|
|

| Rs. 25 | 10% |
Rs. 23/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಭಾರತೀಯ ಮಹಾ ದುರದೃಷ್ಟಶಾಲಿ ವಿಜ್ಞಾನಿಗಳೆಂದರೆ ಸತ್ಯೇಂದ್ರನಾಥ ಬೋಸ್ ಹಾಗೂ ಮೇಘನಾದ ಸಹಾ. ದೇವಕಣದ ಸೈದ್ಧಾಂತಿಕ ಪ್ರತಿಪಾದನೆಯನ್ನು ಬೋಸ್ ಮಾಡಿದರೆ, ಸಹಾ ನಕ್ಷತ್ರ ಲೋಕಗಳ ಅರಿವಿನ ಮಹಾದ್ವಾರದ ‘ಸಹಾ ಸಮೀಕರಣ‘ವನ್ನು ನೀಡಿದರು. ಇವರಿಬ್ಬರ ಸಂಶೋಧನೆ ನೊಬೆಲ್ ಪ್ರಶಸ್ತಿಗೆ ಅರ್ಹವಾದವು. ಆದರೆ ಅದು ಅವರಿಬ್ಬರಿಗೆ ದೊರೆಯಲೇ ಇಲ್ಲ ಎನ್ನುವುದಕ್ಕೆ ಅವರು ಭಾರತೀಯರು ಎನ್ನುವುದೇ ಪ್ರಮುಖ ಕಾರಣವಾಗಿತ್ತು!
ವಿಜ್ಞಾನಿಗಳೆನಿಸಿಕೊಂಡವರು ಪ್ರಯೋಗಾಲಯಗಳೆಂಬ ತಮ್ಮ ದಂತಗೋಪುರಗಳಲ್ಲಿ ಕುಳಿತು ಸದಾ ತಮ್ಮ ಸಂಶೋಧನೆಯಲ್ಲಿ ಮಗ್ನರಾಗಿರುತ್ತಾರೆ; ಅವರಿಗೆ ಸಮಾಜದ ಆಗುಹೋಗುಗಳ ಬಗ್ಗೆ ಪರಿವೆಯಿರುವುದಿಲ್ಲ ಎನ್ನುವ ಆರೋಪವಿದೆ. ಸಹಾ ನೆಚ್ಚಿನ ಸಂಶೋಧನೆಯನ್ನು ಬಿಟ್ಟು ಸಾರ್ವಜನಿಕ ಬದುಕಿಗೆ ಬಂದರು. ದಾಮೋದರ ವ್ಯಾಲಿ ಪ್ರಾಜೆಕ್ಟಿನ ಮೂಲ ಯೋಜನೆಯನ್ನು ರೂಪಿಸಿದರು. ಕಲ್ಕತ್ತದಲ್ಲಿ ‘ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಫಿಸಿಕ್ಸ್’ ಸ್ಥಾಪಿಸಿದರು. ‘ವಿಜ್ಞಾನ ಮತ್ತು ಸಂಸ್ಕೃತಿ‘ ಎನ್ನುವ ಪತ್ರಿಕೆಯನ್ನು ಹೊರತಂದರು. ಭಾರತೀಯ ವಿಜ್ಞಾನ ಮಂದಿರವನ್ನು ಕಟ್ಟಲು ನೆರವಾದರು. ಅವರ ಹೆಸರಿನಲ್ಲಿ ‘ಸಹಾ ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಫಿಸಿಕ್ಸ್‘ ಸ್ಥಾಪಿಸಲಾಗಿದೆ.
|
ರೋಹಿತ್ ಚಕ್ರತೀರ್ಥ, ಕನ್ನಡದಲ್ಲಿ ವಿಜ್ಞಾನವನ್ನು ಬರೆಯುತ್ತಿರುವ ಲೇಖಕರ ಸಾಲಿನಲ್ಲಿ ಹೊಸ ಹೆಸರು. ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರೋಹಿತ್, ಬೆಂಗಳೂರಿನ ಬೇಸ್ ಮತ್ತು ಟೈಮ್ ಸಂಸ್ಥೆಗಳಲ್ಲಿ ಶಿಕ್ಷಕರಾಗಿ; ಈಗ ಪಿಯರ್ಸನ್ ಎಜುಕೇಶನ್ ಸಂಸ್ಥೆಯಲ್ಲಿ ಮುಖ್ಯ ಕನ್ಸಲ್ಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿರಂತರ ಪ್ರವಾಸಿ. ನಾಟಕ, ಜನಪದ, ಛಾಯಾಗ್ರಹಣ - ಇನ್ನಿತರ ಆಸಕ್ತಿಗಳು.
|
|
| |
|
|
|
|
|
|
|
|
|