|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಆಲ್ಕೋಹಾಲ್ ಎನ್ನಿ, ಅಫೀಮು ಎನ್ನಿ, ಗಾಂಜಾ, ಚರಸ್, ಮಾರಿಹೋನಾ ಎನ್ನಿ, ಕೊಕೇನ್ ಎನ್ನಿ ಎಲ್ಲವೂ ಒಂದೇ. ಅಮಲು ತರಿಸುವ ಈ ವಸ್ತುಗಳೆಲ್ಲಾ ಒಂದೇ. ಸಿಹಿ ಲೇಪನದ ಅತ್ಯಂತ ಕಹಿ ಗುಳಿಗೆಗಳು. ಮಾದಕ ನಗೆಯನ್ನು ಮುಖದ ಮೇಲೆ ಹೊತ್ತು ಹತ್ತಿರ ಬರಲು ಆಕರ್ಷಿಸಿ, ಬಂದಾಗ ಅಪ್ಪಿ ಪ್ರಾಣ ಹೀರುವ ವಿಷಕನ್ಯೆಯರು. ಮಾದಕ ವಸ್ತುಗಳು ಇಂದು ದೊಡ್ಡ ಪಿಡುಗಾಗಿವೆ. ಅವುಗಳ ಮಾಯಾಜಾಲದಲ್ಲಿ ಮುಖ್ಯವಾಗಿ ನಮ್ಮ ಯುವ ಜನಾಂಗ ಸಿಲುಕಿ ಜರ್ಜರಿತವಾಗಿದೆ. ಮಾದಕ ವಸ್ತು ವ್ಯಕ್ತಿಯ ಮಾನವೀಯ ಗುಣಗಳನ್ನು ಕಳೆದು ಆಸುರೀಶಕ್ತಿಯನ್ನು ಉದ್ರೇಕಿಸಿ ಹೀನ ಅಪರಾಧಗಳನ್ನು ಮಾಡಲು ಪ್ರಚೋದಿಸುವ ಭಯಂಕರ ಸಾಧನವಾಗಿಬಿಟ್ಟಿರುವುದನ್ನು ಅನೇಕ ಜನ ಗಮನಿಸಿಲ್ಲ. ಮಾದಕ ವಸ್ತುವಿನ ಸೇವನೆಯಿಂದ ಮೈ-ಮನಸ್ಸಿನ ಸಮತೋಲನ ತಪ್ಪಿ, ಅನೇಕ ಬಗೆಯ ಮನೋ-ದೈಹಿಕ ಬೇನೆಗಳು ಕಾಣಿಸಿಕೊಳ್ಳುತ್ತವೆ. ಈ ವಸ್ತುಗಳಿಂದಾಗಿ ದಿನೇ ದಿನೇ ಅಪಘಾತ-ಅಪರಾಧಗಳು ಹೆಚ್ಚುತ್ತಿವೆ. ಇದರ ಬಗ್ಗೆ ಓದುಗರ ತಿಳಿವನ್ನು ಹೆಚ್ಚಿಸುವುದೇ ಈ ಕಿರುಹೊತ್ತಿಗೆಯ ಉದ್ದೇಶ.
|
ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಲೇಖಕರು ಮತ್ತು ಸಂವಹನಕಾರರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. `ವ್ಯಕ್ತಿ ವಿಕಸನ ಮಾಲೆ`ಯ ಸಂಪಾದಕರೂ ಆಗಿರುವ ಇವರ ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ಮತ್ತು ಕನ್ನಡದಲ್ಲಿ ಒಟ್ಟು 180ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ್ದಾರೆ. ಇವರ ಸಾಧನೆಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.
|
|
| |
|
|
|
|
|
|
|
|
|