|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕೃಷ್ಣದೇವರಾಯ (1471-1529) ಮಹಾ ವೀರ. ಕವಿ. ಮಹಾಮುತ್ಸದ್ಧಿ. ಸಾಹಿತ್ಯಾಭಿಮಾನಿ. ಸರ್ವಮತ ಸಹಿಷ್ಣು. ದೂರದೃಷ್ಟಿಯುಳ್ಳ ಅರಸ. ಈತನು ಇಡೀ ದಕ್ಷಿಣ ಭಾರತವನ್ನು ಗೆದ್ದ ಮೊದಲ ಅರಸ. ರಾಯನು ಹಿಂದು, ಕ್ರೈಸ್ತ, ಪಾರಸಿಕ, ಮುಸಲ್ಮಾನ ಮುಂತಾದ ಎಲ್ಲ ಜಾತಿಯ ಜನರಿಗೆ ತನ್ನ ಅರಮನೆಯ ದ್ವಾರವನ್ನು ಮುಕ್ತವಾಗಿ ತೆರೆದಿಟ್ಟನು. ರಾಯನು ಸ್ವಯಂ ವೈಷ್ಣವನಾಗಿದ್ದರೂ ಧರ್ಮಾಂಧನಾಗಿರಲಿಲ್ಲ. ತನ್ನ ಆಸ್ಥಾನದಲ್ಲಿ ಕನ್ನಡ, ತೆಲುಗು, ಸಂಸ್ಕೃತ ಹಾಗೂ ತಮಿಳು ಕವಿಗಳಿಗೆ ಆಶ್ರಯ ನೀಡಿ ಅವರಿಂದ ಅಮೂಲ್ಯ ಕೃತಿಗಳನ್ನು ಬರೆಯಿಸಿದನು. ಶಿಲ್ಪಕಲೆ, ಚಿತ್ರಕಲೆ, ನಾಟ್ಯ, ಸಂಗೀತಗಳಿಗೆ ಪ್ರೋತ್ಸಾಹವನ್ನು ನೀಡಿದನು.
ಕನ್ನಡ ರಾಜ್ಯ ರಮಾರಮಣ, ಕರ್ನಾಟಕ ಸಿಂಹಾಸನ ಸಂಸ್ಥಾಪನಾಚಾರ್ಯ, ಕನ್ನಡರಾಯ, ಆಂಧ್ರಭೋಜ, ಮೂರು ರಾಯರ ಗಂಡ, ಮಾತಿಗೆ ತಪ್ಪದ ರಾಯರ ಗಂಡ, ಅರಿರಾಯರ ಗಂಡ, ಹಿಂದೂ ರಾಯ ಸುರತ್ರಾಣ - ಹೀಗೆಲ್ಲ ಬಿರುದು ಬಾವಲಿಗಳನ್ನು ಪಡೆದಿದ್ದ ರಾಯ ಆಡಳಿತ ನಡೆಸಿದ್ದು 20 ವರ್ಷ. ಈ 20 ವರ್ಷಗಳಲ್ಲಿ 12 ವರ್ಷಗಳನ್ನು ರಾಜ್ಯವಿಸ್ತಾರ ಹಾಗು ಯುದ್ಧಗಳಲ್ಲಿ ಕಳೆಯುತ್ತಾನೆ. 8 ವರ್ಷ ಶಾಂತಿಯಿಂದ ರಾಜ್ಯಭಾರ ಮಾಡುತ್ತಾನೆ. ಇಷ್ಟೆಲ್ಲಾ ಶಕ್ತಿ ಸಾಮರ್ಥ್ಯವಿದ್ದ ಕೃಷ್ಣದೇವರಾಯ ತನ್ನ ಕೊನೆಗಾಲದಲ್ಲಿ ಕಂಡವರ ಕಿವಿಮಾತಿಗೆ ಓಗೊಟ್ಟು ಮಹಾಮಂತ್ರಿ ತಿಮ್ಮರಸುವನ್ನು ಶಿಕ್ಷಿಸುವುದು, ಅದೇ ಕೊರಗಲ್ಲಿ ಮಾನಸಿಕ ಕಾಯಿಲೆಗೆ ತುತ್ತಾಗಿ ಸಾವನ್ನಪ್ಪುವುದು ಒಂದು ದೊಡ್ಡ ಐತಿಹಾಸಿಕ ವ್ಯಂಗ್ಯವಾಗಿದೆ. ರಾಯರನ್ನು ಶ್ರೀ ಕೆ.ಎನ್. ಭಗವಾನ್ ಅವರು ಈ ಪುಸ್ತಕದಲ್ಲಿ ಸೊಗಸಾಗಿ ಪರಿಚಯ ಮಾಡಿಕೊಟ್ಟಿದ್ದಾರೆ.
|
| |
|
|
|
|
|
|
|
|
|