Items
0
Total
  0.00 
Welcome Guest.

 
Rs. 160   
10%
 
 
Rs. 144/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಚಿಂತನ ಪುಸ್ತಕ, Chinthana Pusthaka
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 214
ಪುಸ್ತಕದ ಗಾತ್ರ : 1/8 Demy Size
ISBN : 9789381187258
ಕೋಡ್ : 189383

ಸಂಸ್ಕೃತಿ ಚಿಂತನೆಯಲ್ಲಿ, ಮುಖ್ಯವಾಗಿ, ಇತಿಹಾಸ ಮತ್ತು ಸಮಾಜಶಾಸ್ತ್ರಗಳ ಕ್ಷೇತ್ರದಲ್ಲಿ ಸಂಕುಚಿತ ರಾಷ್ಟ್ರೀಯತಾ ಮನೋಭಾವ ಮತ್ತು ವೈಜ್ಞಾನಿಕ ವಿಶ್ಲೇಷಣೆಯಿಂದ ಕೂಡಿದ ವಸ್ತುನಿಷ್ಠ ಚಿಂತನೆಗಳ ನಡುವಿನ ಜಗಳ ಇಂದು ನಿನ್ನೆಯದಲ್ಲ. ನಮ್ಮ ದೇಶದ ಇತಿಹಾಸವನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿಯೇ ಈ ವಿಭಿನ್ನ ಧೋರಣೆಗಳ ನಡುವಿನ ತಿಕ್ಕಾಟ ಪ್ರಕಟವಾಗುತ್ತದೆ. ಕೆಲವು ಬಾರಿ ರಾಷ್ಟ್ರೀಯತೆಯನ್ನು ತೀರಾ ಸೀಮಿತ ಅರ್ಥದಲ್ಲಿ ಸ್ವೀಕರಿಸುವವರ ಕೈ ಮೇಲಾದಾಗ, ಅಂಥವರು ರಾಜಕೀಯವಾಗಿ ಅಧಿಕಾರಸ್ಥರಾದಾಗ ವಸ್ತುನಿಷ್ಠ ಚಿಂತನೆಗೆ ಇನ್ನೂ ಹೆಚ್ಚಿನ ಅಪಾಯ ಎದುರಾಗುತ್ತದೆ. ತಾವು ಇಷ್ಟಪಡದ ಇಂತಹ ಲೋಕದೃಷ್ಟಿಯನ್ನು ಕಮ್ಯೂನಿಸ್ಟರ ಸಿದ್ಧಾಂತವೆಂತಲೋ, ಪಶ್ಚಿಮದ ಧೋರಣೆ ಎಂತಲೋ ಹೀಗಳೆದು ಅದರ ಜಾಗದಲ್ಲಿ ಹುಸಿ ದೇಶಾಭಿಮಾನವನ್ನು ತುಂಬುವ, ಮಿಥ್ಯೆಗಳಿಂದಲೇ ಕೂಡಿದ ಮಾಹಿತಿಯನ್ನೇ ಜನರಿಗೆ ಪರಿಚಯಿಸುವ ಪ್ರಯತ್ನಗಳು ಆಗಾಗ ನಡೆಯುತ್ತಲಿರುತ್ತವೆ. (2014ರ ಪ್ರಸ್ತುತ ಸನ್ನಿವೇಶವು ಅಂತಹ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ.) ಆದರೆ ಈ ಅಧಿಕಾರ ಲಾಲಸೆ ಮತ್ತು ಮಿಥ್ಯೆಯನ್ನು ವಾಸ್ತವವೆಂದು ಚಿತ್ರಿಸುವ ಪ್ರಯತ್ನಗಳನ್ನು ಸಮರ್ಥವಾಗಿ ಎದುರಿಸಬೇಕಾದರೆ ಇತಿಹಾಸವನ್ನು ವಾಸ್ತವ ನೆಲೆಗಟ್ಟಿನಲ್ಲಿ ಪರಿಚಯಿಸುವ ಇತಿಹಾಸಕಾರರ ಬರಹಗಳು ಎಲ್ಲರಿಗೂ ದೊರೆಯುವಂತಾಗಬೇಕು. ಪರೀಕ್ಷೆಗಳಲ್ಲಿ ಯಶಸ್ವಿಯಾಗುವುದಕ್ಕಿಂತಲೂ ಹೆಚ್ಚು ಮುಖ್ಯವಾದದ್ದು ಒಂದು ಆರೋಗ್ಯಪೂರಿತ ಸಮಾಜವನ್ನು ಸೃಷ್ಟಿಸುವುದು. ಇಂತಹ ಲೇಖಕರ ಗ್ರಂಥಗಳನ್ನು ‘ಸುಟ್ಟುಬಿಡಬೇಕು’ ಎಂದು ಅಧಿಕಾರಸ್ಥರಲ್ಲಿನ ಕೆಲವರು ಹೇಳುತ್ತಿರುವ ಈ ಸಂದರ್ಭದಲ್ಲಿ ಇಂತಹ ಪ್ರಯತ್ನಗಳ ಅಗತ್ಯ ಇನ್ನೂ ಹೆಚ್ಚಾಗಿದೆ. ವಸ್ತುನಿಷ್ಠವಾಗಿ ಯೋಚಿಸುವವರ ಸಂಖ್ಯೆ ಬೆಳೆಯಲಿ ಎಂಬ ಉದ್ದೇಶದಿಂದ ಸಾಗುತ್ತಿರುವ ಈ ಪ್ರಯತ್ನದ ಭಾಗವಾಗಿ ‘ಮೌರ್ಯರ ಕಾಲದ ಭಾರತ’ ಪ್ರಕಟವಾಗುತ್ತಿದೆ.

