|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕನ್ನಡದ ಪ್ರಸಿದ್ಧ ಕಾದಂಬರಿಕಾರರಾದ ಪೂರ್ಣಚಂದ್ರ ತೇಜಸ್ವಿಯವರು ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಬರೆದ ನಾಲ್ಕು ಪ್ರಖ್ಯಾತ ಕತೆಗಳ ಸಂಕಲನ ಇದು. ಮೊದಲನೆಯ ಕತೆಯಾದ “ಕಿರಗೂರಿನ ಗಯ್ಯಾಳಿಗಳು” ಕತೆಯ ನಾಟಕದ ರೂಪಾಂತರ ಈಗಾಗಲೇ ಅನೇಕ ಬಾರಿ ರಂಗಸ್ಥಳದ ಮೇಲೆ ಪ್ರದರ್ಶಿತವಾಗಿದೆ. “ಮಾಯಾಮೃಗ” ಕತೆಗೆ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಬಂದ ರಾಷ್ಟ್ರದ ಅತ್ಯುತ್ತಮ ಹತ್ತು ಕತೆಗಳಲ್ಲಿ ಒಂದೆಂದು ಪರಿಗಣಿಸಿ “ಕಥಾ ರಾಷ್ಟ್ರೀಯ ಪ್ರಶಸ್ತಿ” ಕೊಡಲಾಗಿದೆ. “ಕೃಷ್ಣೇಗೌಡನ ಆನೆ” ಕತೆ ಇಂಗ್ಲಿಷ್, ಹಿಂದಿ, ಮರಾಠಿ ಮತ್ತು ಮಲಯಾಳಿ ಭಾಷೆಗಳಿಗೆ ತರ್ಜುಮೆ ಮಾಡಲಾಗಿದೆ.
|
ಕೆ.ಪಿ. ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭)- ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರುಗಳಲ್ಲಿ ಪೂರ್ಣಚಂದ್ರ ತೇಜಸ್ವಿಯವರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು. ತೇಜಸ್ವಿ ಆರಂಭದಲ್ಲಿ ಬೇರೊಂದು ಹೆಸರಲ್ಲಿ ಕಾವ್ಯ ರಚನೆ ಮಾಡಿದ್ದರೂ, ನಂತರ ಕಥಾ ಸಾಹಿತ್ಯ, ಕಾದಂಬರಿ, ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು. ೧೯೮೭ರಲ್ಲಿ `ಚಿದಂಬರ ರಹಸ್ಯ` ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದಿರುವ ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ತಂದೆ-ಮಕ್ಕಳಿಬ್ಬರೂ ಪ್ರಶಸ್ತಿ ಗಳಿಸಿದ ವಿಕ್ರಮವನ್ನು ಸೃಷ್ಟಿಸಿದ ಜೋಡಿಯಲ್ಲಿ ಎರಡನೆಯವರು. ವಿಜ್ಞಾನ ಮತ್ತು ಇತರ ಕೆಲವು ಸಾಹಿತ್ಯೇತರ ಕ್ಷೇತ್ರಗಳಲ್ಲಿಯೂ ತಮ್ಮತನವನ್ನು ಮೆರೆದಿರುವ ವಿಶಿಷ್ಟ ಲೇಖಕರಾಗಿದ್ದಾರೆ. ಕನ್ನಡ ಕಥೆ-ಕಾದಂಬರಿಗಳ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲುಗಳನ್ನೇ ನೆಟ್ಟ ತೇಜಸ್ವಿ ಅವರು ವಿಶಿಷ್ಟ ಪ್ರವಾಸ ಕಥನ, ಬೇಟೆ ಸಾಹಿತ್ಯ ಹಾಗೂ ಅನುವಾದಿತ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಹಾದಿಯನ್ನು ನಿರ್ಮಿಸಿಕೊಂಡು ಹೊರಟವರು, ಯಶಸ್ಸನ್ನು ಮೆರೆದವರು. ತೇಜಸ್ವಿಯವರನ್ನು ಕುರಿತು ಸಂಶೋಧನೆ ನಡೆಸಿ ಪಿಎಚ್.ಡಿ ಪದವಿ ಗಳಿಸಿದ್ದಾರೆ.
|
|
| |
|
|
|
|
|
|
|
|
|