|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮನರಂಜನೆಯ ಗಣಿತದಲ್ಲಿ "ಮಾಯಾಚೌಕ" ವಿಶಿಷ್ಟವಾದ ಸ್ಥಾನವನ್ನು ಪಡೆದಿದೆ. ಈ ಕ್ಷೇತ್ರಕ್ಕೆ ಭಾರತದ ಕೊಡುಗೆ ಅನನ್ಯ. ನಾರಾಯಣ ಪಂಡಿತನ "ಗಣಿತ ಕೌಮುದಿ"ಯಲ್ಲಿ ವಿಭಿನ್ನ ರೀತಿಯ ಆಕರ್ಷಕವಾದ ಮಾಯಾಚೌಕಗಳ ಹಾಗೂ ಇತರ ಮಾಯಾಕೃತಿಗಳ ರಚನೆಗಳ ಅಧ್ಯಯನವನ್ನು ಮಾಡಿದೆ. ಅನೇಕ ಚೌಕಗಳನ್ನು ರಚಿಸಿ ಅಲ್ಲಿ ಪ್ರತಿ ಅಂಕಣದಲ್ಲೂ ಅಂಕೆಗಳನ್ನು ತುಂಬಿಸಿ ಯಾವ ಕಡೆಯಿಂದ ಕೂಡಿದರೂ ಒಂದೇ ಮೊತ್ತ ಬರುವಂತೆ ಮಾಡುವುದು ಸಾಮಾನ್ಯವೇನಲ್ಲ. ಇವು ಮಾಯಾಲೋಕವನ್ನೇ ಸೃಜಿಸಿ ಮನಸ್ಸಿಗೆ ಮುದ ನೀಡುತ್ತವೆ. ಪ್ರಸ್ತುತ "ಮಾಯಾಚೌಕಗಳ ಸ್ವಾರಸ್ಯ" ಪುಸ್ತಕದಲ್ಲಿ ಇಂತಹ ಆಕರ್ಷಕ ರಚನೆಗಳ ಸವಿಯನ್ನು ಉಣಬಡಿಸಿದೆ.
|
ಡಾ. ಬಾಲಚಂದ್ರ ರಾವ್ ಎಸ್ ಅವರು ಗಣಿತಶಾಸ್ತ್ರ ಪ್ರಾಧ್ಯಾಪಕರಾಗಿ, ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಪ್ರಿನ್ಸಿಪಾಲರಾಗಿ ನಿವೃತ್ತರು. ಈಗ ಬೆಂಗಳೂರಿನ ಭಾರತೀಯ ವಿದ್ಯಾಭವನದ‘ವಿಜ್ಞಾನ ಮತ್ತು ಮಾನವೀಯ ಮೌಲ್ಯಗಳ ಗಾಂಧೀ ಕೇಂದ್ರ‘ದ ಗ್ಪುರವ ನಿರ್ದೇಶಕರಾಗಿದ್ದಾರೆ. ಗಣಿತ ಮತ್ತು ಖಗೋಳ ವಿಜ್ಞಾನ ಹಾಗೂ ವೈಚಾರಿಕತೆಗೆ ಸಂಬಂಧಿಸಿದಂತೆ ಅನೇಕ ಕೃತಿಗಳನ್ನು ಆಂಗ್ಲ ಮತ್ತು ಕನ್ನಡ ಭಾಷೆಗಳಲ್ಲಿ ರಚಿಸಿದ್ದಾರೆ.
|
|
| |
|
|
|
|
|
|
|
|
|