Items
0
Total
  0.00 
Welcome Guest.

 
L (ಎಲ್ : ಜೋಗಿ ಅವರ ಕಾದಂಬರಿ)
ಲೇಖಕರು: ಜೋಗಿ, Jogi

| 5.00 ರೇಟಿಂಗ್ಸ್ | 1 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 120    
10%
Rs. 108/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್, Sawanna Enterprises
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2019
ರಕ್ಷಾ ಪುಟ : ಸಾದಾ
ಪುಟಗಳು : 132
ಪುಸ್ತಕದ ಗಾತ್ರ : 1/8 Demy Size
ISBN : 9789382348931
ಕೋಡ್ : 1118817

ಜೋಗಿ ಎಂಬ ಹೆಸರಿನಿಂದ ಜನಪ್ರಿಯರಾಗಿರುವವರು ಲೇಖಕ ಗಿರೀಶ್ ರಾವ್ ಹತ್ವಾರ್. ಇವರ ಹುಟ್ಟೂರು ಮಂಗಳೂರಿನ ಸುರತ್ಕಲ್ ಸಮೀಪದಲ್ಲಿರುವ ಹೊಸಬೆಟ್ಟು. ಹುಟ್ಟಿದ್ದು ನವೆಂಬರ್ ೧೬. ೧೯೬೫. ಹತ್ವಾರ್ ಮನೆತನಕ್ಕೆ ಸೇರಿದ ಜೋಗಿ ಓದಿದ್ದು ಗುರುವಾಯನಕೆರೆ ಮತ್ತು ಉಪ್ಪಿನಂಗಡಿಗಳಲ್ಲಿ. ತಂದೆ ಶ್ರೀಧರರಾವ್ ಕೃಷಿಕರು. ತಾಯಿ ಶಾರದೆ. ಹಿರಿಯ ಸೋದರ ಹತ್ವಾರ ನಾರಾಯಣ ರಾವ್ ಯಕ್ಷಗಾನ ಪ್ರಸಂಗಗಳನ್ನು ಬರೆದು, ತಾಳಮದ್ದಲೆ ಅರ್ಥಧಾರಿಯಾಗಿ, ಲೇಖಕರಾಗಿ ಪ್ರಸಿದ್ಧರು. ೧೮ನೇ ವಯಸ್ಸಿಗೆ ಬರಹ ಆರಂಭಿಸಿದ ಜೋಗಿ ಓದಿದ್ದು ಬಿ.ಕಾಂ. ಕಾಲೇಜು ದಿನಗಳಲ್ಲಿ ಅವರ ಸಾಹಿತ್ಯ ಆಸಕ್ತಿಯನ್ನು ರೂಪಿಸಿದವರು ಬಳ್ಳ ವೆಂಕಟರಮಣ. ಬೆಂಗಳೂರಿಗೆ ೧೯೮೯ರಲ್ಲಿ ಕಾಲಿಟ್ಟ ಗಿರೀಶ ರಾವ್ ಹತ್ವಾರ್ ಅವರನ್ನು ಜೋಗಿಯಾಗಿ ರೂಪಿಸಿದವರು ವೈಎನ್ ಕೆ. ಸದ್ಯ ಬೆಂಗಳೂರಲ್ಲಿ ನೆಲೆನಿಂತಿರುವ ಜೋಗಿ, ಕನ್ನಡದ ಹೊಸಕಾಲದ ಪ್ರಮುಖ ಲೇಖಕರಲ್ಲೊಬ್ಬರಾಗಿದ್ದು ಹಲವಾರು ಕತೆ, ಕಾದಂಬರಿಗಳನ್ನು ರಚಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ ಅಂಕಣ ಬರಹಗಳಿಂದಲೂ ಪ್ರಸಿದ್ಧಿಯಾಗಿದ್ದಾರೆ. ಧಾರಾವಾಹಿ, ಸಿನೆಮಾಗಳ ಗೀತಸಾಹಿತ್ಯ, ಚಿತ್ರಕಥೆ ಸಂಭಾಷಣೆ ರಚನೆಯಲ್ಲೂ ತೊಡಗಿಕೊಂಡಿದ್ದಾರೆ. ವೃತ್ತಿಯಿಂದ ಪತ್ರಕರ್ತರಾಗಿದ್ದು ಪ್ರಸ್ತುತ ಪುರವಣಿ ಸಂಪಾದಕರಾಗಿದ್ದಾರೆ.

