Items
0
Total
  0.00 
Welcome Guest.

 
Rs. 250    
10%
Rs. 225/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 392
ಪುಸ್ತಕದ ಗಾತ್ರ : 1/8 Demy Size
ಕೋಡ್ : 176865

ಶ್ರಮಣ ಧಾರೆಗಳು ಎಂದು ಗುರುತಿಸಲಾಗುವ ವೈದಿಕೇತರ ಚಿಂತನಾ ಪರಂಪರೆಯ ಲೋಕವು ಅಧ್ಯಯನ ವಂಚಿತವಾಗಿಯೇ ಉಳಿದಿದೆ. ಭಾರತದ ಸಂಸ್ಕೃತಿ, ಜೀವಂತಿಕೆಗಳನ್ನು ವಿಭಿನ್ನ ನೆಲೆಗಳಲ್ಲಿ ಹಿಡಿದಿಟ್ಟ ಹಲವು ಪಂಥಗಳು, ಚಿಂತನಾ ಧಾರೆಗಳು ಕಟ್ಟಿಕೊಟ್ಟ ಚಿಂತನೆಗಳು ಮತ್ತು ಅವು ತೋರಿದ ಪರ್ಯಾಯದ ದಾರಿಗಳನ್ನು ಗಮನಿಸುವುದೇ ಒಂದು ಸೊಗಸಾದ ಅನುಭವ. ಮುಖ್ಯವಾಹಿನಿಯಿಂದ ದೂರ ಉಳಿದಂತೆ ಭಾಸವಾಗುವ ಆದರೆ ಜನರ ಬದುಕಿನ ಅಂಗವೇ ಆಗಿರುವ ಈ ಚಿಂತನಧಾರೆಗಳ ಸಾಂಸ್ಕೃತಿಕ ಮಹತ್ವವನ್ನು ದಾಖಲಿಸುವ, ವಿಶ್ಲೇಷಿಸುವ ಮಹತ್ವದ ಕೃತಿಯಿದು. ಅಖಿಲ ಭಾರತ ವ್ಯಾಪ್ತಿಯ ನಾಥಪಂಥವು ಭಾರತೀಯ ಚಿಂತನಧಾರೆಯ ಪ್ರಮುಖ ಸ್ರೋತಗಳಲ್ಲಿ ಒಂದು. ದೇಹವನ್ನೇ ಸಾಧನೆಯ ಪ್ರಮುಖ ಸಾಧನ ಆಗಿಸಿಕೊಂಡ ಈ ಚಿಂತನೆ ಧಾರೆಯ ಪ್ರಮುಖರು ಗೋರಖನಾಥ ಮತ್ತು ಅವನ ಗುರು ಮಚ್ಛೇಂದ್ರನಾಥ. ಇವರಿಬ್ಬರು ಮೂಲಕ ಆರಂಭವಾದ ನಾಥಪರಂಪರೆಯು ದೇಶದ ಉದ್ದಗಲಕ್ಕೂ ಹರಡಿದೆ. ಇಂತಹ ಪ್ರಮುಖ ಪರಂಪರೆಯು ಕರ್ನಾಟಕದಲ್ಲಿಯೂ ತನ್ನದೇ ನೆಲೆ ಕಂಡುಕೊಂಡಿದೆ. ನಾಥಪಂಥವು ವಚನ ಸಾಹಿತ್ಯದ ಮೇಲೆ ಬೀರಿದ ಪ್ರಭಾವನ ಮತ್ತು ಉಂಟು ಮಾಡಿದ ಪರಿಣಾಮಗಳು ಅನನ್ಯ. ಅಖಿಲ ಭಾರತ ವ್ಯಾಪ್ತಿಯ ಚಿಂತನೆಗಳನ್ನು ಕನ್ನಡದ ದೇಸಿ ನೆಲೆಗೆ ತಂದ ಮತ್ತು ಪರಸ್ಪರ ಮುಖಾಮುಖಿ ಹಾಗೂ ಅನುಸಂಧಾನದ ಮೂಲಕ ಹುಟ್ಟಿದ ಹೊಸ ಯೋಚನಾ ಕ್ರಮಗಳ ಅಧ್ಯಯನವನ್ನು ಈ ಕೃತಿಯು ಒಳಗೊಂಡಿದೆ. ಕನ್ನಡದ ವಿದ್ವಾಂಸ ಲೋಕವು ನಾಥಪಂಥವನ್ನು ಕಡೆಗಣಿಸಿರಲಿಲ್ಲ ಎನ್ನುವುದಕ್ಕೆ ಹಿರಿಯ ಸಂಶೋಧಕರಾದ ಕೆ.ಜಿ. ಕುಂದಣಗಾರ ಮತ್ತು ಕಪಟರಾಳ ಕೃಷ್ಣರಾವ್ ಅವರು ಬರೆದ ಲೇಖನಳು ಹಾಗೂ ನಡೆಸಿದ ಚರ್ಚೆಯೇ ಸಾಕ್ಷಿ. ಮಹಾರಾಷ್ಟ್ರದ ಹಿರಿಯ ಸಂಶೋಧಕ ರಾಮಚಂದ್ರ ಚಿಂತಾಮಣಿ ಢೇರೆ ಅವರು ನಾಥ ಸಂಪ್ರದಾಯವನ್ನು ಕುರಿತು ಪ್ರಮುಖ ಗ್ರಂಥ ಪ್ರಕಟಿಸಿದ್ದಾರೆ. ಕನ್ನಡದಲ್ಲಿ ರಹಮತ್ ತರೀಕೆರೆ ಅವರು ನಾಥಪಂಥದ ಉಗಮ, ಬೆಳವಣಿಗೆ, ಕಂಡುಕೊಂಡ ನೆಲೆ ಹಾಗೂ ಕನ್ನಡದ ಸಂಸ್ಕೃತಿಗೆ ಮುಖಾಮುಖಿಯಾಗಿ ರೂಪಿಸಿದ ಚಿಂತನ ಕ್ರಮದ ಬಗ್ಗೆ ಸಂಶೋಧನೆ ನಡೆಸಿ ಪ್ರಕಟಿಸಿದ್ದಾರೆ. ರಹಮತ್ ಅವರ ಅಧ್ಯಯನ ಮತ್ತು ಸಂಶೋಧನೆಯ ನಂತರ ನಾಥಪಂಥದ ಬಗ್ಗೆ ಮತ್ತಷ್ಟು ಅಧ್ಯಯನ ನಡೆದವು. ಬಸವರಾಜ ಕಲ್ಗುಡಿ ಹಾಗೂ ಉದಯಕುಮಾರ್ ಹಬ್ಬು ಕೂಡ ನಾಥಪಂಥದ ಬಗ್ಗೆ ಬರೆದಿದ್ದಾರೆ. ರಹಮತ್ ಅವರ ನಾಥಪಂಥದ ಅಧ್ಯಯನವು ಕನ್ನಡದ ಸಂಸ್ಕೃತಿ ಚಿಂತನೆಯಲ್ಲಿ ಒಂದು ಮೈಲಿಗಲ್ಲು.

