|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕಷ್ಟ ಮನಸ್ಸಿಗೆ ಆದರೆ ಕಾಯಿಲೆ ಕಾಣಿಸಿಕೊಳ್ಳುವುದು ದೇಹಕ್ಕೆ. ಹೆಂಡತಿಯೊಂದಿಗೆ ವಿರಸ. ಅದರ ಪರಿಣಾಮ ತಲೆನೋವು. ಪರೀಕ್ಷೆಯ ಭಯ, ತತ್ಪರಿಣಾಮವಾಗಿ ಕಾಣಿಸಿಕೊಂಡದ್ದು ಏನು? ವಾಂತಿ ಭೇದಿ. ಮದುವೆಯಾಗುವುದು ಇಷ್ಟವಿಲ್ಲ, ಪ್ರತಿಭಟಿಸಿದರೂ ಯಾರೂ ಕೇಳರು; ಪರಿಣಾಮ ಪದೇ ಪದೇ ಪ್ರಜ್ಞೆ ತಪ್ಪಿ ಬೀಳುವುದು. ಹಸ್ತಮೈಥುನದಿಂದ ವೀರ್ಯವನ್ನು ಕಳೆದುಕೊಂಡ ಪರಿತಾಪ, ಆಮೇಲೆ ಕಾಣಿಸಿಕೊಂಡದ್ದು ಪೆಪ್ಟಿಕ್ ಅಲ್ಸರ್. ದೀರ್ಘಕಾಲದ ಮಾನಸಿಕ ಒತ್ತಡ, ದೇಹದ ಒಂದು ಅಂಗಾಂಗವನ್ನು ಹೆಚ್ಚು ಸವೆಸಿ ರೋಗಗ್ರಸ್ತವನ್ನಾಗಿ ಮಾಡುತ್ತದೆ. ಈ ಗುಂಪಿನ ಕಾಯಿಲೆಗಳನ್ನು ಮನೋದೈಹಿಕ ರೋಗಗಳೆಂದು ಕರೆಯುತ್ತಾರೆ. ಮನೋಕ್ಲೇಶ - ಮಾನಸಿಕ ಒತ್ತಡದಿಂದ ಬರುವ ದೈಹಿಕ ರೋಗ ಲಕ್ಷಣಗಳು ಮತ್ತು ದೈಹಿಕ ರೋಗಗಳ ಬಗ್ಗೆ ಈ ಪುಸ್ತಕ ನಿಮಗೆ ಎಲ್ಲ ಮಾಹಿತಿ ನೀಡುತ್ತದೆ. ಮಾನಸಿಕ ಆರೋಗ್ಯದಿಂದ ದೇಹ ಆರೋಗ್ಯವನ್ನು ಪಡೆಯುತ್ತದೆ. ಮನೋಲ್ಲಾಸ - ಮಾನಸಿಕ ಆರೋಗ್ಯಕ್ಕೆ ಮಾರ್ಗಗಳನ್ನು ಈ ಪುಸ್ತಕ ತಿಳಿಸಿ ಹೇಳುತ್ತದೆ. ತಡವೇಕೆ ಕೊಂಡು ಓದಿ.
|
ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಲೇಖಕರು ಮತ್ತು ಸಂವಹನಕಾರರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. `ವ್ಯಕ್ತಿ ವಿಕಸನ ಮಾಲೆ`ಯ ಸಂಪಾದಕರೂ ಆಗಿರುವ ಇವರ ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ಮತ್ತು ಕನ್ನಡದಲ್ಲಿ ಒಟ್ಟು 180ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ್ದಾರೆ. ಇವರ ಸಾಧನೆಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.
|
|
| |
|
|
|
|
|
|
|
|
|