Items
0
Total
  0.00 
Welcome Guest.

 
Rs. 250   
10%
 
 
Rs. 225/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2020
ರಕ್ಷಾ ಪುಟ : ಸಾದಾ
ಪುಟಗಳು :
ಪುಸ್ತಕದ ಗಾತ್ರ : 1/8 crown size
ISBN : 9788194344018
ಕೋಡ್ : 11546443

ಪಮುಕ್ ನಿಪುಣ ಕಥೆಗಾರ ಹೌದಾದರೂ ಕೇವಲ ಕಥೆಯನ್ನು ಆಕರ್ಷಕವಾಗಿ ಹೇಳುವುದಷ್ಟೇ ಅವನ ಉದ್ದೇಶವಲ್ಲ. ಪಮುಕ್‍ನ ಕಾದಂಬರಿಗಳು ಪೂರ್ವ ಮತ್ತು ಪಶ್ಚಿಮದ ಸಂಸ್ಕøತಿಗಳ ತಿಕ್ಕಾಟ, ಮನುಷ್ಯ ಸಂಬಂಧಗಳ ಜಟಿಲ ಹೆಣಿಗೆ, ಆಧುನಿಕತೆ ಮತ್ತು ಪರಂಪರೆಯ ಪ್ರಶ್ನೆಗಳನ್ನು ಎತ್ತುತ್ತವೆ. ಚರಿತ್ರೆ, ಪುರಾಣ, ಕತೆ ನಡೆಯುವ ಕಾಲದ ರಾಜಕೀಯದ ಆಯಾಮಗಳೂ ಸೇರಿಕೊಳ್ಳುತ್ತವೆ. ದಿನನಿತ್ಯದ ಸಾಮಾನ್ಯ ಬದುಕಿನಲ್ಲಿ ನಾವು ನೋಡುವ ಆದರೆ ಗಮನಿಸದ ವಸ್ತುಗಳ ಅರ್ಥಪೂರ್ಣ, ಔಚಿತ್ಯಪೂರ್ಣ ವರ್ಣನೆ ಇರುತ್ತದೆ. ಪ್ರತಿಯೊಂದು ಸನ್ನಿವೇಶದ ಭೌತಿಕ ವಾಸ್ತವದ ವಿವರಗಳು ಇರುತ್ತವೆ. ಪಮುಕ್ ಕೇವಲ ವಾಸ್ತವತಾವಾದಿಯಲ್ಲ, ವಿವರಗಳ ಮೂಲಕ, ಬೇರೆ ಬೇರೆ ಸ್ವಭಾವದ ಪಾತ್ರಗಳ ಕಣ್ಣಿಗೆ, ಮನಸಿಗೆ ಲೋಕ ಹೇಗೆ ಕಾಣುತ್ತದೆ ಅನ್ನುವುದನ್ನು ತೋರುವ ಮೂಲಕ, ಭಾಷೆಯಲ್ಲೇ ಬೇರೆ ಇನ್ನೊಂದು ಕಾಲ್ಪನಿಕ ವಾಸ್ತವವನ್ನು ನಿರ್ಮಿಸುತ್ತಾನೆ. ಆಟವಾಡುತ್ತ ಮಕ್ಕಳು ಪಡುವ ಖುಷಿಗೆ ಸಮಾನವಾದ ಖುಷಿಯನ್ನು ಬರೆಯುವಾಗ ಅನುಭವಿಸುತ್ತ ಓದುಗರಿಗೂ ಅಂಥ ಸಂತೋಷ ಕೊಡುತ್ತಾನೆ. ಕಾದಂಬರಿ ಪ್ರಕಾರದಲ್ಲಿ ಏನೇನು ಸಾಧ್ಯ ಅನ್ನುವುದನ್ನು ತೋರಿಸಿಕೊಡುವ ಲೇಖಕ ಪಮುಕ್.
ಪಮುಕ್‍ನ ಮಿಕ್ಕ ಕೃತಿಗಳಂತೆ `ಕೆಂಪು ಮುಡಿಯ ಹೆಣ್ಣು’ ಕಾದಂಬರಿಯಲ್ಲೂ ಇಸ್ತಾಂಬುಲ್ ನಗರದ ವಾಸ್ತವ ವರ್ಣನೆ ಇದೆ. ಆದರೆ ರಸ್ತೆ, ಚೌಕ, ಮೊಹಲ್ಲ ಇತ್ಯಾದಿಗಳೆಲ್ಲ ಕಥೆ ಓದುವಾಗಲೇ ಸ್ಪಷ್ಟವಾಗುತ್ತದೆ. ಆ ನಗರವನ್ನು ಬಲ್ಲವರಿಗೆ ಕಥೆಯ ಭಾವಕ್ಕೂ ಊರಿನ ವಾಸ್ತವಕ್ಕೂ ಇರುವ ಸಂಬಂಧ ಹೊಸಕೋನದಿಂದ ಕಂಡೀತು. ಆದರೆ ಅವೆಲ್ಲ ವಿವರಗಳನ್ನೂ ಅನುಬಂಧದಲ್ಲಿ ನೀಡಿದರೆ ಓದಿನ ಸುಖಕ್ಕೆ ಅಡ್ಡಿಯಾದೀತು ಎಂದು ನೀಡಿಲ್ಲ. ಪಮುಕ್‍ನ ವಿಷಯ ವ್ಯಾಪ್ತಿಯ ಸೂಚನೆ ಒಂದಿಷ್ಟು ಸಿಗಲೆಂದು ಈ ಕಾದಂಬರಿಯಲ್ಲಿ ಉಲ್ಲೇಖಗೊಂಡಿರುವ ಚಾರಿತ್ರಿಕ ವ್ಯಕ್ತಿ, ಸಂದರ್ಭ, ಸಾಹಿತ್ಯ ಕೃತಿ ಮತ್ತು ಕಲಾವಿದರನ್ನು ಕುರಿತ ಅತ್ಯಂತ ಕಿರಿದಾದ ಟಿಪ್ಪಣಿಯನ್ನು ಅನುಬಂಧದಲ್ಲಿ ನೀಡಿದ್ದೇನೆ. ಹಾಗೆಯೇ ಪಮುಕ್‍ನ ಮುಗ್ಧ-ಪ್ರಬುದ್ಧ ಹೊರತುಪಡಿಸಿ ವಿವಿಧ ಸಂದರ್ಶನಗಳಲ್ಲಿ ಆತ ಕಾದಂಬರಿ ಕಲೆಯ ಬಗ್ಗೆ ಹೇಳಿರುವ ಮಾತುಗಳ ಸಾರಾಂಶವನ್ನು, ಈ ಕಾದಂಬರಿ ಕುರಿತ ಕೆಲವು ಕುತೂಹಲದ ಸಂಗತಿಗಳನ್ನು ಅನುಬಂಧದಲ್ಲಿ ಸೇರಿಸಿದ್ದೇನೆ. ಸಾಹಿತ್ಯದಲ್ಲಿ ಗಂಭೀರ ಆಸಕ್ತಿ ಉಳ್ಳವರಿಗೆ ಇದರಿಂದ ನೆರವಾಗುವುದೆಂದು ನಂಬಿದ್ದೇನೆ.
-ಓ.ಎಲ್. ನಾಗಭೂಷಣಸ್ವಾಮಿ
(ಅರಿಕೆಯಿಂದ)

