|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಒಂದು ಕಾರನ್ನು ಓಡಿಸಲು ಅವಶ್ಯಕವಾದ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಸಾಕಷ್ಟು ಪರೀಕ್ಷೆಗಳು ನಡೆಯುತ್ತವೆ. ಅತಿ ಅವಶ್ಯಕ ಎನ್ನುವಷ್ಟು ಜ್ಞಾನ ಪಡೆದ ನಂತರವೇ ಕಾರನ್ನು ಓಡಿಸಲು ಲೈಸೆನ್ಸ್ ದೊರೆಯುತ್ತದೆ. ಅಂತಹುದರಲ್ಲಿ ಇಬ್ಬರು ವ್ಯಕ್ತಿಗಳ ಜೀವನಪೂರ್ತಿ ಸಂತಸ, ನೆಮ್ಮದಿಗಳನ್ನು ನಿರ್ಧರಿಸುವ ಮದುವೆಯನ್ನು ಯಾಕೆ ಆತುರಾತುರವಾಗಿ ಮಾಡಿ ಮುಗಿಸುತ್ತೇವೆ? ಈ ಮಾಂಗಲ್ಯ ತಂತುವು ನನ್ನ ಜೀವನಕ್ಕೆ ಕಾರಣವಾದುದು, ಇದನ್ನು ನಿನ್ನ ಕೊರಳಲ್ಲಿ ಕಟ್ಟುವೆನು. ನೀನು ನನ್ನೊಡನೆ ನೂರು ವರ್ಷಕಾಲ ಬಾಳು ಎಂದು ಮಾಂಗಲ್ಯವನ್ನು ಕಟ್ಟಬೇಕಾದ ವರನಿಗೆ ಹೇಳಿಸುವಾಗ ವಿವಾಹದ ಗಲಾಟೆಯಲ್ಲಿ ಮಂತ್ರದ ಅರ್ಥವೇ ಕೇಳಿಸಿರುವುದಿಲ್ಲ.
ತಕ್ಕ ಸಂಗಾತಿಯನ್ನು ಆರಿಸಿಕೊಳ್ಳುವುದರ ಬಗ್ಗೆ, ವೈವಾಹಿಕ ಜೀವನವನ್ನು ಸುಂದರವಾಗಿಸಿಕೊಳ್ಳುವುದರ ಬಗ್ಗೆ, ಮೂಡಿದ ಮನಸ್ತಾಪಗಳನ್ನು ಸಮರ್ಥವಾಗಿ ಪರಿಹರಿಸಿಕೊಳ್ಳುವುದರ ಬಗ್ಗೆ ಹ್ಹೂ...ಹ್ಹೂಂ ಇದ್ಯಾವದರ ಬಗ್ಗೆಯೂ ಯಾರೂ ಹೇಳುವುದಿಲ್ಲ. ಮದುವೆಯಾದವರಿಗೆ ದಾಂಪತ್ಯದ ಸುಖವನ್ನು ಸರಿಯಾಗಿ ಸವಿಯಲು, ಮದುವೆಯಾಗಬೇಕಾದವರಿಗೆ ಸುಂದರ ದಾಂಪತ್ಯಕ್ಕೆ ಸರಳ ಮಾರ್ಗದರ್ಶಿಯಾಗಿ, ಮದುವೆ ಬೇಡ ಅನ್ನುವವರಿಗೆ ದಾಂಪತ್ಯದ ನಿಜ ಅರ್ಥ ತಿಳಿಸಲು ಈ ಪುಸ್ತಕ ಪ್ರಕಟಗೊಳ್ಳುತ್ತಿದೆ. ವಿವಾಹಿತರು ಮದುವೆಯಾದ ಬಗ್ಗೆ ಬೇಸರಿಸದೆ ಸಂಭ್ರಮ ಪಡುವಂತೆ, ಅವಿವಾಹಿತರು ಮದುವೆಯಾದವರ ಬಗ್ಗೆ ಮರುಕ ಪಡದೆ ಅಸೂಯೆಯಿಂದ ನೋಡುವಂತೆ ಮಾಡಲು ನೀವು ಈ ಪುಸ್ತಕ ಓದಲೇಬೇಕು.
|
| |
|
|
|
|
|
|
|
|
|