Items
0
Total
  0.00 
Welcome Guest.

 
Rs. 50    
10%
Rs. 45/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2018
ರಕ್ಷಾ ಪುಟ : ಸಾದಾ
ಪುಟಗಳು : 50
ಪುಸ್ತಕದ ಗಾತ್ರ : 1/8 Demy Size
ಕೋಡ್ : 113257

ವಿ.ಕೃ. ಗೋಕಾಕ್ ಅವರ ಉಪನ್ಯಾಸದ ಶಿರೋನಾಮೆ ‘ಕವನಗಳಲ್ಲಿ ಸಂಕೀರ್ಣತೆ’ ಬೇಂದ್ರೆಯವರ ‘ಓ ಹಾಡೆ’ ಕುವೆಂಪು ಅವರ ‘ಅಧಿದೇವತಾ ಆವಿರ್ಭೂತಿ’ ಮತ್ತು ಗೋಪಾಲಕೃಷ್ಣ ಅಡಿಗರ ‘ಭೂತ’ ಎಂಬ ಈ ಮೂರು ಕವನಗಳನ್ನಾಯ್ದುಕೊಂಡು, ಸಂಕೀರ್ಣತೆಯ ಸ್ವರೂಪವನ್ನು ಸಮರ್ಪಕವಾಗಿ ವಿವರಿಸಿದ್ದಾರೆ. ಕಾವ್ಯದ ವಿವಿಧ ಅಂಗಗಳಾದ ಭಾಷೆ, ಛಂದಸ್ಸು, ಅರ್ಥ, ಅಲಂಕಾರ, ಶಿಲ್ಪ ಭಾವ, ಜೀವನದರ್ಶನಗಳಲ್ಲಿ ಸಂಕೀರ್ಣತೆ ಕಾಣಿಸಿಕೊಳ್ಳುತ್ತದೆಂದೂ, ಅದು ಯಾವೊಂದು ಮಾರ್ಗದ ಸ್ವತ್ತಲ್ಲವೆಂದೂ ಸ್ಪಷ್ಟವಾಗಿ, ಸಂದೇಹದೂರವಾಗಿ ವಿವರಿಸಿದ್ದಾರೆ. ಪ್ರಾಯೋಗಿಕ ವಿಮರ್ಶೆಯಲ್ಲಿ ತೊಡಗಬೇಕೆನ್ನುವವರಿಗೆ ಈ ಕಿರುಹೊತ್ತಿಗೆ ಮಾರ್ಗದರ್ಶನವಾಗುತ್ತದೆಂದು ಧಾರಾಳವಾಗಿ ಹೇಳಬಹುದಾಗಿದೆ.

- ದೇಜಗೌ
(ಮುನ್ನುಡಿಯಿಂದ)
....................................................
ವಿ. ಕೃ. ಗೋಕಾಕ್ ಕನ್ನಡ ಸಾಹಿತ್ಯ ಕಂಡ ಅಪರೂಪದ ಕವಿ, ಚಿಂತಕ, ಶಿಕ್ಷಣ
ತಜ್ಞ, ತತ್ವಶಾಸ್ತ್ರಜ್ಞ. ಅವರ ಕಾವ್ಯದಲ್ಲಿ ಹೇಗೋ ಹಾಗೆಯೇ ಗದ್ಯದಲ್ಲಿಯೂ ಸಹ
ತಾತ್ವಿಕ ವಿಚಾರಗಳನ್ನು ಸ್ಪಷ್ಟವಾಗಿ, ನೇರವಾಗಿ ಮಂಡಿಸುತ್ತಾರೆ. ಹೀಗೊಂದು
ಚಿಂತನಾಕ್ರಮ, ವಿಚಾರಶೀಲತೆ ಇದೆ ಎಂಬುದು ನಮ್ಮ ಮನಸ್ಸಿಗೆ ಬರುತ್ತದೆ.
ತಮ್ಮೆಲ್ಲ ಕೆಲಸಗಳ ಜೊತೆಗೆ ಗೋಕಾಕರು ಬರೆದ ಸಾಹಿತ್ಯ ರಾಶಿ ಕಡಿಮೆಯೇನಲ್ಲ.
ಅವು ಹೊಸ ಜನಾಂಗಕ್ಕೆ ನಿರಂತರವಾಗಿ ಮುಟ್ಟಬೇಕೆಂಬ ಅಭಿಲಾಶೆಯಿಂದ ಅಭಿನವ
ಅವರ ಎಲ್ಲ ಕೃತಿಗಳನ್ನು ಪ್ರಕಟಿಸಲು ಮುಂದಾಗಿದೆ...
1978ರಲ್ಲಿ ಪ್ರಥಮ ಮುದ್ರಣವಾಗಿದ್ದ ಈ ಕೃತಿ ಅಭಿನವದಿಂದ ಮರುಮುದ್ರಣಗೊಂಡಿದೆ...

