Items
0
Total
  0.00 
Welcome Guest.

 
Rs. 150   
10%
 
 
Rs. 135/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಲಡಾಯಿ ಪ್ರಕಾಶನ, Ladai Prakashana
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 200
ಪುಸ್ತಕದ ಗಾತ್ರ : 1/8 Demy Size
ISBN : 9789381503331
ಕೋಡ್ : 186738

ನೋಡಲು ಕಿಲಾಡಿ ಹುಡುಗನಂತೆ ಕಾಣುವ ಹೊಳೆವ ಕಣ್ಣುಗಳ ತೇಜೋಮಯ ತರುಣ; ಬಡರೋಗಿಗಳನ್ನು, ಕೃಷಿಕರನ್ನು, ಗಣಿ ಕೆಲಸಗಾರರನ್ನು ಕಂಡು ಅವರಿಗಾಗಿ ಏನಾದರೂ ಮಾಡಲೇಬೇಕೆಂದು ಪಣತೊಟ್ಟ ವೈದ್ಯ; ಬದುಕಿನ ಕೊನೆಯ ಕ್ಷಣಗಳಲ್ಲಿ ಬೊಲಿವಿಯನ್ ಪರ್ವತಗಳಲ್ಲಿ ಅಲೆದಾಡುವಾಗ ತನ್ನ ಒರಟು ಉಣ್ಣೆಯ ಬ್ಯಾಗಿನಲ್ಲಿ ಆಯುಧಗಳ ಜೊತೆ ನೆರೂಡನ ಕ್ಯಾಂಟೋ ಜನರಲ್ ಕವಿತೆ ಪುಸ್ತಕ ಇಟ್ಟುಕೊಂಡ ಕಾವ್ಯಪ್ರೇಮಿ; ಒಂದು ದೇಶದಲ್ಲಿ ಹುಟ್ಟಿ, ಮತ್ತೊಂದು ದೇಶಕ್ಕಾಗಿ ಹೋರಾಡಿ, ಮಗದೊಂದು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣವೊಪ್ಪಿಸಿದ ಹೋರಾಟಗಾರ: ಬದುಕಿದ ೩೯ ವರ್ಷಗಳಲ್ಲಿ ವಿಶ್ವದ ಮುಕ್ಕಾಲು ದೇಶಗಳ ಸಂದರ್ಶಿಸಿದ ಜಂಗಮ; ಜಗತ್ತಿನ ಅಸಂಖ್ಯ ಜನರ ಸ್ಫೂರ್ತಿ;

ಅವ ಅರ್ನೆಸ್ಟೋ ಗೆವಾರಾ ಡಿ ಲಾ ಸೆರ‍್ನಾ. ಸಂಕ್ಷಿಪ್ತವಾಗಿ ಚೆಗೆವಾರ. ಪ್ರೀತಿಯಿಂದ ಚೆ..

