|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಭಿನವ, Abhinava |
ಈಗಿನ ಮುದ್ರಣದ ಸಂಖ್ಯೆ |
: |
Revised |
ಮುದ್ರಣದ ವರ್ಷ |
: |
2017 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
80 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
1256987 |
ಪುಸ್ತಕದಿಂದ ಆಯ್ದ ಭಾಗ....
ನವ್ಯತೆಯ ಪರಿಕಲ್ಪನೆ...
ಚಲನಶೀಲವಾದ ಬದುಕಿನಲ್ಲಿ ಬದಲಾವಣೆ ತೀರ ಸಹಜ; ಅದು ಜೀವಂತಿಕೆಯ ಲಕ್ಷಣವೂ ಹೌದು. ಅಂತೆಯೇ ಜೀವಂತ ಭಾಷೆಯ ಸಾಹಿತ್ಯದಲ್ಲೂ ಕಾಲಕಾಲಕ್ಕೆ ಬದಲಾವಣೆ ನಡೆಯುತ್ತಿರುತ್ತದೆ. ಜಗತ್ತಿನ ಯಾವುದೇ ಭಾಷೆಯ ಸಾಹಿತ್ಯವನ್ನು ಗಮನಿಸಿದರೂ ಈ ಮಾತು ನಿಜ. ಒಂದು ಮಾದರಿಯ ಬರವಣಿಗೆ ಕ್ರಮೇಣ ತನ್ನ ಉತ್ಸಾಹ , ಶಕ್ತಿ ಕಳೆದುಕೊಂಡು ಸತ್ವಹೀನವಾಗುತ್ತದೆ. ಒಂದು ಸಂಪ್ರದಾಯ ವಾಗಿ ರೂಪುಗೊಂಡ ಕಾವ್ಯಮಾರ್ಗ ಕೆಲವು ಉತ್ತಮ ಕೃತಿಗಳನ್ನು ನೀಡಿದ ನಂತರದಲ್ಲಿ ತನ್ನನ್ನೇ ತಾನು ಅನುಕರಿಸುತ್ತಾ , ಶಬ್ದವಿಲಾಸವಾಗಿ ತತ್ಕಾಲೀನತೆಯ ಅಗತ್ಯವನ್ನು ಪೂರೈಸುವ ಶಕ್ತಿ ಕಳೆದುಕೊಳ್ಳುತ್ತದೆ. ಆಗ ಅದಕ್ಕೆ ಪ್ರತಿಭಟನೆ ಎಂಬಂತೆ ಹೊಸ ರೀತಿಯ ಬರವಣಿಗೆ ಚಲಾವಣೆಗೆ ಬರುತ್ತದೆ. ಕ್ರಮೇಣ ಅದೂ ಒಂದು ಸಂಪ್ರದಾಯವಾಗಿ ಇನ್ನೊಂದು ರೀತಿಗೆ ಹಾದಿ ಮಾಡಿಕೊಡುತ್ತದೆ. ಸಾವಿರ ವರ್ಷಗಳ ಇತಿಹಾಸ ದ ಕನ್ನಡ ಸಾಹಿತ್ಯ ಚರಿತ್ರೆಯನ್ನೇ ಗಮನಿಸಿದರೂ ಅನೇಕ ಬದಲಾವಣೆಗಳನ್ನು ನಾವು ಗಮನಿಸ ಬಹುದು. ಆರಂಭದಲ್ಲಿ ಪಂಪ ರನ್ನ ನಾಗಚಂದ್ರ ಮೊದಲಾದವರು ಚಂಪುವಿನಲ್ಲಿ ಬರೆದರು. ನಂತರ ಹನ್ನೆರಡನೇ ಶತಮಾನದ ವೇಳೆಗೆ ಮಹತ್ವದ ಪಲ್ಲಟ ಸಂಭವಿಸಿ ವಚನ ಚಳುವಳಿ ರೂಪುಗೊಂಡಿತು. ನಂತರದ ಹರಿಹರ ರಗಳೆಯನ್ನು ಬಳಸಿದ. ಹರಿಹರನ ನಂತರದ ಕವಿಗಳು ಷಟ್ಪದಿ ಸಾಂಗತ್ಯ ಬಳಸಿದರು. ಹೀಗೆ ಯಾವುದೇ ಸಾಹಿತ್ಯ ಪರಂಪರೆಯಾಗಲೀ ಕಾಲಕಾಲಕ್ಕೆ ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತಾ, ತನ್ನ ಕಾಲದ ಅಗತ್ಯಕ್ಕೆ ತಕ್ಕಂತೆ ಹೊಸ ರೂಪ ಪಡೆಯುತ್ತಾ ಹೋಗುತ್ತದೆ.
