|
|
|

|  |
Dispatched within 7 Business Days |
 | FREE Home Delivery (For purchase of Rs 250/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ವ್ಯಾಕರಣದ ಅಭ್ಯಾಸ ಮೇಲುನೋಟಕ್ಕೆ ಸ್ವಲ್ಪ ಕಷ್ಟದ್ದು ಅಥವಾ ಬೇಸರ ಬರಿಸುವಂಥದ್ದು ಎನ್ನಿಸಬಹುದು. ವ್ಯಾಕರಣ ಜ್ಞಾನವಿಲ್ಲದಿದ್ದರೆ ಅಭಾಸಗಳಾಗುವುದೂ ಉಂಟು. ಹೀಗಾಗಿ ವ್ಯಾಕರಣದ ತಿಳಿವಳಿಕೆ ಅತ್ಯಗತ್ಯ. ಮಕ್ಕಳಿಗೆ ಬೇಸರವಾಗದ ರೀತಿಯಲ್ಲಿ ವ್ಯಾಕರಣ ಕಲಿಸಲು ಸಾಧ್ಯವಿದೆಯೆ? ಖಂಡಿತ ಸಾಧ್ಯವಿದೆ. ಹೊಸ ವಿಧಾನವನ್ನು ಅನುಸರಿಸಬೇಕಷ್ಟೆ! ಮಕ್ಕಳಿಗೆ ಮನರಂಜನೆ ಉಂಟುಮಾಡುವಂಥ ಚಿತ್ರಗಳ ಮೂಲಕ ವ್ಯಾಕರಣ ಕಲಿಸಲು ಸಾಧ್ಯವಾದರೆ, ಅವು ವರ್ಣ ಚಿತ್ರಗಳೂ ಆಗಿದ್ದರೆ, ಬೇಸರ ಹತ್ತಿರಕ್ಕೂ ಸುಳಿಯದು! ಈ ನಿಟ್ಟಿನಲ್ಲಿ ಇದೊಂದು ಹೊಸ ಪ್ರಯತ್ನ.
|
ಇದನ್ನು ರಚಿಸಿರುವ ಪ್ರೊ. ಬಿ. ಎಸ್. ರುಕ್ಕಮ್ಮ ಕನ್ನಡ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು. ಹಲವು ಲೇಖನಗಳನ್ನು, ವಿಮರ್ಶೆಗಳನ್ನು, ಸಣ್ಣ ಕಥೆಗಳನ್ನು ಬರೆದಿದ್ದಾರೆ. ಮಕ್ಕಳ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಹಲವು ಮಕ್ಕಳ ಕಥೆಗಳನ್ನು ರಚಿಸಿದ್ದಾರೆ, ಅನುವಾದಿಸಿದ್ದಾರೆ. ಇವುಗಳಿಗಾಗಿ ಅನೇಕ ಪುರಸ್ಕಾರಗಳನ್ನು ಪಡೆದಿದ್ದಾರೆ. ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ "ಅಧಿಕಾರದ ಕುರುಡು" ಮತ್ತು "ಸಚಿತ್ರ ಸರಳ ವ್ಯಾಕರಣ" ನವಕರ್ನಾಟಕದಿಂದ ಪ್ರಕಟವಾಗಿವೆ.
|
|
| |
|
|
|
|
|
|
|
|
|