ಶ್ರೀ ರಹಮತ್ ತರೀಕೆರೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರು. ಪತ್ರಿಕೆಗಳಲ್ಲಿ ಪ್ರಸಿದ್ಧ ಅಂಕಣಕಾರರು. ಸಂಶೋಧನೆ, ಸಂಪಾದನೆ, ಸಾಹಿತ್ಯ ವಿಮರ್ಶೆ, ಅನುವಾದ ಹಾಗೂ ಇನ್ನಿತರ ಅಧ್ಯಯನ ಕ್ಷೇತ್ರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರು. ಇವರ ಪ್ರವಾಸ ಕಥನಗಳಾದ ‘ಅಂಡಮಾನ್ ಕನಸು’, ‘ಕದಳಿ ಹೊಕ್ಕು ಬಂದೆ’ ಹಾಗೂ ವೈಚಾರಿಕ ಕೃತಿ ‘ಧರ್ಮಪರೀಕ್ಷೆ’ ನವಕರ್ನಾಟಕದಿಂದ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
10%
ಸಂಶೋಧನ ಮೀಮಾಂಸೆ
ರಹಮತ್ ತರೀಕೆರೆ, Rahamath Tarikere
Rs. 200    Rs. 180
10%
ಕದಳಿ ಹೊಕ್ಕು ಬಂದೆ
ರಹಮತ್ ತರೀಕೆರೆ, Rahamath Tarikere
Rs. 110    Rs. 99
10%
ಸಾಂಸ್ಕೃತಿಕ ಅಧ್ಯಯನ
ರಹಮತ್ ತರೀಕೆರೆ, Rahamath Tarikere
Rs. 200    Rs. 180
10%
ಪ್ರತಿಸಂಸ್ಕೃತಿ
ರಹಮತ್ ತರೀಕೆರೆ, Rahamath Tarikere
Rs. 150    Rs. 135
Best Sellers
ಖಲೀಲ್ ಗಿಬ್ರಾನ್ ಪ್ರೇಮ ಪತ್ರಗಳು
ಖಲೀಲ್ ಗಿಬ್ರಾನ್, Kahlil Gibran
Rs. 108/-   Rs. 120
ಸ್ಮೃತಿ ಪಟಲದಿಂದ-ಸಂಪುಟ-ಭಾಗ-2
ಶಿವರಾಮ ಕಾರಂತ ಕೆ, Shivarama Karantha K
Rs. 293/-   Rs. 325
ನರಮಂಡಲ ಬ್ರಹ್ಮಾಂಡ
ನಾಗೇಶ ಹೆಗಡೆ, Nagesh Hegde
Rs. 81/-   Rs. 90
ಶ್ರೀ ಕೃಷ್ಣಾವತಾರ-(ಪೂರ್ವಾಧ ಮತ್ತು ಉತ್ತರಾರ್ಧ)-ಭಾಗ- 1-2- (Hard Cover)
ನಾರಾಯಣಾಚಾರ್ಯ ಕೆ ಎಸ್, Narayanacharya K S
Rs. 950/-   Rs. 1000

