|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಇಂದಿನ ಆಧುನಿಕ ಜಗತ್ತಿನಲ್ಲಿ ನಮಗೆ ಸಿಗುತ್ತಿರುವ ಸವಲತ್ತುಗಳು ಹಲವು.
ಸ್ಪರ್ಧಾತ್ಮಕ ಬದುಕಿನಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೆಗೂ ಒತ್ತಡದಲ್ಲೇ ಬದುಕುತ್ತಿದ್ದೇವೆ.
ಮಕ್ಕಳಿಗೆ ಓದುವ ಒತ್ತಡ, ಒಳ್ಳೆಯ ಅಂಕಗಳನ್ನು ಪಡೆದರೂ ಅತ್ಯುತ್ತಮವಾಗಿ
ಪಡೆಯದಿದ್ದರೆ ಏನಾಗುತ್ತದೋ ಎಂಬ ಆತಂಕ. ದೊಡ್ಡವರಿಗೆ ಕೆಲಸದಲ್ಲಿ ಕಿರಿಕಿರಿ,
ರಾಜಕೀಯ, ಆರ್ಥಿಕ ಮುಗ್ಗಟ್ಟು.
ಡಾಕ್ಟ್ರೇ, ನನ್ನ ಮಗ ಓದ್ತಾನೆ. ಆದರೆ ನೆನಪೇ ಇರೋದಿಲ್ಲ`` ಎಂಬುದು
ಬಹುತೇಕ ಪ್ರತಿನಿತ್ಯ ಕೇಳಿಬರುವ ಮಾತು ಒಂದೆಡೆಯಾದರೆಯಾಕೋ ಇತ್ತೀಚೆಗೆ
ವಯಸ್ಸಾಗುತ್ತಾ ಮರೆವು ತೀರಾ ಹೆಚ್ಚಾಗಿದೆ`` ಎಂಬ ಪೇಚಾಟ ಇನ್ನೊಂದೆಡೆ.
ಶಾಂತಿ ಇಲ್ಲದ ಮನಸ್ಸು, ವಿಶ್ರಾಂತಿ ಇಲ್ಲದ ದೇಹ ಹಗಲಿರುಳೂ ದುಡಿತ.
ಒಂದಿಷ್ಟು ಸಂತೋಷಕ್ಕಾಗಿ ಕೆಲವರು ಸಿಗರೇಟ್, ಮದ್ಯಪಾನಗಳಿಗೆ ಮೊರೆಹೊಕ್ಕರೆ
ಮತ್ತೆ ಕೆವಲರು ಸಿನಿಮಾ ಧಾರಾವಾಹಿಗಳನ್ನು ನೋಡ್ತಾ, ಹೊರಗಡೆ ಹೆಚ್ಚಾಗಿ ತಿನ್ನುವ
ಶೋಕಿ ಇವುಗಳಿಂದಾಗಿ ಮನಸ್ಸು, ಆರೋಗ್ಯ ಮತ್ತಷ್ಟು ಕೆಡುತ್ತಿವೆ. ನಮ್ಮ ಬದುಕಿನ
ಮೂಲಭೂತ ಉದ್ದೇಶ್ಯಗಳೇ ಮರೆತು ಹೋಗಿವೆ. ಮುಖ್ಯವಾಗಿ ಸಣ್ಣಮಕ್ಕಳಲ್ಲಿ ನೈತಿಕ
ಮೌಲ್ಯಗಳನ್ನು ತುಂಬುವಲ್ಲಿ ಹಿರಿಯರು ಎಡವುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ
ಓದುವ ಕ್ರಮ, ಕಲಿಯುವ ಬಗೆ, ನೆನಪಿನ ಶಕ್ತಿಯ ವೃದ್ಧಿ, ಆತ್ಮವಿಶ್ವಾಸ ಕುರಿತಂತೆ
`ಓಜಸ್` ಸಂಸ್ಥೆಯ ಮೂಲಕ ಅನೇಕ ಊರುಗಳಲ್ಲಿ ಶಾಲಾ ಮಕ್ಕಳಿಗೆ ಬೋಧಿಸುತ್ತಿದ್ದೆ.
ಮಕ್ಕಳೊಡನೆ ಕಾಲ ಕಳೆಯುವ ಸಮಯ ಮರೆಯಲಾಗದ ನೆನಪು. ಎಳೇ ವಯಸ್ಸಿನಲ್ಲಿ
ಆ ಪುಟ್ಟ ಮನಗಳಲ್ಲಿ ನೂರೆಂಟು ಸ್ವಚ್ಛಂದ ಕನಸುಗಳು ಸೀಮೆಯಿಲ್ಲದ ಆಕಾಶದಲ್ಲಿ
ನಲಿಯುವ ಸಮಯ. ಇಂತಹ ವಯಸ್ಸಿನಲ್ಲಿ ಒಳ್ಳೆಯದನ್ನು ನಾವು ಮನಮುಟ್ಟುವಂತೆ
ಹೇಳಿಕೊಟ್ಟರೆ, ಅದು ಅವರಿಗೆ ನಾಟುತ್ತದೆ, ಮುಂದೆ ಹೆಮ್ಮರವಾಗಿ ಬೆಳೆಯುತ್ತದೆ.
ಹದಿಹರೆಯವರಲ್ಲಿ ಆತ್ಮವಿಶ್ವಾಸ ಕಡಿಮೆಯಾಗಿ, ಸ್ವಲ್ಪ ಮಟ್ಟಿನ ಕೀಳರಿಮೆ ಕಾಣುವುದನ್ನು
ನಾನು ನೋಡಿದ್ದೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದ ಮಾತ್ರಕ್ಕೆ ಯಾರೂ ಪೆದ್ದರಲ್ಲ. ಒಳಗಿನ ಸುಪ್ತ ಪ್ರತಿಭೆಯನ್ನು ಹೊರತರಲಾಗದ ಪಠ್ಯಕ್ರಮದ ನ್ಯೂನತೆಗೆ ಮಕ್ಕಳು
ನೆಪಮಾತ್ರ, ಜೊತೆಗೆ ವಯಸ್ಸಾದಂತೆ ನೆನಪಿನ ಶಕ್ತಿ ಕಡಿಮೆಯಾಗುವುದಿಲ್ಲ.
-ಡಾ. ಕೆ. ಜಯಲಕ್ಷ್ಮಿ
|
| |
|
|
|
|
|
|
|
|
|