
|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಂಕಿತ ಪುಸ್ತಕ, Ankita Pustaka |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2018 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
216 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9789387192188 |
ಕೋಡ್ |
: |
1115073 |
``ನಾಳೆಗೂ ಇರಲಿ ನೀರು`` ಇಸ್ರೇಲಿನ ನೀರಿನ ಯಶೋಗಾಥೆಯನ್ನು ವಿಶದವಾಗಿ ಬಣ್ಣಿಸುವ ಒಂದು ಸುಂದರ ಕೃತಿ. ಸೇತ್ ಏಮ್.ಸೀಗೆಲ್ ಬರೆದಿರುವ ಇಂಗ್ಲಿಷ್ ಮೂಲ ಕೃತಿ ``Let There Be Water`೧` ಅನ್ನು ರಾಘವೇಂದ್ರ ಹೆಗಡೆ ಕನ್ನಡಕ್ಕೆ ಅನುವಾದಿಸಿದ್ದು ಮೂಲ ಕೃತಿ 2015 ರ ನ್ಯೂಯೊರ್ಕ್ ಟೈಮ್ಸ್ ನ ಹತ್ತು ಅತಿ ಹೆಚ್ಚು ಜನಪ್ರಿಯ ಪುಸ್ತಕಗಳಲ್ಲೊಂದಾಗಿತ್ತು.
ನೀರಿನ ಬಿಕ್ಕಟ್ಟಿನ ಕಥೆಗಳು ಜಗತ್ತಿನ ಮೂಲೆ ಮೂಲೆಇಂದ ಪ್ರತೀದಿನ ಬರುತ್ತಲಿವೆ. ``ನಾಳೆಗೂ ಇರಲಿ ನೀರು`` ಇಸ್ರೇಲಿಗರಂತೆ, ಹೇಗೆ ವಿಶ್ವದ ದೇಶಗಳು, ನಗರಗಳು, ಹಳ್ಳಿಗಳು, ವಾಣಿಜ್ಯಉದ್ದಿಮೆಗಳು ಮತ್ತು ಜನ ಸಾಮಾನ್ಯರು ಜಾಣ ಆಯ್ಕೆಗಳಿಂದ, ವಿವಿಧ ವಿಧಾನಗಳನ್ನು ಅಳವಡಿಸಿಕೊಂಡು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯಎಂದು ತೋರಿಸುವ ಒಂದು ಪ್ರಯತ್ನ.
ದೇಶದ ಶೇಕಡಾ 60 ರಷ್ಟು ಪ್ರದೇಶ ಮರುಭೂಮಿ ಇಂದ ಕೂಡಿದ್ದರೂ ಮತ್ತು ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಯ ಹೊರತಾಗಿಯೂ, ಇಸ್ರೇಲ್ ದಶಕಗಳಿಂದ ನೀರಿನ ನಿರ್ವಹಣೆಮತ್ತು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಜಗತ್ತಿನ ಬೇರೆಲ್ಲ ದೇಶಗಳಿಗಿಂತ ಮುಂಚೂಣಿಯಲ್ಲಿದೆ.