uploads/authorimages/989.jpg
 Reviews

 ಈ ಕಾದಂಬರಿಗೆ ಪ್ರಧಾನವಾಗಿ ಎರಡು ಆಯಾಮಗಳಿವೆ. ಒಂದು ಗಂಡು ಹೆಣ್ಣು ಸಂಬಂಧದ್ದು, ದಾಂಪತ್ಯದ ಚೌಕಟ್ಟಿನಲ್ಲಿ, ನೈತಿಕ ನೆಲೆಯಲ್ಲಿ ಅದನ್ನು ಕಾಣುವಂಥಾದ್ದು. ತನ್ನ ತಂದೆ ಮತ್ತು ವೇಶ್ಯೆ ಮೋಹಿನಿಯ ಸಂಬಂಧವನ್ನು ಸಹಿಸದ ಕಾದಂಬರಿಯ ನಾಯಕ, ತನ್ನ ಪರಮಾಪ್ತೆ ಗೆಳತಿಯೊಂದಿಗಿನ ಪ್ರೇಮವನ್ನು, ಅವಳ ಸಾಂಗತ್ಯ, ಸಾನ್ನಿಧ್ಯ ಮತ್ತು ಸಹಚರ್ಯವನ್ನು ಮರಳಿ ಪಡೆಯುವುದಕ್ಕೆ ಬೆಲೆ ತೆರಬೇಕಾಗುತ್ತದೆ ಎನ್ನುವಾಗಲೇ ಎದುರಾಗುವ ವಿಲಕ್ಷಣ ಸಂಘರ್ಷದಲ್ಲಿ ಕಾದಂಬರಿಯ ಗುರುತ್ವ ಅಡಗಿದೆ. ಇನ್ನೊಂದು ಪುರಾಣದ್ದು. ಯಯಾತಿ ಮತ್ತು ಪುರು, ಶಂತನು ಮತ್ತು ಭೀಷ್ಮ ಹಾಗೂ ಯಶೋಧರೆ ಮತ್ತು ಬುದ್ಧನ ನಡೆ, ನಿಲುವುಗಳನ್ನು ಇದು ನಿಕಷಃಕ್ಕೊಡ್ಡುತ್ತದೆ. ಮತ್ಸ್ಯಗಂಧಿಯ ವಾಸನೆಯನ್ನು ನಿವಾರಿಸಿ ಪರಾಶರ ಮುನಿ ಅವಳನ್ನುಯೋಜನಗಂಧಿಯನ್ನಾಗಿಸುತ್ತಾರೆ. ಹಾಗೆ ಹುಟ್ಟಿದ ಕೃಷ್ಣದ್ವೈಪಾಯನ ಮುಂದೆ ಮಹಾಕವಿ ವ್ಯಾಸನಾಗಿ ನಮಗೆಲ್ಲ ಗೊತ್ತು. ವ್ಯಾಸ ಸಂನ್ಯಾಸಿಯಾಗಿಯೂ ಜೀವ ವಿರೋಧಿಯಲ್ಲ. ನಿಯೋಗದಿಂದ, ಕುಂಭದಲ್ಲಿ ಗಜಗರ್ಭವನ್ನು ಕಾಪಾಡುವುದರಿಂದ ಕುರುವಂಶವನ್ನು ಕಾದವನು, ಜೀವ ಕಾರುಣ್ಯ ಮೆರೆದವನು. ಆದರೆ ರೋಗ, ಮುಪ್ಪು ಮತ್ತು ಮೃತ್ಯುವಿನಿಂದಾಗಿ ಬೇಸತ್ತು, ಯಶೋಧರೆಯನ್ನು ಪರಿತ್ಯಜಿಸಿ, ಜೀವ ವಿಮುಖಿಯಾಗಿ ಸಂನ್ಯಾಸಿಯಾದವನು ಬುದ್ಧ. ಬುದ್ಧನಿಗೆ ಆಸೆಯೇ ದುಃಖಕ್ಕೆ ಮೂಲ ಎನ್ನುವ ನಿಲುವಿದೆ. ಇವರಿಬ್ಬರ ನಡುವೆ ತನ್ನ ತಂದೆಗೆ ಯೌವನವನ್ನು ಧಾರೆಯೆರೆಯಲು ಯಾರೂ ಮುಂದಾಗದೇ ಇದ್ದಾಗ ತಾನು ಒಪ್ಪಿ, ಅಕಾಲದಲ್ಲಿ ಮುಪ್ಪನ್ನು ಪಡೆದ ಪುರು ಇದ್ದಾನೆ. ಇವನು ಒಂದೆಡೆ ತನ್ನ ಮೇಲೆ ಹೇರಲ್ಪಟ್ಟ ಸಂನ್ಯಾಸವನ್ನೂ ಇನ್ನೊಂದೆಡೆ ಮುಪ್ಪನ್ನೂ ಅಕಾಲದಲ್ಲಿ ಪಡೆದವನು. ಅವನಲ್ಲಿ ನಿರಾಕರಣವೂ ಇದೆ, ಆಸೆಯೂ ಇದೆ. ಪುರುವಿನ ಮುಪ್ಪು (ರೋಗ/ಸಾವು) ಸ್ವೀಕಾರದ ಮನಸ್ಥಿತಿ ಮತ್ತು ಆಂತರಿಕ ಪ್ರತಿರೋಧ (ತಂದೆಯ ಲೈಂಗಿಕ ಪಿಪಾಸೆ ಮತ್ತು ತನ್ನದೇ ವಧುವಿನ ಹತಾಶೆಯ ಹಿನ್ನೆಲೆಯಲ್ಲಿ) ಎರಡೂ ಜೀವನ್ಮುಖಿಯಾದ ಮತ್ತು ಜೀವನ ವಿಮುಖಿಯಾದ ಧೋರಣೆಗಳ ನಡುವಿನ ಸಂಘರ್ಷವಾಗಿದೆ. ಬಹುಶಃ ಇದು ಮನುಕುಲದ ನಿತ್ಯನಿರಂತರ ಸಂಘರ್ಷ ಕೂಡ ಹೌದು. ಕಾದಂಬರಿಯ ನಾಯಕ ಕೂಡ ಇಂಥ ಸಂಘರ್ಷದಲ್ಲೇ ಇದ್ದಾನೆ. ಇದನ್ನು ಕಾದಂಬರಿ ಓದುಗನ ಮುಂದಿಡುವ ಪರಿಪ್ರೇಕ್ಷ್ಯ ಮೆಚ್ಚುಗೆ ಹುಟ್ಟಿಸುವಂತಿದೆ. ಕಾದಂಬರಿಯ ನಿರೂಪಣೆ ಕಾವ್ಯಮಯವಾಗಿ ಆಕರ್ಷಕವಾಗಿದೆ. ಅನಗತ್ಯ ವಾಚಾಳಿತನವಿಲ್ಲದೆ, ಸರಾಗವಾದ ಓದಿಗೆ ಅನುಕೂಲಕರವಾಗಿದ್ದು, ಕುತೂಹಲಕರ ಕಥಾನಕ, ಸಂಕ್ಷಿಪ್ತ ಪಠ್ಯ ಇದರ ಹೆಚ್ಚುಗಾರಿಕೆಯಾಗಿದೆ. ಎಲ್ಲರೂ ಓದಬೇಕಾದ, ಕನ್ನಡದ ಬಹುಮುಖ್ಯ ಕೃತಿ.

