Items
0
Total
  0.00 
Welcome Guest.

 
Rs. 140   
10%
 
 
Rs. 126/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಸಂತ ಪ್ರಕಾಶನ, Vasantha Prakashana
ಈಗಿನ ಮುದ್ರಣದ ಸಂಖ್ಯೆ : 3
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 168
ಪುಸ್ತಕದ ಗಾತ್ರ : 1/8 Demy Size
ISBN : 9789383052356
ಕೋಡ್ : 181173

ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರದು ರಾಮೇಶ್ವರದ ಹುಡುಗನೊಬ್ಬ ಪ್ರಖ್ಯಾತ ವಿಜ್ಞಾನಿಯೂ ದೇಶದ ರಾಷ್ಟ್ರಪತಿಯೂ ಆದಂತಹ ಸ್ಫೂರ್ತಿದಾಯಕ ಮನೋಜ್ಞ ಕಥೆ. ಅದು ಸಂಕಲ್ಪಶಕ್ತಿ, ಧೈರ್ಯ, ನಿರಂತರ ಪರಿಶ್ರಮ ಹಾಗೂ ಗೆಲುವಿನ ಆಶಯವನ್ನು ಹೊತ್ತ ಕಥಾನಕವೇ ಆಗಿದೆ. ಈ ಕೃತಿಯಲ್ಲಿ ಡಾ.ಕಲಾಂ ಅವರು ತಮ್ಮ ಜೀವನದ ಮುಖ್ಯ ಘಟನೆಗಳನ್ನು, ಅವು ಚಿಕ್ಕವಿದ್ದರೂ, ಅವಲೋಕಿಸಿ ಅವು ಪ್ರತಿಯೊಂದೂ ಹೇಗೆ ತಮಗೆ ಗಾಢವಾದ ಪ್ರೇರಣೆ ಒದಗಿಸಿತೆಂಬುದನ್ನು ಓದುಗರಿಗೆ ತಿಳಿಸುತ್ತಾರೆ; ತಮ್ಮ ಮೇಲೆ ಗಾಢವಾಗಿ ಪ್ರಭಾವ ಬೀರಿದ ವ್ಯಕ್ತಿಗಳ ಬಗ್ಗೆ ಬೆಚ್ಚನೆಯ ಅಕ್ಕರೆಯಿಂದ ಮಾತನಾಡಿದ್ದಾರೆ; ಅಂತಹ ಮಹನೀಯರ ಸಂಗದಲ್ಲಿ ತಾವು ಕಲಿತ ಪಾಠಗಳೇನೆಂದು ತಿಳಿಸಿದ್ದಾರೆ; ಗಾಢವಾದ ದೈವಭಕ್ತಿಯ ತಂದೆ, ಕರುಣಾಳು ತಾಯಿ, ತಮ್ಮ ವಿಚಾರಗಳನ್ನೂ ಜೀವನ ದೃಷ್ಟಿಯನ್ನೂ ರೂಪಿಸಿದ ಮಾರ್ಗದರ್ಶಿಗಳು - ಇಂತಹ ತನ್ನ ಸಮೀಪವರ್ತಿಗಳ ಆಪ್ತ ಚಿತ್ರಣವೊಂದನ್ನು ಬಿಡಿಸಿಟ್ಟಿದ್ದಾರೆ.

ಬಂಗಾಳ ಕೊಲ್ಲಿಯ ತೀರದ ಸಣ್ಣಪಟ್ಟಣವೊಂದರಲ್ಲಿ ಬಾಲ್ಯವನ್ನು ಕಳೆದು, ಒಬ್ಬ ವಿಜ್ಞಾನಿಯಾಗುವ ಹಾಗೂ ನಂತರ ನಾಡಿನ ರಾಷ್ಟ್ರಪತಿಯಾಗುವ ಮಾರ್ಗದಲ್ಲಿನ ಹೋರಾಟಗಳ ಹಾಗೂ ತ್ಯಾಗಗಳ ಹೃದಯಸ್ಪರ್ಶಿ ಕಥನ ಇಲ್ಲಿದೆ.

ಭಾವುಕವೂ ಪ್ರಾಮಾಣಿಕವೂ ತೀರಾ ವೈಯಕ್ತಿಕವೂ ಆಗಿರುವ ನನ್ನ ಪಯಣ ಒಂದು ಅಪರೂಪದ ಅಂತೆಯೇ ಸಮೃದ್ಧ ಬದುಕಿನ ಮನೋಜ್ಞ ಕಥೆಯಾಗಿದೆ; ಹಾಗೆಯೇ ಮಕ್ಕಳಿಗೆ ಹಾಗೂ ಯುವಜನತೆಗೆ ಮಾರ್ಗದರ್ಶನ ಒದಗಿಸುವ ಕಥೆಯಾಗಿಯೂ ಮೈದಾಳಿದೆ.