ಇಸ್ರೇಲಿನ ರಾಷ್ಟ್ರೀಯ ಏಕತೆ, ಆರ್ಥಿಕ ಭಲಾಢ್ಯತೆ, ಮತ್ತು ಕ್ರಿಯಾತ್ಮಕ, ಅಭಿವೃದ್ಧಿಶೀಲ ಆಧುನಿಕ ಸಮಾಜವನ್ನು ನಿರ್ಮಿಸುವಲ್ಲಿ ನೀರು ಪ್ರಮುಖ ಪಾತ್ರ ನಿರ್ವಹಿಸಿದೆ. ಇದು ಸಾಧ್ಯವಾಗಿರುವುದು ಇಸ್ರೇಲಿಯರ ನೀರನ್ನು ಪೂಜಿಸುವ ಮತ್ತು ನೀರಿನ ಮಹತ್ವವನ್ನು ಅರ್ಥೈಸಿಕೊಳ್ಳುವ ಸಂಸ್ಕೃತಿ ಮತ್ತು ಪ್ರಜ್ಞೆಯ ಪರಿಣಾಮದಿಂದ. ಆರಂಭದ ದಿನಗಳಲ್ಲಿ ರಾಷ್ಟ್ರ ನಿರ್ಮಾತೃಗಳು ತೆಗೆದುಕೊಂಡ ಹಲವಾರು ದಿಟ್ಟ ನಿರ್ಧಾರಗಳು, ಕಾಲ ಕಾಲಕ್ಕೆ ಭವಿಷ್ಯದ ತಲೆಮಾರಿನ ರಾಷ್ಟ್ರ ನಾಯಕರು ಧೈರ್ಯದಿಂದ ಯೋಚಿಸಿ ಜನಪ್ರಿಯವಲ್ಲದ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದರ ಫಲವಾಗಿ ಇಂದು ಇಸ್ರೇಲ್ ಜಲದಾಹಿ ಸಾಂಪ್ರದಾಯಿಕ ಕೃಷಿಯ ಪ್ರಪಂಚದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದೆ. ಇದಕ್ಕೆ ಪ್ರಮುಖ ಕಾರಣವಾಗಿದ್ದು ಹನಿ ನೀರಾವರಿ, ಬರ-ಸ್ನೇಹಿ ಸಸ್ಯಗಳಿಗೆ ಸ್ಮಾರ್ಟ್ ಬೀಜಗಳ ಸೃಷ್ಟಿ ಮತ್ತು ತ್ಯಾಜ್ಯ ನೀರಿನ ಮರುಬಳಕೆ.
ಡಿಸಾಲಿನೇಶನ್, ಅಂದರೆ ಸಮುದ್ರದ ನೀರಿನಿಂದ ಉಪ್ಪನ್ನು ಬೇರ್ಪಡಿಸಿ ಕುಡಿಯುವ ನೀರನ್ನಾಗಿ ಸಂಸ್ಕೃರಿಸುವ ವಿಧಾನಕ್ಕೆ ಸಂಬಂಧಿಸಿದ ತಾಂತ್ರಿಕ ರಂಗದಲ್ಲಿ ಇಸ್ರೇಲ್ ವಿಶ್ವದಲ್ಲೇ ಅಗ್ರೇಸರ. ತನ್ನ ಸ್ವಂತ ನೀರಿನ ಸರಬರಾಜನ್ನು ಭದ್ರಪಡಿಸಿಕೊಂಡಿದ್ದಲ್ಲದೆ, ಇಸ್ರೇಲ್ ಜಲಸಂಬಂಧಿ ತಂತ್ರಜ್ಞಾನದಲ್ಲಿ ಉನ್ನತ ರಫ್ತು ಉದ್ಯಮವನ್ನು ಸೃಷ್ಟಿಸಿದೆ. ದೇಶಗಳು ತಮ್ಮಆರ್ಥಿಕತೆಗಳನ್ನು ಹೇಗೆ ನಿರ್ಮಿಸಬಹುದೆಂಬುದಕ್ಕೆ ಸಕಾಲಿಕ ಉದಾಹರಣೆಯಾಗಿದೆ. ನಿಖರವಾದ ಸಂಶೋಧನೆ ಮತ್ತು ಜಾಗತಿಕ ಮುಖಂಡರು ಹಾಗು ಜಲ ಕ್ಷೇತ್ರದ ತಜ್ಞರ ಜೊತೆಗಿನಹಲವಾರು ಸಂದರ್ಶನಗಳನ್ನು ಆಧರಿಸಿದ , ಲೆಟ್ ದೇರ್ ಬಿ ವಾಟರ್ ಮತ್ತದರ ಕನ್ನಡ ಅನುವಾದ ಈ ಎಲ್ಲವು ಇಸ್ರೇಲಿಗೆ ಹೇಗೆ ಸಾಧ್ಯವಾಯಿತು ಎಂಬ ಸ್ಪೂರ್ತಿದಾಯಕ ಕಥೆಯನ್ನುಹೇಳುತ್ತದೆ.