ಹೊಸ ಕಾವ್ಯಮಾರ್ಗವೊಂದು ಬಂದಾಗ ಅದು ಹಳೆಯದನ್ನು ಪ್ರತಿಭಟಿಸಿ ಅದರ ಸತ್ವ ತೀರಿತೆಂದು ಘೋಷಿಸುವುದು ಸಹಜ. ಅಂದಮಾತ್ರಕ್ಕೆ ಆ ಕಾವ್ಯಮಾರ್ಗದ ಉತ್ತಮಾಂಶಗಳನ್ನು , ಶ್ರೇಷ್ಠ ಕೃತಿಗಳನ್ನು ಹೊಸ ಕಾವ್ಯಮಾರ್ಗ ತಿರಸ್ಕರಿಸುತ್ತದೆ ಎಂದು ಅರ್ಥವಲ್ಲ. ಯಾವುದೇ ಹೊಸ ಕಾವ್ಯಮಾರ್ಗ ಹಳೆಯದರ ಮುಂದುವರಿದ ರೂಪವೇ ಆಗಿರುತ್ತದೆ, ಆದರೆ ಅದಕ್ಕಿಂತ ಭಿನ್ನವಾಗಿರುತ್ತದೆ ಅಷ್ಟೆ. ‘ಪರಂಪರೆಯ ತಳಹದಿಯ ಮೇಲೆಯೇ ಎಲ್ಲ ಹೊಸ ಪ್ರಯೋಗಗಳೂ ನಡೆಯುವುದು. ಹರಳೀಕರಣಗೊಂಡ ಪ್ರಯೋಗ ಗಳೇ ಪರಂಪರೆಯಾಗಿ ರೂಪುಗೊಳ್ಳುವುದು’ ಎಂಬ ಲೂಯಿಸ್ ಮ್ಯಾಕ್ನೀಸ್ ನ ಮಾತುಗಳನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಹೊಸದು ಬಂದಾಗ ಪರಂಪರೆ ಅದನ್ನು ತಕ್ಷಣ ಒಪ್ಪಿಕೊಳ್ಳುವುದಿಲ್ಲ , ತಿರಸ್ಕರಿಸುತ್ತದೆ. ಹಾಗೆಯೇ ಹೊಸದು ಹಳೆಯದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತ ತನ್ನನ್ನು ಸ್ಥಾಪಿಸಿಕೊಳ್ಳಲು ಪ್ರಯತ್ನಿಸುತ್ತದೆ. ಈ ಸಂಘರ್ಷ ಎಲ್ಲ ಕಾಲದಲ್ಲೂ ಸಹಜ ಪ್ರಕ್ರಿಯೆ. ಈ ಪ್ರಕ್ರಿಯೆಯ ಮೂಲಕವೇ ಸಾಹಿತ್ಯ ಪರಂಪರೆಯೊಂದು ನಿರ್ಮಾಣಗೊಳ್ಳುತ್ತದೆ. ತನ್ನ ಭಾಷೆಯ ಸಾಹಿತ್ಯವನ್ನು ಶ್ರೀಮಂತಗೊಳಿಸುತ್ತದೆ.
-ನರಹಳ್ಳಿ ಬಾಲಸುಬ್ರಹ್ಮಣ್ಯ
|
| |
|
|
|
|
|
|
|
|
|