ಅವುಲ್ ಪಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾಂ ೨೦೦೨ರಿಂದ ೨೦೦೭ರ ವರೆಗೆ ಭಾರತದ ಹನ್ನೊಂದನೇ ರಾಷ್ಟ್ರಪತಿಯಾಗಿದ್ದರು. ಅವರು ಪದ್ಮಭೂಷಣ, ಪದ್ಮವಿಭೂಷಣ ಹಾಗೂ ರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಪಡೆದವರು. ೧೯೩೧ರಲ್ಲಿ ತಮಿಳುನಾಡಿನ ರಾಮೇಶ್ವರದ್ಲ ಜನಿಸಿದ ಡಾ. ಕಲಾಂ ಅವರು ಮದ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಲಿತರು. ಭಾರತವನ್ನು ಬಾಹ್ಯಾಕಾಶ ಯಾನದ ರಾಷ್ಟ್ರಗಳ ಸಾಲಿಗೆ ಸೇರಿಸಿದ ರೋಹಿಣಿ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಉಡಾಯಿಸಿದ ಎಸ್‌ಎಲ್‌ವಿ-೩ ರಾಕೆಟ್ ಉಡಾವಣಾ ವಾಹನವನ್ನು ವಿನ್ಯಾಸ ಮಾಡಿ ಅಭಿವೃದ್ಧಿಪಡಿಸುವುದರಲ್ಲಿ ಕಲಾಂ ಮಹತ್ವದ ಪಾತ್ರ ವಹಿಸಿದರು. ಭಾರತದ ಯುದ್ಧಾನುಕೂಲದ ಕ್ಷಿಪಣಿ ವ್ಯವಸ್ಥೆಗಳ ರಚನೆಯಲ್ಲೂ ಅವರದೇ ಪ್ರಧಾನ ಪಾತ್ರ, ಹಾಗೂ ೧೯೯೮ರ ಪರಮಾಣು ಸರಣಿ ಪರೀಕ್ಷೆಗಳಲ್ಲೂ ಅವರು ಮಹತ್ವದ ಪಾತ್ರ ವಹಿಸಿದರು. ತಂತ್ರಜ್ಞಾನ ಮಾಹಿತಿ, ಭವಿಷ್ಯಗ್ರಹಣ ಹಾಗೂ ಅಂದಾಜು ಮಂಡಯ (ಟೆಕ್ನಾಲಜಿ ಇನ್‌ಫರ್ಮೇಷನ್, ಫೋರ್‌ಕಾಸ್ಟಿಂಗ್ ಅಂಡ್ ಅಸೆಸ್‌ಮೆಂಟ್ ಕೌನ್ಸಿಲ್ - ಟಿಐಎಫ್‌ಎಸಿ) ಅಧ್ಯಕ್ಷರಾಗಿ ಹಾಗೂ ಓರ್ವ ಗಣ್ಯ ವಿಜ್ಞಾನಿಯಾಗಿ ೫೦೦ ಮಂ ತಜ್ಞರ ಸಹಾಯದೊಂಗೆ ಅವರು ೨೦೨೦ರ ತಂತ್ರಜ್ಞಾನ ಕಾಣ್ಕೆಯನ್ನು ರೂಪಿಸಿದರು. ಇದು ಭಾರತವನ್ನು ಒಂದು ಮುಂದುವರಿದ ರಾಷ್ಟ್ರವಾಗಿ ರೂಪಿಸುವುದಕ್ಕೆ ಮಾರ್ಗೋಪಾಯಗಳನ್ನೂ ನೀಲಿನಕ್ಷೆಯನ್ನೂ ಹಾಕಿಕೊಟ್ಟಿತು. ಸಲಹೆ ಕೊಡುತ್ತ, ಜನರೊಡನೆ ಸಂಪರ್ಕ ಬೆಳೆಸುತ್ತ ಮತೀಯ ಹಾಗೂ ಸಾಮಾಜಿಕ ವೈಷಮ್ಯಗಳು ನಿರ್ಮಾಣವಾದಲ್ಲೆಲ್ಲ ಅವುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತ ಕಲಾಂ ಅವರು ಇಂದು ಸಾಮಾಜಿಕ ಕ್ಷೇತ್ರಗಳಲ್ಲೂ ಜನ ಸಾಮಾನ್ಯರ ಕಣ್ಮಣಿಯಾಗಿದ್ದಾರೆ. ಭಾರತವನ್ನು ೨೦೨೦ರ ವೇಳೆಗೆ ಮುಂದುವರಿದ ರಾಷ್ಟ್ರವಾಗಿ ರೂಪಿಸುವ ಕನಸನ್ನು ಅವರು ಎಡೆಬಿಡದೆ ಹಿಂಬಾಸಿದ್ದಾರೆ. ಇದಕ್ಕಾಗಿ ಅವರು ದೇಶಾದ್ಯಂತ ಸುತ್ತಿ ಕಮ್ಮಟಗಳಲ್ಲೂ ಸೆಮಿನಾರುಗಳಲ್ಲೂ ಭಾಗವಹಿಸಿ ತಜ್ಞರನ್ನೂ ಯುವ ಜನಾಂಗದವರನ್ನೂ ಹುರಿದುಂಬಿಸುತ್ತಿದ್ದಾರೆ. ತಂತ್ರಜ್ಞಾನ ಸಂಸ್ಥೆಗಳಲ್ಲೂ ವಿಶ್ವವಿದ್ಯಾಲಯಗಳಲ್ಲೂ ಐಐಟಿ ಮತ್ತು ಐಐಎಂಗಳಲ್ಲಿಯೂ ಉಪನ್ಯಾಸಗಳನ್ನು ನೀಡುತ್ತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.

