|
|
|

| Rs. 90 | 10% |
Rs. 81/- | |
 |
Dispatched within 7 Business Days |
 | FREE Home Delivery (For purchase of Rs 250/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಹೆಸರಿನಲ್ಲೇನಿದೆ ಎಂದು ಕೆಲವರು ಉಪೇಕ್ಷೆ ಮಾಡುತ್ತಾರಾದರೂ, ತಮ್ಮ ಮಕ್ಕಳನ್ನು ಹೆಸರಿನಿಂದ ಗುರುತಿಸಲು ಪ್ರಾರಂಭಿಸಿದ ತಂದೆತಾಯಿಯರನ್ನು ಪ್ರಾಯಶಃ ಹೆಸರುಗಳ ಆವಿಷ್ಕಾರರು ಎಂದು ಕರೆಯಬಹುದು. ತಮ್ಮ ಮಗುವಿಗೆ ಒಂದು ಒಳ್ಳೆಯ ಹೆಸರು ಸೂಚಿಸುವಂತೆ ಗೆಳೆಯರನ್ನು, ಪರಿವಾರದವರನ್ನು ಸಲಹೆ ಕೇಳುವುದು ಅಪರೂಪದ ವಿಷಯವಲ್ಲ. ಹಾಗೇ ಚೆನ್ನಾಗಿಲ್ಲದ ತಮ್ಮ ಹೆಸರಿನ ಬಗ್ಗೆ ಕೊನೆಯವರೆಗೆ ಮುಜುಗರ ಪಟ್ಟುಕೊಳ್ಳುವವರಿದ್ದಾರೆ. ತಮಗೆ ಇಷ್ಟವಾಗದ ಹೆಸರನ್ನು ಬದಲಾಯಿಸಿಕೊಳ್ಳುವವರೂ ಇದ್ದಾರೆ. ಇಂಥ ಯಾವುದೇ ಪ್ರಶ್ನೆಗಳನ್ನು ಸರಾಗವಾಗಿ ಬಗೆಹರಿಸುವ ರೀತಿಯಲ್ಲಿ ಶಾಂತಾ ನಾಡಗೀರ ಅವರು ನಿಮ್ಮ ಮುದ್ದು ಮಗುವಿಗೊಂದು ಅರ್ಥಪೂರ್ಣ ಹೆಸರು ಸಂಕಲಿಸಿ ಕೊಟ್ಟಿದ್ದಾರೆ. ಇದರಲ್ಲಿರುವ ಸಾವಿರಾರು ಹೆಸರುಗಳಲ್ಲಿ ನಿಮ್ಮ ಕಂದನಿಗೆ ಒಂದು ಹೆಸರನ್ನು ಆಯ್ದುಕೊಳ್ಳುವುದು ತೊಡಕಾಗಲಾರದು. ಹೆಸರಿನ ಅರ್ಥ ವಿವರಗಳು ಈ ಕೃತಿಯಲ್ಲಿ ಅಡಗಿವೆ. ಇದೇ ಇದರ ವೈಶಿಷ್ಟ್ಯ. ನವದಂಪತಿಗಳಿಗೆ ನೀವು ನೀಡಲಿರುವ ಉಡುಗೊರೆಯ ಜೊತೆಗೆ ಈ ಪುಸ್ತಕ ಸೇರಿಸುವುದರಿಂದ ಉಡುಗೊರೆಯ ಮಹತ್ವ ಹೆಚ್ಚುವುದರಲ್ಲಿ ಸಂಶಯವಿಲ್ಲ.
|
| |
|
|
|
|
|
|
|
|