Items
0
Total
  0.00 
Welcome Guest.

 
Rs. 140    
10%
Rs. 126/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಸಂತ ಪ್ರಕಾಶನ, Vasantha Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 182
ಪುಸ್ತಕದ ಗಾತ್ರ : 1/8 Demy Size
ಕೋಡ್ : 183141

ಕನ್ನಡ ನಾಡಿನ ಶಿಕ್ಷಣ ಪದ್ಧತಿ ನಡೆದು ಬಂದ ದಾರಿ ಅತ್ಯಂತ ವಿಸ್ಮಯಕಾರಿ. ಅದರ ಹೆಜ್ಜೆಗಳನ್ನು ಕ್ರಿಸ್ತಶಕಪೂರ್ವ ಮೂರನೆಯ ಶತಮಾನದಿಂದಲೇ ಗುರುತಿಸಬಹುದಾಗಿದೆ. ಮೊದಲು ಮೌಖಿಕವಾಗಿಯೇ ಮುಂದುವರಿದ ಶಿಕ್ಷಣ, ಭಾಷೆ, ಅಕ್ಷರಗಳ ಉದಯ ಮತ್ತು ಬೆಳವಣಿಗೆಯೊಂದಿಗೆ ಲಿಖಿತ ರೂಪವನ್ನು ತಾಳಿತು. ಮಳಲು, ತಾಳೆಗರಿ, ಕಡತಗಳನ್ನು ಶಿಕ್ಷಣಕ್ಕಾಗಿ ಅಳವಡಿಸಿಕೊಂಡದ್ದರಿಂದ ಅದರ ಪ್ರಸಾರ, ವ್ಯಾಪ್ತಿಗಳು ಸಾಧ್ಯವಾದವು. ಕೇವಲ ಅಕ್ಷರಾಭ್ಯಾಸವನ್ನೇ ಶಿಕ್ಷಣವೆಂದು ಹಿಂದಿನವರು ಪರಿಗಣಿಸಿರಲಿಲ್ಲ. ವ್ಯಕ್ತಿಯ ಹೊಣೆಗಾರಿಕೆಗಳು ವಿದ್ಯಾಮಾಪನದ ಪ್ರಕಾರಗಳಾಗಿದ್ದವು. ಅಂತೆಯೇ ಗುರುಹಿರಿಯರ ಮೂಲಕ ಸಂಘ-ಸಂಸ್ಥೆಗಳು, ಮಠ-ದೇವಾಲಯಗಳು ಅಂಥ ಗಟ್ಟಿಯಾದ ವಿದ್ಯಾದಾನದ ಏರ್ಪಾಡು ಮಾಡಿಕೊಂಡವು. ವಚನಕಾರರು, ಹರಿದಾಸರು, ಕೀರ್ತನಕಾರರು, ಪೌರಾಣಿಕರು ಕೂಡ ಒಳ್ಳೆಯ ಶಿಕ್ಷಕರೆನಿಸಿಕೊಂಡರು...
ಆದರೆ ದುರ್ದೈವದಿಂದ ಬ್ರಿಟಿಷ್ ಆಡಳಿತಗಾರರಿಗೆ ದೇಶಿ ಶಿಕ್ಷಣ ಪದ್ಧತಿಯ
ಆಳದ ಅರಿವು ಆಗಲೇ ಇಲ್ಲ. ಅಂತೆಯೇ ಕಟ್ಟಡ, ಪರಿಕರಗಳು, ಸಿಬ್ಬಂದಿ ಮುಂತಾದವುಗಳಿಂದ `ಸುಸಜ್ಜಿತ`ವಾದ ತಮ್ಮ ಪದ್ಧತಿಯ ಶಿಕ್ಷಣವನ್ನು ಭಾರತೀಯರಿಗೆ ಕೊಡಲು ನಿರ್ಧರಿಸಿದರು.
ಲಾರ್ಡ್ ವಿಲಿಯಂ ಬೆಂಟಿಂಕ್‌ನು ಭಾರತದ ಗವರ್ನರ್ ಜನರಲ್‌ನಾಗಿ ಕ್ರಿ.ಶ.೧೮೨೮ರಲ್ಲಿ ಅಧಿಕಾರ ವಹಿಸಿಕೊಂಡಾಗ ಭಾರತೀಯರಿಗೆ
ಪಾಶ್ಚಾತ್ಯ ಶಿಕ್ಷಣ ವ್ಯವಸ್ಥೆಯ ನಾಂದಿಯಾಯಿತು.
ಡಾ. ಜ್ಯೋತ್ಸ್ನಾ ಕಾಮತರ ಈ ಕೃತಿ ಕರ್ನಾಟಕ ಶಿಕ್ಷಣ ಪರಂಪರೆಗೆ ಸಂಬಂಧಿಸಿದ ಏಕೈಕ ಗ್ರಂಥ; ಬ್ರಿಟಿಷರ ಕಾಲದಲ್ಲಿ ರೂಪುಗೊಂಡ ಪಾಶ್ಚಾತ್ಯ ಶಿಕ್ಷಣ ವ್ಯವಸ್ಥೆಗೂ ಮುನ್ನ ನಮ್ಮಲ್ಲಿ ಎಂಥ ಶಿಕ್ಷಣ ಪರಂಪರೆಯಿತ್ತು ಎಂಬುದನ್ನು ಹಲವು ಆಕರಗಳ ಮೂಲಕ ಕೂಲಂಕಶವಾಗಿ ವಿಶ್ಲೇಷಿಸುವ ಅನನ್ಯ ಪ್ರಯತ್ನ. ಹಾಗಾಗಿ ಶಿಕ್ಷಣ ರಂಗದಲ್ಲಿ ಆಸಕ್ತಿಯುಳ್ಳ ವಿದ್ವಾಂಸರಿಗೂ ಶಿಕ್ಷಕರಿಗೂ ಸಾಮಾನ್ಯ ಓದುಗರಿಗೂ ತೀರ ಉಪಯುಕ್ತವಾಗಬಲ್ಲ ಅಪರೂಪದ ಗ್ರಂಥ ಇದು.