ಲೇಖಕರ ಇತರ ಕೃತಿಗಳು
10%
ಕಥೆ ಚಿತ್ರಕಥೆ ಸಂಭಾಷಣೆ ....
ಜೋಗಿ, Jogi
Rs. 300    Rs. 270
10%
ಕಾಡುಹಾದಿಯ ಕತೆಗಳು
ಜೋಗಿ, Jogi
Rs. 95    Rs. 86
10%
ಜೋಗಿಮನೆ : ಸಾಹಿತ್ಯ, ....
ಜೋಗಿ, Jogi
Rs. 140    Rs. 126
10%
ದೇವರ ಹುಚ್ಚು
ಜೋಗಿ, Jogi
Rs. 95    Rs. 86
Best Sellers
ವಿಜ್ಞಾನ ಕಲಿಯೋಣ ಸಂಪುಟ - 4 (ವರ್ಣಚಿತ್ರಗಳೊಂದಿಗೆ)
ರಾವ್ ಸಿ ಎನ್ ಆರ್, Rao C N R
Rs. 293/-   Rs. 325
ಕಲಾಮ್ ಅವರಿಗೆ ಮಕ್ಕಳ ಪ್ರಶ್ನೆಗಳು
ಶೇಷಗಿರಿ ರಾವ್ ಎಲ್ ಎಸ್, Sheshagiri Rao L S
Rs. 86/-   Rs. 95
ಟೀಕೆ-ಟಿಪ್ಪಣಿ (ಸಂಪುಟ - 1)
ಲಂಕೇಶ್ ಪಿ, Lankesh P
Rs. 180/-   Rs. 200
ಪ್ರಾಚೀನ ಭಾರತವೆಂಬ ಅದ್ಭುತ (The wonder That Was India)
ಬಾಶಮ್ ಎ ಎಲ್, Basham A L
Rs. 665/-   Rs. 700

Latest Books
ಮೋಹ ಮುದ್ಗರ : ಭಜ ಗೋವಿಂದಮ್ ಸ್ತೋತ್ರದ ವ್ಯಾಖ್ಯಾನ
ಪ್ರೊ ವಿಷ್ಣು ಜೋಶಿ, Prof Vishnu Joshi
Rs. 81/-   Rs. 90
ನಗುವ ನಯನ ಮಧುರ ಮೌನ : ಆರ್ ಎನ್ ಜಯಗೋಪಾಲ್ ಅವರ ಆಯ್ದ ಚಿತ್ರಗೀತೆಗಳು
ಶ್ರೀಧರಮೂರ್ತಿ ಎನ್ ಎಸ್, Sridharmurthy N S
Rs. 176/-   Rs. 195
ಕರುಣೆಯ ಕಂದ
ಮುದೇನೂರ ಸಂಗಣ್ಣ, Mudenura Sanganna
Rs. 54/-   Rs. 60
ಪ್ರಾಕೃತ ಜಗದ್ವಲಯ : ಪ್ರಾಕೃತ - ಕನ್ನಡ - ಸಂಸ್ಕೃತ ಅನುಸಂಧಾನ
ಶೆಟ್ಟರ್ ಷ, Shettar S
Rs. 225/-   Rs. 250


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.