ವಿನಾಯಕ ಕೃಷ್ಣ ಗೋಕಾಕರು (1909-1992) ವಿ.ಕೃ.ಗೋಕಾಕ್ ಎಂದೇ ಪರಿಚಿತರು. ಇದುವರೆಗೂ ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ. ಮೊದಲ ನಾಲ್ಕು ಪ್ರಶಸ್ತಿಗಳು ನವೋದಯ ಪರ್ವ ಕಾಲದ ಮೇರು ಸಾಹಿತಿಗಳಿಗೆ ಸಂದರೆ(ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿ) ನಂತರದ ನಾಲ್ಕು ಪ್ರಶಸ್ತಿಗಳು ನವ್ಯೋತ್ತರ ಕಾಲದ, ಆಧುನಿಕ ಸಮಕಾಲೀನ ಕನ್ನಡ ಸಾಹಿತ್ಯದ ಉದ್ದಾಮ ಸಾಹಿತಿಗಳಿಗೆ ದೊರೆತಿವೆ (ವಿ.ಕೃ.ಗೋಕಾಕ್, ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಕಂಬಾರ). ವಿ.ಕೃ.ಗೋಕಾಕರು ನವ್ಯೋತ್ತರ ಕನ್ನಡ ಸಾಹಿತ್ಯ ದಿಗಂತದ ಅರುಣೋದಯವೆನ್ನಬಹುದು.

ವಿನಾಯಕ ಕೃಷ್ಣ ಗೋಕಾಕರು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ಬಿ.ಎ. ಹಾಗೂ ಎಂ.ಎ.ನಲ್ಲಿ ಪ್ರಥಮ ರ‍್ಯಾಂಕ್ ಪಡೆದರು. ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ಅಧ್ಯಾಪಕ ಕೆಲಸವನ್ನು ಮಾಡಿ ಅನಂತರ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣವನ್ನು ಪಡೆದರು. ವಿದೇಶದಿಂದ ಹಿಂದಿರುಗಿ ಸಾಂಗಲಿಯ ವೆಲ್ಲಿಂಗ್ಡನ್ ಕಾಲೇಜಿನ ಪ್ರಾಂಶುಪಾಲರಾದರು. ಅನಂತರ ಹೈದರಾಬಾದ್, ಗುಜರಾತ್ ಹಾಗೂ ಕೊಲ್ಹಾಪುರಗಳಲ್ಲಿ ಪ್ರಾಂಶುಪಾಲ ವೃತ್ತಿಯನ್ನು ನಿಭಾಯಿಸಿ ಕೊನೆಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದರು. ಗೋಕಾಕರ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರವು `ಪದ್ಮಶ್ರೀ` ಪ್ರಶಸ್ತಿ ನೀಡಿ ಗೌರವಿಸಿದೆ.

uploads/authorimages/962.jpg
ಲೇಖಕರ ಇತರ ಕೃತಿಗಳು
10%
ಸಮುದ್ರದಾಚೆಯಿಂದ : ಪ್ರವಾಸ ....
ಗೋಕಾಕ ವಿ ಕೃ, Gokak V K
Rs. 200    Rs. 180
10%
ಸಮುದ್ರದೀಚೆಯಿಂದ (ಪ್ರವಾಸ ಕಥನ)
ಗೋಕಾಕ ವಿ ಕೃ, Gokak V K
Rs. 100    Rs. 90
10%
ನವ್ಯ ಕಾವ್ಯ : ....
ಗೋಕಾಕ ವಿ ಕೃ, Gokak V K
Rs. 400    Rs. 360
10%
ಇಂದಿನ ಕನ್ನಡ ಕಾವ್ಯದ ....
ಗೋಕಾಕ ವಿ ಕೃ, Gokak V K
Rs. 150    Rs. 135
Best Sellers
ಸಂಪೂರ್ಣ ರಾಮಾಯಣ
ಅನಂತರಾಮ ರಾವ್ ಕೆ, Anantharama Rao K
Rs. 456/-   Rs. 480
ಕ್ಷಣ ಹೊತ್ತು ಆಣಿಮುತ್ತು - ೫
ಷಡಕ್ಷರಿ ಎಸ್, Shadakshari S
Rs. 88/-   Rs. 98
ಮನಸ್ಸು ಮತ್ತು ಅದರ ನಿಗ್ರಹ
ಸ್ವಾಮಿ ಬುಧಾನಂದ, Swami Budhananda
Rs. 32/-   Rs. 35
ಶ್ರೀರಂಗ (ಜೀವನ ಮತ್ತು ಸಾಧನೆ)
ಸುಮಿತ್ರಾಬಾಯಿ ಬಿ ಎನ್, Sumithra Bai B N
Rs. 63/-   Rs. 70

Latest Books
ಗಾಂಧಿ ಮಹಾತ್ಮರಾದುದು ಭಾಗ - 1, 2 (ದಕ್ಷಿಣ ಆಫ್ರಿಕಾ ದಿನಗಳು) (Combo)
ರಾಮಚಂದ್ರ ಗುಹ, Ramachandra Guha
Rs. 502/-   Rs. 590
ದೈನಿಕ ವರದಿಗಾರಿಕೆ
ನಾಗೇಂದ್ರ ಡಾ, Nagendra Dr
Rs. 126/-   Rs. 140
ಮನೋರೋಗಿಗಳ ಆರೈಕೆ ಹೇಗೆ
ಚಂದ್ರಶೇಖರ್ ಸಿ ಆರ್, Chandrashekar C R
Rs. 86/-   Rs. 95
ಸೂಲಾಡಿ ಬಂದೋ ತಿರುತಿರುಗೀ : ಬಾಳ ಕಥನ
ಪ್ರೊ ಕೆ ಸುಮಿತ್ರಾ ಬಾಯಿ, Prof K Sumitra Bai
Rs. 252/-   Rs. 280


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.