ಲೇಖಕರ ಇತರ ಕೃತಿಗಳು
Rs. 400    Rs. 360
Best Sellers
ರಾಹುಲ ಸಾಂಕೃತ್ಯಾಯನ (ವಿಶ್ವಮಾನ್ಯರು)
ಗೀತಾ ಶೆಣೈ , Geetha Shenoy
Rs. 23/-   Rs. 25
ಮಾತಿನ ಮಂಟಪದ ಮುಂದೋರಣ : ತಾಳಮದ್ದಲೆ ತಂಡಗಳು ಒಂದು ಸಮೀಕ್ಷೆ
ಶಂಕರ ಕಾಶಿನಾಥ ಶಾಸ್ತ್ರಿ, Shankara Kashinatha Shastri
Rs. 180/-   Rs. 200
ಕಿವುಡು ವನದೇವತೆ (ವಿಶ್ವ ಕಥಾ ಕೋಶ ಮಾಲಿಕೆ)
ನಿರಂಜನ, Niranjana
Rs. 68/-   Rs. 75
ಕೈಲಾಸಂ joಕ್ಸೂ... Sonಗ್ಸೂ..(Kailasam Jokes Songs)
ಕೇಶವರಾವ್ ಬಿ ಎಸ್, Keshava Rao B S
Rs. 36/-   Rs. 40

Latest Books
ಮಣೆಗಾರ : ಒಂದು ಆತ್ಮಕಥೆ
ತುಂಬಾಡಿ ರಾಮಯ್ಯ, Thumbadi Ramaiah
Rs. 135/-   Rs. 150
ಇನ್ನು ಎಲ್ಲಿಗೋಟ (ಪ್ರವಾಸ ಟಿಪ್ಪಣಿಗಳು)
ಉಮಾ ರಾವ್, Uma Rao
Rs. 117/-   Rs. 130
ಇರಾವತಿ ಕರ್ವೆ (ವಿಶ್ವಮಾನ್ಯರು
ಗೀತಾ ಶೆಣೈ , Geetha Shenoy
Rs. 27/-   Rs. 30
ಫ್ರೆಡರಿಕ್ ಎಂಗಲ್ಸ್ : ಜೀವನ - ಚಿಂತನೆ
ಕಕ್ಕಿಲ್ಲಾಯ ಬಿ ವಿ, Kakkilaya B V
Rs. 240/-   Rs. 300


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.