ಲೇಖಕರ ಇತರ ಕೃತಿಗಳು
10%
ಮುಗ್ಧ ಪ್ರಬುದ್ಧ (ಕಾದಂಬರಿ ....
ಒರ್ಹಾನ್ ಪಮುಕ್, Orhan Pamuk
Rs. 150    Rs. 135
Best Sellers
ಸ್ವಯಂವೈದ್ಯ
ತಿರುಕ, Tiruka
Rs. 400/-
ಮಕ್ಕಳಿಗಾಗಿ ಪ್ರಾಣಿ ಪ್ರಪಂಚದ ಕಥೆಗಳು
ರಾಜೇಶ್ವರಿ ಜಯಕೃಷ್ಣ, Rajeshwari Jayakrishna
Rs. 45/-   Rs. 50
ಮಕ್ಕಳಿಗಾಗಿ ಪಂಚತಂತ್ರದ ಆಯ್ದ ಕಥೆಗಳು
ಮಧ್ಯಸ್ಥ ಜಿ ಕೆ, Madhyastha G k
Rs. 36/-   Rs. 40
ಮನದೊಳಗಿನ ಸುಪ್ರಭಾತ ಎಂ. ಎಸ್. ಸುಬ್ಬಲಕ್ಷ್ಮಿ
ಜಗದೀಶ್ ಕೊಪ್ಪ ಎನ್, Jagadish Koppa N
Rs. 135/-   Rs. 150

Latest Books
21st Chromosome and Other Narratives
ಚಂಪ ಜೈಪ್ರಕಾಶ್, Champa Jaiprakash
Rs. 135/-   Rs. 150
ಯಾವುದು ಚರಿತ್ರೆ : ಆರ್ಯರಿಂದ ಔರಂಗಜೇಬನವರೆಗೆ
ಶಾಸ್ತ್ರಿ ಎಂ ವಿ ಆರ್, Shastry M V R
Rs. 225/-   Rs. 250
ಸಿಯಾಚೆನ್ ಗೆ ದೂರದಾರಿ : ಅದೇಕರ
ಶಿವ ಕುಣಾಲ ವರ್ಮಾ,Shiva Kunal varma
Rs. 315/-   Rs. 350
ರಸಯಾನ : ವಿಮರ್ಶೆ ಲೇಖನಗಳು
ಭೈರಮಂಗಲ ರಾಮೇಗೌಡ, Byramangala Ramegowda
Rs. 126/-   Rs. 140


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.