ಇಲ್ಲಿ ಅನುವಾದಿಸಲಾಗಿರುವ ‘ಮೋಟಾರ್ ಸೈಕಲ್ ಡೈರೀಸ್’ ಅವನ ಎರಡನೆಯ ತಿರುಗಾಟದ ಅನುಭವವನ್ನು ಟಿಪ್ಪಣಿಯ ರೂಪದಲ್ಲಿ ಹೊಂದಿರುವಂಥದು. ೧೯೫೧ರ ಅಕ್ಟೋಬರಿನಿಂದ ಅರ್ಜೆಂಟೀನಾ, ಚಿಲಿ, ಪೆರು, ಈಕ್ವೆಡಾರ್, ಕೊಲಂಬಿಯಾ, ವೆನಿಜುವೆಲಾ, ಪನಾಮಾ ಮತ್ತು ಮಿಯಾಮಿಗಳಲ್ಲಿ ಸುತ್ತಾಡಿ ಅಲ್ಲಿಂದ ಮನೆಗೆ ವಾಪಸಾದ ಅವನ ತಿರುಗಾಟದ ಅನುಭವ ಈ ಪುಸ್ತಕ. ಈ ಕೃತಿ ಕೆಲವೆಡೆ ಲವಲವಿಕೆಯಿಂದ ಓದಿಸಿಕೊಂಡೂ ಹೋಗುತ್ತದೆ. ಮತ್ತೆ ಕೆಲವೆಡೆ ಅವರು ಎಲ್ಲಿ ಹತ್ತಿ ಎಲ್ಲಿ ಇಳಿದರು ಎಂದು ತಿಳಿಯದೇ ಗೊಂದಲಗೊಳಿಸುತ್ತದೆ. ಕೆಲ ಐತಿಹಾಸಿಕ ಸ್ಥಳದ ವಿವರಗಳೂ ಅಸ್ಪಷ್ಟ ಹಾಗೂ ಅಪೂರ್ಣವಾಗಿದೆ. ಬಹುಶಃ ಸ್ಪ್ಯಾನಿಶ್ ಹೆಸರುಗಳಿರುವ ಆ ಸ್ಥಳಗಳ ಕುರಿತ ನಮ್ಮ ಅಪರಿಚಿತತೆ ಅದಕ್ಕೆ ಕಾರಣವಿರಬಹುದು. ಆದರೆ ವಿವರಗಳು ಪೇಲವ ಅನಿಸುವ ಹೊತ್ತಿಗೆ ಮಿಂಚಿನಂತೆ ಎದೆಯಾಳದ ಒಂದೆರಡು ಸಾಲುಗಳನ್ನು ಹೊಳೆಯಿಸಿಬಿಡುವ ಚೆ ನಿರೂಪಣೆಗೆ ಜೀವ ತುಂಬುತ್ತಾನೆ. ಅವರ ತರುಣ ಹುಮ್ಮಸ್ಸು ಮತ್ತು ಚೈತನ್ಯ ಓದುಗನಲ್ಲೂ ಜೀವ ಸಂಚಲನ ಉಂಟುಮಾಡುತ್ತದೆ. ಅದಕ್ಕೆ ಹುಂಬತನದ ನಡುವೆ ಮಿಂಚುವ ಎದೆಯಾಳದ ಎರಡು ಸಾಲುಗಳಾಗಿ ಚೆ ನಿಮ್ಮ ಮುಂದಿದ್ದಾನೆ.

Best Sellers
ಸರ್ವಾಂಗೀಣ ಬೆಳವಣಿಗೆಗಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋವೃತ್ತಿ ಪೋಷಕರ ಜವಾಬ್ದಾರಿ
ಅಬ್ದುಲ್ ರೆಹಮಾನ್ ಪಾಷ ಎಂ, Abdul Rehman Pasha M
Rs. 15/-   Rs. 30
ಕುಮಾರವ್ಯಾಸ ಕಥಾಂತರ - ಅರಣ್ಯ ಪರ್ವ ವಿರಾಟ ಪರ್ವ
ವೆಂಕಟೇಶಮೂರ್ತಿ ಎಚ್ ಎಸ್, Venkateshmurthy H S
Rs. 270/-   Rs. 300
ವಾಯುಪುತ್ರರ ಶಪಥ
ಅಮೀಶ್, Amish
Rs. 342/-   Rs. 380
ಕರ್ನಾಟಕದ ಸಂಕ್ಷಿಪ್ತ ಇತಿಹಾಸ (ಕರ್ನಾಟಕ ಇತಿಹಾಸ)
ಸೂರ್ಯನಾಥ ಕಾಮತ್, Suryanath Kamath
Rs. 198/-   Rs. 220

Latest Books
ಒತ್ತಡ
ಬಳೂರಗಿ ಡಿ ಆರ್, Baluragi D R
Rs. 90/-   Rs. 100
ತುತ್ತು ತತ್ತ್ವ : ಆಹಾರ, ಆರೋಗ್ಯ, ಆನಂದ
ಕೆ ಸಿ ರಘು, K C Raghu
Rs. 135/-   Rs. 150
ಅರೆ ಬೆಳಕು
ಜೋಗಿ, Jogi
Rs. 135/-   Rs. 150
ಡಾ. ಯು ಆರ್ ರಾವ್ : ವಿಶ್ವಮಾನ್ಯರು
ಸತ್ಯ ಸಿ ಆರ್, Satya C R
Rs. 27/-   Rs. 30


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.