತ್ರ, ಚಿತ್ರಕಲೆ, ಮೊದಲಾದ ಶಿಸ್ತುಗಳ ವಿದ್ವಾಂಸರು, ವಿದ್ಯಾರ್ಥಿಗಳು ಮಾತ್ರವಲ್ಲ; ಹವ್ಯಾಸಿ ಕಲಾಸಕ್ತರು, ಜನಸಾಮಾನ್ಯರು ಕೂಡ ಓದಬಹುದಾದ ಕೃತಿಯಾಗಿದೆ. ಕರ್ನಾಟಕದ ಪ್ರಾಗೈತಿಹಾಸಿಕ ಚಿತ್ರಕಲೆಯ ಹೊಸ ಶೋಧನೆ ಹಾಗೂ ಸಮೀಕ್ಷೆಯನ್ನು ಇದು ಒಳಗೊಂಡಿದೆ. ಜೊತೆಗೆ ಇಲ್ಲಿನ 250ಕ್ಕೂ ಹೆಚ್ಚು ವರ್ಣಚಿತ್ರಗಳು ಓದುಗರಿಗೆ ಹೊಸ ಅನುಭವವನ್ನು ಉಂಟುಮಾಡಬಲ್ಲವು.
|
ಡಾ. ಮೋಹನ ಆರ್. ಅವರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೂಳ್ಯ ಗ್ರಾಮದವರು. 1986ರಲ್ಲಿ ಜನಿಸಿದ ಇವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಮುಗಿಸಿ, ಪುಣೆಯ ಡೆಕ್ಕನ್ ಕಾಲೇಜಿನಿಂದ ಪಿಎಚ್.ಡಿ ಪದವಿ ಪಡೆದಿರುತ್ತಾರೆ. ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಕೆಲಕಾಲ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿರುತ್ತಾರೆ. ಪ್ರಸ್ತುತ UGC ಕೊಡಮಾಡುವ ಸರ್ವಪಲ್ಲಿ ರಾಧಾಕೃಷ್ಣನ್ ಪೋಸ್ಟ್ ಡಾಕ್ಟರಲ್ ಫೆಲೊ ಆಗಿ ಡೆಕ್ಕನ್ ಕಾಲೇಜಿನಲ್ಲಿ ಅಧ್ಯಯನ ನಡೆಸುತ್ತಿದ್ದಾರೆ.
ಪುರಾತತ್ವ ನೆಲೆ ಮತ್ತು ಪ್ರಾಗೈತಿಹಾಸಿಕ ಚಿತ್ರಕಲೆಯ ನಿರಂತರ ಸಂಶೋಧನೆ ಮತ್ತು ಅಧ್ಯಯನದಲ್ಲಿ ತೊಡಗಿರುವ ಇವರು 30ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ 50ಕ್ಕೂ ಹೆಚ್ಚು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಚಾರಸಂಕಿರಣಗಳಲ್ಲಿ ವಿದ್ವತ್ಪೂರ್ಣ ಪ್ರಬಂಧ ಮತ್ತು ಉಪನ್ಯಾಸಗಳನ್ನು ನೀಡಿರುತ್ತಾರೆ.
ಲೇಖಕರಿಗೆ 2015ರಲ್ಲಿ ಗ್ರೇಟ್ ಬ್ರಿಟನ್ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನ ನೆಹರೂ ಪ್ರಶಸ್ತಿ, 2016ರಲ್ಲಿ ತಮಿಳುನಾಡಿನ ತಿರುಚನಾಪಳ್ಳಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಮೊದಲ ಸ್ವತಂತ್ರ ಸಂಶೋಧಕರ ಸಮ್ಮೇಳನದಲ್ಲಿ ಇವರು ಮಂಡಿಸಿದ ಪ್ರಬಂಧಕ್ಕೆ ಅನಿತಾಕುಮಾರ್ ಪ್ರಶಸ್ತಿ ಸಂದಿದೆ. `ಕರ್ನಾಟಕದ ಆದಿಮ ಚಿತ್ರಕಲೆ` ಇವರ ಚೊಚ್ಚಲ ಕೃತಿಯಾಗಿದೆ.
|
|
| |
|
|
|
|
|
|
|
|