|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
`ನೈಸರ್ಗಿಕ ಸಂಪನ್ಮೂಲಗಳು (ವಿಜ್ಞಾನ ಸರಳ ಪರಿಚಯ)` ಪುಸ್ತಕವು ಮಾನವನನ್ನುನಿಸರ್ಗದ ಮಗು ಎನ್ನುವುದುಂಟು, ಹೀಗಾಗಿಯೇ ನಿಸರ್ಗ ಅಥವಾ ಪ್ರಕೃತಿಯನ್ನು ‘ಪ್ರಕ್ರುತಿ ಮಾತೆ‘,‘ಭೂತಾಯಿ‘ ಎಂದು ಗೌರವಿಸುವ, ಪೂಜಿಸುವ ಸಂಪ್ರಾಯ, ಜಗತ್ತಿನ ಅನೇಕ ಸಂಸ್ಕೃತಿಗಳಲ್ಲಿವೆ. ನೈಸರ್ಗಿಕ ಸಂಪನ್ಮೂಲಗಳು ಭೂಮಿ ಅಥವಾ ಕಚ್ಛಾ ವಸ್ತುಗಳನ್ನು , ಪರಿಸರದಲ್ಲಿ ಮಾನವರಿಂದ ಸ್ಥಾನಪಲ್ಲಟಕ್ಕೆ ಈಡಾಗದೇ ಇರುವಾಗ ಅವು ಪ್ರಾಕೃತಿಕ ರೂಪದಲ್ಲಿ ಇರುತ್ತವೆ. ನೈಸರ್ಗಿಕ ಸಂಪನ್ಮೂಲವನ್ನು ವಿವಿಧ ಪರಿಸರ ವ್ಯವಸ್ಥೆಯಲ್ಲಿ ಅಸ್ತಿತ್ವದಲ್ಲಿರುವ ಜೀವವೈವಿಧ್ಯತೆಯ ಆಧಾರದ ಮೇಲೆ ವಿಂಗಡಿಸಲಾಗಿದೆ.
ನೈಸರ್ಗಿಕ ಸಂಪನ್ಮೂಲಗಳನ್ನು ಹೀಗೆ ವಿಂಗಡಿಸಬಹುದು: ನೈಸರ್ಗಿಕ ಸಂಪನ್ಮೂಲಗಳೆಲ್ಲವೂ ಪರಿಸರ ಜನ್ಯ. ಹೆಚ್ಚಿನವುಗಳು ನಮ್ಮ ಉಳಿವಿಕೆಗೆ ಅತ್ಯವಶ್ಯಕ, ಮಿಕ್ಕವು ನಮ್ಮ ಬಯಕೆ ಪೂರೈಸಲು ಇರುವ ಸಾಧನಗಳು. ನೈಸರ್ಗಿಕ ಸಂಪನ್ಮೂಲಗಳನ್ನು ವಿವಿಧ ರೀತಿಯಲ್ಲಿ ವಿಂಗಡಿಸಬಹುದು.
ನೈಸರ್ಗಿಕ ಸಂಪನ್ಮೂಲಗಳು:
1, ನವೀಕರಿಸಬಹುದಾದ ಸಂಪನ್ಮೂಲಗಳು:
ಬರಿದಾಗದ ಸಂಪನ್ಮೂಲ: ಸೂರ್ಯನ ಬೆಳಕು, ಗಾಳಿ, ನೀರು.
ಬರಿದಾಗ ಬಹುದಾದ ಸಂಪನ್ಮೂಲ : ಮಣ್ಣು, ಅಂತರ್ಜಲ, ಅರಣ್ಯ, ವನ್ಯಜೀವಿ.
2, ನವೀಕರಿಸಲಾಗದ ಸಂಪನ್ಮೂಲಗಳು:
ಪುನರ್ಬಳಕೆ ಸಾಧ್ಯವಾದ ಸಂಪನ್ಮೂಲ: ಲೋಹಗಳು.
ಪುನರ್ಬಳಕೆ ಸಾಧ್ಯವಿಲ್ಲದ ಸಂಪನ್ಮೂಲ: ಕಲ್ಲಿದ್ದಲು, ಪೆಟ್ರೋಲ್, ನೈಸರ್ಗಿಕ ಅನಿಲ.
ಮಾನವ ಕೈವಾಡವಿಲ್ಲದೆಯೇ ತಾವಾಗಿಯೇ ಕ್ಷೀಣಿಸುವ ಸಂಪನ್ಮೂಲಗಳು ಪ್ರಕೃತಿಯಲ್ಲಿವೆ. ಯುರೇನಿಯಮ್ ನಂತಹ ವಿಕಿರಣಪಟುತ್ವವುಳ್ಳ ಧಾತುಗಳು ಇಅದಕ್ಕೊಂದು ಉದಾಹರಣೆ.
|
| |
|
|
|
|
|
|
|
|
|