Latest Books
ಹುಣಿಸೆ ಮರದ ಕತೆ : ಕಾದಂಬರಿ
ಸುಂದರ ರಾಮಸ್ವಾಮಿ, Sundara Ramaswamy
Rs. 135/-   Rs. 150
ಹುಲಿಯ ನೆನಪುಗಳು - ಬುಲೆಟ್ ಸವಾರಿ ಭಾಗ - ೨ (ಬಿ. ಬಿ ಅಶೋಕ್ ಕುಮರ್ ಅವರ ಪೊಲೀಸ್ ವೃತ್ತಾಂತಗಳು)
ಅಶೋಕ್ ಕುಮಾರ್ ಬಿ ಬಿ, Ashok Kumar B B
Rs. 171/-   Rs. 180
ವಸಂತ ಸುಂದರಿ - ಪ್ರಾಚೀನ ಭಾರತದ ಐತಿಹಾಸಿಕ ಕಾದಂಬರಿ
ಬದರೀಪ್ರಸಾದ್ ರಸ್ತೋಗಿ, Bhadariprasad Rostogi
Rs. 126/-   Rs. 140
ಅಘೋರಿಗಳ ಲೋಕದಲ್ಲಿ : ನಿಷಿದ್ಧ ಪ್ರಪಂಚದ ಅನುಭವ
ಸಂತೋಷಕುಮಾರ ಮೆಹೆಂದಳೆ, Santoshkumar Mehandale
Rs. 333/-   Rs. 350


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.