ನೀರಿನ ನಿರ್ವಹಣೆಯಲ್ಲಿ ಇಸ್ರೇಲ್ ಸಾಧಿಸಿದ ಅದ್ಭುತ ಯಶಸ್ಸಿನ ಮತ್ತು ಅದರಿಂದಾದ ಅನೇಕ ಧನಾತ್ಮಕ ಪರಿಣಾಮಗಳ ಈ ಕಥೆ ಓದುಗರಿಗೆ ಹಲವಾರು ಯಶಸ್ಸಿನ ಪಾಠಗಳನ್ನುಒದಗಿಸುತ್ತದೆ. ರಾಜಕಾರಣಿಗಳು, ಅಧಿಕಾರಿಗಳು, ಸರ್ಕಾರ ಮತ್ತು ಸಾರ್ವಜನಿಕರಲ್ಲಿ ನೀರಿನಬಗ್ಗೆ ತುರ್ತಾಗಿ ಜಾಗ್ರತಿ, ಕಾಳಜಿ ಮತ್ತು ಕಳಕಳಿ ಮೂಡಬೇಕಾಗಿದೆ, ಅಸಡ್ಡೆ ನಿರ್ಲಕ್ಷ ತೊಡೆಯಬೇಕಿದೆ. ಸಮಯ ಮೀರುವ ಮುನ್ನ ನೀರಿಗೆ ನೀಡಬೇಕಾಗಿರುವ ಮಹತ್ವ ಮತ್ತು ಅವಧಾನ, ಈ ನಿಟ್ಟಿನಲ್ಲಿ ಆರಂಭವಾಗ ಬೇಕಿರುವ ಜನಾಭಿಯಾನ ಬಹು ದೊಡ್ಡದಿದೆ. ಕರ್ನಾಟಕ ಮತ್ತು ಭಾರತದ ಇತರ ಭಾಗಗಳಲ್ಲಿನ ನೀರಿನ ತೀವ್ರ ಅಭಾವವಿರುವ ಪ್ರಸಕ್ತ ಸನ್ನಿವೇಶದಲ್ಲಿ ನಾಳೆಗೂ ಇರಲಿ ನೀರು ಓದುಗರಿಗೆ ತೋರಿಸಲುಪ್ರಯತ್ನಿಸುತ್ತಿರುವ ಮಾರ್ಗ ಸಕಾಲಿಕ ಮತ್ತು ಬಹಳ ಸೂಕ್ತವೆಂದು ಸ್ಪಷ್ಟ.
ಜಲ ನಿರ್ವಹಣೆಯ ಯಶಸ್ಸಿನ ಕಥೆಗಳ ಜೊತೆ ಜೊತೆಗೆ ಇಸ್ರೇಲಿನ ಶ್ರಮಜೀವಿ ಜನತೆ, ಸಾಹಸೀ ಮತ್ತು ವರ್ಣಮಯ ಸಂಸ್ಕ್ರತಿ ಹಾಗು ಬೆರಗುಗೊಳಿಸುವ ಐತಿಹಾಸಿಕ ನೆಲದ ಇಣುಕುನೋಟವೇ ನಾಳೆಗೂ ಇರಲಿ ನೀರು.
