|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಿಜ್ಞಾನ ವಿಷಯವನ್ನು ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಮತ್ತು ಕಲಿಸುವ ಶಿಕ್ಷಕರಿಗೆ ಉಪಯುಕ್ತವಾಗಬೇಕೆನ್ನುವ ಉದ್ದೇಶದಿಂದ ..ವಿಜ್ಞಾನ ಸರಳ ಪರಿಚಯ.. ಮಾಲೆಯಲ್ಲಿ ಹಲವು ಸಚಿತ್ರ ಪುಸ್ತಕಗಳನ್ನು ಸಿದ್ಧಪಡಿಸಲಾಗಿದೆ. ಮಕ್ಕಳಿಗೆ ವಿಜ್ಞಾನ ವಿಷಯದ ಕಲಿಕೆ ರೋಚಕವೂ, ಆಸಕ್ತಿದಾಯಕವೂ, ಅರ್ಥಪೂರ್ನವೂ ಆಗಿರಬೇಕು, ಹಾಗೆಯೇ, ಅಧ್ಯಪಕರಿಗೆ ವಿಜ್ಞಾನದ ಪರಿಕಲ್ಪನೆಗಳು ಸ್ಪಷ್ಟವಾಗಿ ಅರ್ಥವಾಗುವಂತಿರಬೇಕು - ಆ ಮೂಲಕ ಬೋಧನೆ ಹೆಚ್ಚು ಪರಿಣಾಮಕಾರಿಯಾಗ ಬೇಕೆಂಬುದೇ ಈ ಮಾಲೆಯ ಆಶಯ.
|
ವೃತ್ತಿಯಲ್ಲಿ ಬ್ಯಾಂಕ್ ಅಧಿಕಾರಿಯಾಗಿರುವ ಶ್ರೀ ಅಡ್ಡೂರು ಕೃಷ್ಣರಾವ್ ಬರವಣಿಗೆ ಹಾಗೂ ಸಂಘಟನೆಯಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಮೂವತ್ತು ವರ್ಷಗಳಿಂದ ‘ಬಳಕೆದಾರರ ವೇದಿಕೆ’ಯ ಸಂಚಾಲಕರಾಗಿ ಗ್ರಾಹಕರ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಗುವಲ್ಲಿ ಶ್ರಮಿಸಿದ್ದಾರೆ. ದಿನಪತ್ರಿಕೆಯೊಂದರಲ್ಲಿ ಬರುತ್ತಿರುವ ಕೃಷಿ ಅಂಕಣದಿಂದಲೂ ಪ್ರಸಿದ್ಧರು. ನವಕರ್ನಾಟಕ ಪ್ರಕಟಿಸಿರುವ ಯಾಕೊವ್ ಪೆರೆಲ್ಮನ್ ಅವರ ಇನ್ನೊಂದು ಪುಸ್ತಕ ‘ಮೋಜಿನ ಗಣಿತ’ವನ್ನೂ ಇವರೇ ಅನುವಾದಿಸಿದ್ದು, ಹಲವು ಮುದ್ರಣಗಳಾಗಿ ಜನಪ್ರಿಯವಾಗಿದೆ. ಡಿವಿಜಿ ಅವರ ‘ಮಂಕುತಿಮ್ಮನ ಕಗ್ಗ’ದ ವ್ಯಾಖ್ಯಾನ ಮಡಿಕೇರಿ ಆಕಾಶವಾಣಿಯಿಂದ ಪ್ರಸಾರವಾಗಿದೆ. ಅಂತರ್ಜಾಲದಲ್ಲಿ ‘ಜಲಜಾಗೃತಿ’ ಬಗ್ಗೆ ಇವರ ಲೇಖನಗಳು ಬಂದಿವೆ.
|
|
| |
|
|
|
|
|
|
|
|
|