|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಸ್ವಾತಂತ್ರ್ಯಪೂರ್ವ ಭಾರತದಲ್ಲಿ ವಿದ್ಯೆಯನ್ನು ಕಲಿಯುವ ಹಕ್ಕು ಮೇಲ್ವರ್ಗದವರಿಗೆ ಮಾತ್ರವಿದ್ದಾಗ, ಕಯ್ಯಾರರಿಗೆ ಸಂಸ್ಕೃತವನ್ನು ಕಲಿಸಿದ ದಿಟ್ಟ ‘ಅನಂತಭಟ್ಟ‘ ಎನ್ನುವ ಅಧ್ಯಾಪಕರು. ಕಯ್ಯಾರರು ತಮಗೆ ರಾಷ್ಟ್ರಪ್ರಶಸ್ತಿ ದೊರೆತಾಗ, ಆ ಹಣದಲ್ಲಿ ‘ಅನಂತಭಟ್ಟ ಸ್ಮಾರಕ ಶಾಲೆ‘ಯನ್ನು ಆರಂಭಿಸಿ ‘ಗುರುದಕ್ಷಿಣೆ‘ಯನ್ನರ್ಪಿಸುತ್ತಾರೆ. ಅನಂತಭಟ್ಟರು ತಮ್ಮನ್ನು ಬೆಳಗಿಸಿದಂತೆ, ಕಯ್ಯಾರರು ಸಾವಿರಾರು ಮಕ್ಕಳನ್ನು ಬೆಳಗಿಸುತ್ತಾರೆ. ಬಾವಿಗಳನ್ನು ತೋಡಿಸಿ, ನಲ್ಲಿಗಳನ್ನು ಹಾಕಿಸುತ್ತಾರೆ. ಕೃಷಿಕರಿಗೆ ಅಣೆಕಟ್ಟುಗಳನ್ನು ಕಟ್ಟಿಸುತ್ತಾರೆ. ಪತ್ರಕರ್ತರಾಗುತ್ತಾರೆ. ಗ್ರಂಥಾಲಯಗಳನ್ನಾರಂಭಿಸುತ್ತಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗುತ್ತಾರೆ. ಹರಿಜನೋದ್ಧಾರ ಹಾಗೂ ಗ್ರಾಮೋದ್ಧಾರಗಳನ್ನು ಮಾಡುತ್ತಾರೆ. ತೀರಾ ಹಿಂದುಳಿದ ಕೊರಗರಿಗೆ, ವಿದ್ಯಾರ್ಥಿಗಳಿಗೆ ವಸತಿ ಶಾಲೆಯನ್ನು ಸ್ಥಾಪಿಸುತ್ತಾರೆ. ಕೃಷಿಯನ್ನಾರಂಭಿಸಿ ‘ಕೆಸರಿನಿಂದಮೃತಕಲಶವನ್ನೆತ್ತಿ‘ ತೋರಿಸುತ್ತಾರೆ. ಕನ್ನಡದಲ್ಲಿ ವಿಪುಲ ಸಾಹಿತ್ಯವನ್ನು ರಚಿಸಿದಂತೆ ತಮ್ಮ ಮಾತೃಭಾಷೆ ತುಳುವಿನಲ್ಲೂ ಸಾಹಿತ್ಯವನ್ನು ರಚಿಸುತ್ತಾರೆ. ಅವರ ಎಲ್ಲ ಕೆಲಸಗಳಲ್ಲಿ ಶಿಖರಪ್ರಾಯವಾದದ್ದು ಕಾಸರಗೋಡನ್ನು ಕರ್ನಾಟಕಕ್ಕೇ ಸೇರಿಸಬೇಕೆಂಬ ನಿರಂತರ ಹೋರಾಟ! 100 ವರ್ಷದ ಈ ಹಿರಿಜೀವ ಇಂದಿಗೂ ಸಹಾ ಕಾಸರಗೋಡು ಕರ್ನಾಟಕದಲ್ಲಿ ಲೀನವಾಗುವ ಕ್ಷಣಕ್ಕಾಗಿ ಕಾದು ಕುಳಿತಿದೆ.
|
| |
|
|
|
|
|
|
|
|
|