|
ಸೇತ್ ಎಂ. ಸಿಗೆಲ್
ಸೇತ್ ಎಂ. ಸಿಗೆಲ್ ವೃತ್ತಿಯಲ್ಲಿ ವಕೀಲರು. ಸಾಮಾಜಿಕ ಕಾರ್ಯಕರ್ತರೂ, ಬರಹಗಾರರೂ ಹಾಗೂ ಯಶಸ್ವೀ ಉದ್ಯಮಿಯೂ ಆಗಿದ್ದಾರೆ. ನೀರು ಮತ್ತು ಇತರ ಕಾಯ್ದೆಗಳ ಕುರಿತಾದ ಇವರ ಬರಹಗಳು ದಿ ನ್ಯೂಯಾರ್ಕ್ ಟೈಮ್ಸ್, ದಿ ವಾಲ್ಸ್ಟ್ರೀಟ್ ಜರ್ನಲ್, ದಿ ಲಾಸ್ ಏಂಜಲೀಸ್ ಟೈಮ್ಸ್ ಹಾಗೂ ಇತರೆ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರು ಫಾರಿನ್ ರಿಲೇಶನ್ಶಿಪ್ ಕೌನ್ಸಿಲ್ನ ಸದಸ್ಯರೂ ಆಗಿದ್ದಾರೆ. ನೀರಿನ ಕುರಿತಾದ ಕಾನೂನು, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಕಾಯ್ದೆಗಳು, ರಾಷ್ಟ್ರೀಯ ಭದ್ರತೆ ಹೀಗೆ ಹಲವಾರು ವಿಷಯಗಳ ಭಾಷಣಕಾರರೂ ಆಗಿದ್ದಾರೆ. ಇವರ ಅಂತರ್ಜಾಲ ತಾಣ www.sethmsiegal.com ಇದರಲ್ಲಿ ನೀರಿನ ಕುರಿತಾದ ಅನೇಕ ಬರಹಗಳಿವೆ. ಇವರು ನ್ಯೂಯಾರ್ಕ್ ನಗರದಲ್ಲಿ ತಮ್ಮ ಕುಟುಂಬ ದೊಡನೆ ನೆಲೆಸಿದ್ದಾರೆ.
ಅನುವಾದಕರು: ರಾಘವೇಂದ್ರ ಹೆಗಡೆ
ರಾಘವೇಂದ್ರ ಹೆಗಡೆ ವೃತ್ತಿಯಲ್ಲಿ ವಕೀಲರು ಹಾಗೂ ಕಂಪೆನಿ ಕಾರ್ಯದರ್ಶಿ. ಕಳೆದ ಹತ್ತು ವರ್ಷಗಳಿಂದ ಇವರು ಭಾರತದ ಪ್ರಸಿದ್ಧ ಖಾಸಗೀ ವಿದೇಶಿ ಬಂಡವಾಳ ನಿರ್ವಹಣಾ ಸಂಸ್ಥೆ (ಪ್ರೈವೇಟ್ ಇಕ್ವಿಟಿ)ಯೊಂದರ ಕಾನೂನು ವಿಭಾಗದಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ (Executive Director) ಹುದ್ದೆಯಲ್ಲಿದ್ದಾರೆ.
ಮಲೆನಾಡಿನ ಪಶ್ಚಿಮಘಟ್ಟಗಳ ಸೆರಗಲ್ಲಿ ಹುಟ್ಟಿ ಬೆಳೆದು ದೇಶ ವಿದೇಶಗಳಲ್ಲಿ ವ್ಯಾಪಕವಾಗಿ ಸಂಚರಿಸಿರುವ ಇವರಿಗೆ ಪರಿಸರ ಸಂರಕ್ಷಣೆ, ನೀರಿನ ನಿರ್ವಹಣೆ, ಹಸಿರು ತಂತ್ರಜ್ಞಾನ, ಮರುಬಳಕೆ ಮತ್ತು Sustainable Living, ಹೃದಯಕ್ಕೆ ಹತ್ತಿರವಾದ ವಿಷಯಗಳು. ಇತ್ತೀಚಿನ ದಿನಗಳಲ್ಲಿ ತೀವ್ರವಾಗಿ, ಎಲ್ಲೆಲ್ಲೂ ನಿರಂತರವಾಗಿ ಕಾಡುತ್ತಿರುವ ನೀರಿನ ಅಭಾವ ಮತ್ತು ಬವಣೆ, ಜನಸಾಮಾನ್ಯರಲ್ಲಿ ನೀರಿನ ಬಗ್ಗೆ ಜಾಗೃತಿ ಹುಟ್ಟಿಸುವ ದಿಶೆಯಲ್ಲಿನ ಆಶಯ ಮತ್ತು ಇಸ್ರೇಲಿಗರಿಂದ ಕಲಿಯ ಬಹುದಾದಂತಹ ಪಾಠಗಳು, ಈ ಪುಸ್ತಕದ ಪ್ರಕಟಣೆಗೆ ಪ್ರೇರಣೆ ಯಾಗಿವೆ.
|
|
| | |
|
|