|
|
|

| Rs. 135 | 10% |
Rs. 122/- | |
 |
Dispatched within 7 Business Days |
 | FREE Home Delivery (For purchase of Rs 250/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
“ಬರೀ ಮಾತಾಡಿದ್ದರೆ ನಾನು ಇಲ್ಲಿಯವರೆಗೂ ಬರಬೇಕಿರಲಿಲ್ಲ. ನಿಮ್ಮ ಮಗ ನನ್ನ ಮಗಲ ಮನಸ್ಸು ಹೃದಯನ ಮುಟ್ಟಿದ್ದಾನೆ. ಇನ್ನೊಂದು ಮಾತು ಬೇಡ. ದಯವಿಟ್ಟು ನಿಮ್ಮ ಸೊಸೆಯಾಗಿ ಸ್ವೀಕರಿಸಿ ಶಂಕರಯ್ಯನವರೇ” ಇದನ್ನ ಸಿಂಧುವಿನ ತಂದೆ ಹೇಳಿದ್ದು.
ಹೃದಯ ಮನಸ್ಸುಗಳ ಶ್ರೇಷ್ಠತೆಯ ಜೊತೆ ಅದರ ನೆಲೆ-ಬೆಲೆಗಳನ್ನ ಎತ್ತಿ ಹಿಡಿಯಲು ಪ್ರತಿಯೊಂದು ಪಾತ್ರಗಳು ಪ್ರಯತ್ನ ಮಾಡಿವೆ. ಅದಕ್ಕೆ ಬೇಕಾಗುವ ಕಲಾತ್ಮಕತೆ, ವಿಶೇಷತೆ, ಸೂಕ್ಶ್ಮತೆಯ ನಿರೂಪಣೆಯ ಕಾದಂಬರಿ
|
ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.
|
|
| |
|
|
|
|
|
|
|
|
|