|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಂಕಿತ ಪುಸ್ತಕ, Ankita Pustaka |
ಈಗಿನ ಮುದ್ರಣದ ಸಂಖ್ಯೆ |
: |
4 |
ಮುದ್ರಣದ ವರ್ಷ |
: |
2012 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
152 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
110017 |
೧೯೭೫ ರಿಂದ ಈಚೆಗೆ ದಲಿತರು ಹೊಸ ಪ್ರಜ್ಞಾವಂತ ಜನಾಂಗವಾಗಿ ಕರ್ನಾಟಕದಲ್ಲಿ ಸಿದ್ಧಲಿಂಗಯ್ಯನವರ ಕವಿತೆಗಳ ಎರಕದಲ್ಲಿ ರೂಪುಗೊಂಡರು. ದಲಿತರ ಮೆರವಣಿಗೆ ಬೀದರ್ ನಿಂದ ಕೋಲಾರದ ತನಕ ಯಾವುದೇ ಮೂಲೆಯಲ್ಲಿ ನಡೆದರೂ ಅಲ್ಲಿ ಕವಿಯ ಹಾಡುಗಳು. ಇದು ಸಾರ್ವಜನಿಕ ಕಾವ್ಯದ ಅಂತಿಮ ಯಶಸ್ಸು.
ಸಾರ್ವಜನಿಕ ರಾಜಕೀಯ ಬದುಕಿನ ಉತ್ಸಾಹ, ರೋಷ, ಭೀತಿಗಳನ್ನು ಕವಿ ಇಲ್ಲಿ ಪರಿಣಾಮಕಾರಿಯಾಗಿ ಹಿಡಿದಿಟ್ಟಿದ್ದಾರೆ. ಸಾರ್ವಜನಿಕ ಕಾವ್ಯಕ್ಕೆ ಒಂದು ಭಾಷಣದ ಗುಣವಿರದಿದ್ದರೆ ರುಚಿಸುವುದೇ ಇಲ್ಲ. ಅದಕ್ಕಾಗಿಯೇ ಕ್ರಾಂತಿಕವಿಗಳು ಉತ್ಪ್ರೇಕ್ಷೆ ಆಯ್ದುಕೊಳ್ಳುತ್ತಾರೆ. ಇಲ್ಲವೆ ಬ್ರೆಕ್ಟ್ನ ಹಾಗೆ ವ್ಯಂಗ್ಯವನ್ನು, ವೈರುಧ್ಯಗಳನ್ನು ಕೋಪ, ಶೋಕ ಅಥವಾ ವ್ಯಂಗ್ಯ, ನಗು-ಹೀಗೆ ಯಾವುದೇ ಆದರೂ ಸಾರ್ವಜನಿಕ ಸಭೆ ಎಂಬಂತ ಸ್ಥಿತಿಯಲ್ಲಿಯೇ ಕಾವ್ಯ ಅನುರಣಿಸುತ್ತದೆ. ಹೀಗೆ ಸಾರ್ವಜನಿಕ ಕಾವ್ಯ ತನ್ನ ಅತ್ಯುತ್ತಮ ಕ್ಷಣಗಳಲ್ಲಿ ಒಂದು ಆದಿಮ ಸಮಷ್ಟಿಯನ್ನು ಸೃಷ್ಟಿಸುತ್ತದೆ. ಒಂದು ರೀತಿಯ ಭಾವುಕ ಏಕತೆ ಕವಿ ಮತ್ತು ಸಮಷ್ಟಿಯನ್ನು ಜೋಡಿಸುತ್ತದೆ. ಈ ದೃಷ್ಟಿಯಿಂದ ಬೇಂದ್ರೆಯ ನಂತರ ಅತ್ಯಂತ ಹೆಚ್ಚು ಸಾರ್ವಜನಿಕ ಅಸ್ತಿತ್ವವುಳ್ಳ ಕಾವ್ಯ ಬರೆದ ಕವಿಯೆಂದರೆ ಸಿದ್ಧಲಿಂಗಯ್ಯನವರೇ ಇರಬೇಕು.
|
| |
|
|
|
|
|
|
|
|
|