ಲೇಖಕರ ಇತರ ಕೃತಿಗಳು
10%
ಟರ್ನಿಂಗ್ ಪಾಯಿಂಟ್ಸ್ - ....
ಅಬ್ದುಲ್ ಕಲಾಂ ಎ ಪಿ ಜೆ, Abdul Kalam A p j
Rs. 170    Rs. 153
Rs. 140    Rs. 126
10%
ನಿಮ್ಮ ಭವಿಷ್ಯಕ್ಕೊಂದು ರೂಪ ....
ಅಬ್ದುಲ್ ಕಲಾಂ ಎ ಪಿ ಜೆ, Abdul Kalam A p j
Rs. 180    Rs. 162
Best Sellers
ಸಂಪೂರ್ಣ ಚಾಣಕ್ಯ ನೀತಿ - ಮೂಲ ಶ್ಲೋಕಗಳ ವ್ಯಾಖ್ಯಾನ ಸಹಿತ
ಹೇಮಲತಾ ಎಸ್, Hemalatha H
Rs. 90/-   Rs. 100
ಕನ್ನಡ ಛಂದಸ್ಸಿನ ಪ್ರವೇಶಿಕೆ
ಗಿರಿಗೌಡ ನೀ, Girigowda N
Rs. 45/-   Rs. 50
ಪೂರ್ಣಚಂದ್ರ ತೇಜಸ್ವಿ (ಜೀವನ ಮತ್ತು ಸಾಧನೆ)
ಮಹೇಶ್ವರಯ್ಯ ಎಚ್ ಎಂ, Maheshwaraiah H M
Rs. 68/-   Rs. 75
ತಂತು (Hard Cover)
ಭೈರಪ್ಪ ಎಸ್ ಎಲ್, S L Byrappa
Rs. 855/-   Rs. 900

Latest Books
ನಿಮ್ಮದು ಸರಿಯಾದ ನಿರ್ಧಾರವೇ ?
ಚಂದ್ರಶೇಖರ್ ಸಿ ಆರ್, Chandrashekar C R
Rs. 50/-   Rs. 55
ಜಾರ್ಜ್ ಆರ್ವೆಲ್ : ಆಯ್ದ ವೈಚಾರಿಕ ಪ್ರಬಂಧಗಳು
ಸತ್ಯನಾರಾಯಣ ಕೆ, Satyanarayana K
Rs. 135/-   Rs. 150
ಸಮಗ್ರ ಕನ್ನಡ ಸಾಹಿತ್ಯ ಸೌರಭ ದರ್ಶನ : ಸ್ಪರ್ಧಾತ್ಮಕ ಪರೀಕ್ಷೆಗೆ ಪಠ್ಯಕ್ರಮ ಆಧಾರಿತ
ಪ್ರೊ ರಾ ಶೀ ಸುಂಕದ, Prof Ra Sri Sunkada
Rs. 504/-   Rs. 530
ದಾವೂದ್ ಇಬ್ರಾಹಿಂನ ಜೊತೆ ನನ್ನ ಟೆಲಿಫೋನ್ ಸಂಭಾಷಣೆ ಹಾಗೂ ಕೆಲ ರೋಚಕ ಸಿಬಿಐ ತನಿಖೆಗಳು
ನೀರಜ್ ಕುಮಾರ್, Neeraj Kumar
Rs. 135/-   Rs. 150


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.