ಇರ್ಫಾನ್ ಹಬೀಬ್ ನಮ್ಮ ಕಾಲದ ಶ್ರೇಷ್ಠ ಭಾರತೀಯ ಇತಿಹಾಸ ತಜ್ಞರು ಹಾಗೂ ಮಾರ್ಕ್ಸಿಸ್ಟ್ ದೃಷ್ಟಿಕೋನದಿಂದ ಬರೆಯುವ ಎಡಪಂಥೀಯ ಚಿಂತನೆಯ ಲೇಖಕರಲ್ಲಿ ಪ್ರಮುಖರು. ಅಂತರರಾಷ್ಟ್ರೀಯ ಖ್ಯಾತಿ ಹೊಂದಿರುವ ಇತಿಹಾಸ ಬರಹಗಾರರು - ‘ಭಾರತೀಯ ಐತಿಹಾಸಿಕ ಸಂಶೋಧನಾ ಪರಿಷತ್’ನ ಅಧ್ಯಕ್ಷರಾಗಿದ್ದ ಇವರು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್. ಮೊಘಲ್ ಇಂಡಿಯಾ, ಬ್ರಿಟಿಷ್ ಇಂಡಿಯಾ, ಮಧ್ಯಕಾಲೀನ ಇಂಡಿಯಾ ಬಗ್ಗೆ ನಿಖರವಾಗಿ ಬರೆಯಬಲ್ಲವರು.

ಲೇಖಕರ ಇತರ ಕೃತಿಗಳು
10%
ಪ್ರಾಚೀನ ಭಾರತದಲ್ಲಿ ಜಾತಿಗಳ ....
ಇರ್ಫಾನ್ ಹಬೀಬ್, Irfan Habib
Rs. 25    Rs. 23
Rs. 90    Rs. 81
10%
ಸಿಂಧೂ ನಾಗರಿಕತೆ
ಇರ್ಫಾನ್ ಹಬೀಬ್, Irfan Habib
Rs. 135    Rs. 122
Rs. 100    Rs. 90
Best Sellers
ಕರುಣಾಳು ಬಾ ಬೆಳಕೆ–15
ಗುರುರಾಜ ಕರಜಗಿ, Gururaj Karajagi
Rs. 113/-   Rs. 125
Jumbo All In One (Alphabet, Numbers, Hindi Albhabet & Picture Book)
Manoj Publications
Rs. 108/-   Rs. 120
ತಿಳಿದು ತಿನ್ನೋಣ ಬನ್ನಿ... : ಸಿರಿಧಾನ್ಯಗಳ ಪ್ರಯೋಜನ ಮತ್ತು ಮಹತ್ವ ಅರಿತು
ಖಾದರ್, Khadar
Rs. 135/-   Rs. 150
ಕಂದಾ ಓದುವೆಯಾ ? ಭಾಗ - 1
ತಿರುಮಲಮ್ಮ ಬಿ ಕೆ, Thirumalamma B K
Rs. 27/-   Rs. 30

Latest Books
ಆಧುನಿಕ ವಿಮರ್ಶೆ ತತ್ವ ಮತ್ತು ಪ್ರಯೋಗಗಳು
ಕೇಶವ ಶರ್ಮ ಕೆ, Keshava Sharma K
Rs. 144/-   Rs. 160
ವದರಿಂಗ್ ಹೈಟ್ಸ್ (WUTHERING HEIGHTS)
ಎಮಿಲಿ ಬ್ರಾಂಟೆಯ, Emily Bronte
Rs. 360/-   Rs. 400
ಕೂಪ : ಕಾದಂಬರಿ
ಗಟ್ಟಿ ಕೆ ಟಿ, Gatti K T
Rs. 117/-   Rs. 130
ಯಶಸ್ವೀಭವ : ಸಮಸ್ಯೆಗಳಿಗೆ ಸರಳ ಪರಿಹಾರ
ಯಂಡಮೂರಿ ವೀರೇಂದ್ರನಾಥ್, Yandamoori Veerendranth
Rs. 135/-   Rs. 150


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.