|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
‘ನಾನೊಬ್ಬನು ಬದುಕಿದರೆ ಸಾಕು‘ ಎಂದು ಪರಮ ಸ್ವಾರ್ಥದಲ್ಲಿ, ಅಪರಿಮಿತ ನಿರ್ಲಕ್ಷ್ಯದಲ್ಲಿ ಹೊರಟ ಮನುಷ್ಯ, ತನ್ನೊಡನೆ ಈ ಭೂಮಿಯನ್ನು ಹಂಚಿಕೊಂಡ ಪಶು ಪಕ್ಷಿಗಳನ್ನು ಉಳಿಸಿಕೊಳ್ಳದೆ, ತಾನು ಉಳಿಯಲಾರ. ಇಂದು ನಮ್ಮ ನಗರಗಳಲ್ಲಿ ಗುಬ್ಬಿಗಳು ಕಾಣೆಯಾಗುತ್ತಿವೆ ಅಂದರೆ ನಮ್ಮ ನಗರದ ಪ್ರದೂಶಿತ ಪರಿಸರ ಮಾನವನಿಗೂ ಅಪಾಯದ್ದು ಎಂಬುದರ ಮುನ್ಸೂಚನೆ ಇದು. ನಾಸಿಕ್ ನಗರದ ಮೊಹಮ್ಮದ್ ದಿಲಾವರ್ ಗುಬ್ಬಿಯನ್ನು ಉಳಿಸುವ ಕಾಯಕದಲ್ಲಿ ಉತ್ಕಟವಾಗಿ ತೊಡಗಿರುವ ಅಪರೂಪದ ವ್ಯಕ್ತಿ. ‘ನೇಚರ್ ಫಾರೆವರ್ ಸೊಸೈಟಿ‘ಯನ್ನು ಸ್ಥಾಪಿಸಿ, ನಮ್ಮೆಲ್ಲರ ಗಮನ ಗುಬ್ಬಿಯತ್ತ ಹರಿಯುವಂತೆ ಮಾಡಿದವರು. ಇಸವಿ 2012ರಲ್ಲಿ ದಿನಾಂ ಮಾರ್ಚ್ 20ನ್ನು, ‘ವಿಶ್ವ ಗುಬ್ಬಿ ದಿನ‘ವಾಗಿ ಘೋಷಿಸಲು ಬಹುತೇಕ ಕಾರಣವಾದವರು. ಇದು ದಿಲಾವರ್ ಅವರ ಕತೆ, ‘ಗುಬ್ಬಿ ಮನುಷ್ಯ‘ನ ಕತೆ. ಇದು ಗುಬ್ಬಿಯ ಕತೆಯೂ ಹೌದು. ಇದು ಓರ್ವ ಯುವಕನ ಗುಬ್ಬಚ್ಚಿಗಳನ್ನು ರಕ್ಷಿಸುವ ಭಾವುಕ ಪಯಣದ ಮತ್ತು ಪ್ರಯತ್ನದ ಕತೆ. ನಮ್ಮ ಮಕ್ಕಳಿಗೆ ನಾವು ಹೇಳಬಹುದಾದ ಪರಿಸರ ಪ್ರೇಮದ ಕತೆ. ಹಕ್ಕಿಗಳನ್ನು ನಮ್ಮ ಮನೆಯಂಗಳಕ್ಕೆ ಮನದಂಗಳಕ್ಕೆ ಮತ್ತೆ ಕರೆತರುವ ಪ್ರೀತಿಯ ಕತೆ.
|
ಶ್ರೀಮತಿ ನೇಮಿಚಂದ್ರ ವೃತ್ತಿಯಿಂದ ಎಂಜಿನಿಯರ್. ಪ್ರವೃತ್ತಿಯಿಂದ ಲೇಖಕಿ. ಬರಹದಲ್ಲಿ ವಿಶಿಷ್ಟ ಶೈಲಿಯನ್ನು ರೂಡಿಸಿಕೊಂಡವರು. ಸಮಾಜದ ಬಗ್ಗೆ, ಅದರಲ್ಲೂ ಮಹಿಳೆಯರ ಬಗ್ಗೆ ವಿಶೇಷ ಕಳಕಳಿ. ಪ್ರವಾಸಾಸಕ್ತ ಸಾಹಸಿ. ಕತೆಗಾರ್ತಿಯಾಗಿ ಅಂಕಣಕಾರರಾಗಿ ಪರಿಚಿತರು. ಇವರ ‘ಬದುಕು ಬದಲಿಸಬಹುದು ಭಾಗ ೧,೨,೩‘, ‘ಪೆರುವಿನ ಪವಿತ್ರ ಕಣಿವೆಯಲ್ಲಿ‘, ‘ಯಾದ್ ವಶೇಮ್‘, ‘ದುಡಿವ ಹಾದಿಯಲಿ ಜೊತೆಯಾಗಿ‘, ‘ಕಾಲುಹಾದಿಯ ಕೋಲ್ಮಿಂಚುಗಳು - ಮಹಿಳಾ ವಿಜ್ಞಾನಿಗಳು‘, ‘ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು‘ ಮುಂತಾದ ಹಲವು ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.
|
|
| |
|
|
|
|
|
|
|
|
|