|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮಕ್ಕಳನ್ನು ಹೇಗೋ ಬೆಳೆಸುವ ಬದಲು ಹೀಗೂ ಬೆಳೆಸಬಹುದು ಎನ್ನುವುದನ್ನು ಉದಾಹರಣೆಗಳ ಸಮೇತ ಲೇಖಕ ಗಿರಿಮನೆ ಶ್ಯಾಮರಾವ್ ಇಲ್ಲಿ ವಿವರಿಸಿದ್ದಾರೆ. ಇದರಲ್ಲಿ ಮಕ್ಕಳ ಅಭ್ಯುದಯಕ್ಕಾಗಿಯೇ ಬರೆದ ಅರವತ್ತೆರಡು ಅಧ್ಯಾಯಗಳಿವೆ. ಮಕ್ಕಳ ಬಗ್ಗೆ ಬರೆಯುವುದು ಸುಲಭವಲ್ಲ. ಆದರೆ ಇದರಲ್ಲಿ ಬರೆದ ಅಷ್ಟೂ ಅಧ್ಯಾಯಗಳ ಬಗ್ಗೆಯೂ ನನ್ನ ತಕರಾರಿಲ್ಲ. ಎಲ್ಲವೂ ಮಕ್ಕಳನ್ನು ಹೆತ್ತವರಿಗೆ ಅತ್ಯುಪಯುಕ್ತವಾದವುಗಳೇ. ಒಂದೇ ಸಲ ಓದಿ ಮುಗಿಸುವುದಕ್ಕಿಂತ ದಿನಕ್ಕೊಂದು ಅಧ್ಯಾಯದಂತೆ ಓದಿ ಮನನ ಮಾಡಿಕೊಳ್ಳುವುದು ಸೂಕ್ತ. ಮಕ್ಕಳಿಗೆ ಕತೆ ಯಾವ ರೀತಿ ಹೇಳಬಹುದು, ಕೆಲಸ ಹೇಗೆ ಕಲಿಸಬಹುದು, ಅವರ ತಪ್ಪುಗಳನ್ನು ಯಾವ ರೀತಿ ತಿದ್ದಿ ಅವರಿಗೆ ಒಳ್ಳೆಯದಾಗುವಂತೆ ಹೇಗೆ ನಡೆದುಕೊಳ್ಳಬಹುದು ಎಂಬ ಬೇರೆ ಬೇರೆ ವಿಷಯಗಳ ಬಗ್ಗೆ ಅತ್ಯಂತ ಸುಲಭ ಮತ್ತು ಸರಳವಾಗಿ ಉದಾಹರಣೆಗಳ ಸಮೇತ ಪ್ರತಿಯೊಂದು ಅಧ್ಯಾಯದಲ್ಲೂ ವಿವರಿಸಲಾಗಿದೆ. ಇಂದಿನ ಬದುಕಿನಲ್ಲಿ ಮಕ್ಕಳನ್ನು ಅರಿಯಲು ಹೆತ್ತವರಿಗೆ ತೀರಾ ಅವಶ್ಯವಾದ ಪುಸ್ತಕ ಇದು.
|
| |
|
|
|
|
|
|
|
|
|