Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 95   
10%
 
 
Rs. 86/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಸಂತ ಪ್ರಕಾಶನ, Vasantha Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2010
ರಕ್ಷಾ ಪುಟ : ಸಾದಾ
ಪುಟಗಳು : 190
ಪುಸ್ತಕದ ಗಾತ್ರ : 1/8 Demy Size
ISBN :
ಕೋಡ್ : 114074

ಎಳೆಯ ಮಕ್ಕಳದು ಮುಗ್ಧ ಮನಸ್ಸು. ಪೋಷಕರ, ಸಮಾಜದ ಪ್ರಭಾವಕ್ಕೆ ಒಳಗಾಗುವವರೆಗೂ ಅವರ ಮನಸ್ಸು ಒಳಿತು ಕೆಡುಕು, ಪ್ರೀತಿ ದ್ವೇಷ, ನೋವು ನಲಿವು, ನೀತಿ ಅನೀತಿ ಮುಂತಾದವುಗಳಲ್ಲಿ ವ್ಯತ್ಯಾಸ ಕಾಣದೆ ಪರಿಶುಭ್ರವಾಗಿರುತ್ತದೆ. ಹೀಗೆ ಪರಿಶುಭ್ರವಾಗಿರುವಾಗ ಜೀವನದ ಉನ್ನತ ಮೌಲ್ಯಗಳನ್ನು ಮನಗಾಣಿಸಿಕೊಡಬಲ್ಲ ಕತೆಗಳನ್ನು ಹೇಳಿದರೆ ಆ ಕತೆಗಳ ಒಟ್ಟು ಆಶಯ ಅವರ ಮನಸ್ಸಿನಲ್ಲಿ ಸ್ಥಿರವಾಗಿ ಬೇರೂರುತ್ತದೆ. ಹೀಗೆ ಬೇರೂರುವುದರಿಂದ ಅವರು ಮೌಲ್ಯಗಳನ್ನು ಕಡೆಗಣಿಸದೆ ಸನ್ಮಾರ್ಗದಲ್ಲಿ ತಮ್ಮ ಜೀವನವನ್ನು ರೂಪಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಮಕ್ಕಳಿಗೆ ಕಥಾರೂಪದಲ್ಲಿ ಮೌಲ್ಯಗಳನ್ನು ತಿಳಿಸಿಕೊಡುವ, ನೀತಿಯನ್ನು ಬೋಧಿಸುವ ಕೆಲವೇ ಕೃತಿಗಳಲ್ಲಿ ನೀತಿಚಿಂತಾಮಣಿಯೂ ಒಂದು. ಇದನ್ನು ಬರೆದವರು ಎಂ.ಎಸ್. ಪುಟ್ಟಣ್ಣನವರು (೧೮೫೪-೧೯೩೦) ಅವರು ಆಧುನಿಕ ಕನ್ನಡ ಸಾಹಿತ್ಯದ ರೂವಾರಿಗಳಲ್ಲಿ ಒಬ್ಬರು. ಸುಮಾರು ೧೨೫ ವರ್ಷಗಳಷ್ಟು ಹಿಂದೆ ಅವರು ಮಕ್ಕಳಿಗೆಂದೇ ಪುರಾಣೇತಿಹಾಸಗಳ ಕತೆಗಳನ್ನು ಪುನರ್ರಚಿಸಿ ಸಿದ್ಧಪಡಿಸಿದ ಅಮೂಲ್ಯ ಕೃತಿಯೇ ನೀತಿಚಿಂತಾಮಣಿ (೧೮೮೪). ನಮಗೆ ತಿಳಿದುಬಂದಿರುವಂತೆ ಈ ಪುಸ್ತಕ ಇದುವರೆಗೆ ಸುಮಾರು ಮೂವತ್ತಮೂರು ಮುದ್ರಣಗಳನ್ನು ಕಂಡಿದೆಯೆನ್ನುವದೇ ಇದರ ಜನಪ್ರಿಯತೆಗೆ ಸಾಕ್ಷಿ. ೧೬೦ಕ್ಕೂ ಹೆಚ್ಚು ಕತೆಗಳಿರುವ ಈ ಪುಸ್ತಕದ ಭಾಷೆ ಮತ್ತು ಶೈಲಿ ಇಂದು ಸ್ವಲ್ಪಮಟ್ಟಿಗೆ ಹಳತೆನ್ನಿಸುವುದು ಸಹಜ. ಆದ್ದರಿಂದ ಈ ಪುಸ್ತಕದ ಭಾಷೆಯನ್ನು ಇವತ್ತಿನ ಕನ್ನಡಕ್ಕೆ ತಕ್ಕಂತೆ ಪರಿವರ್ತಿಸಿ ಪರಿಷ್ಕರಿಸಬೇಕೆಂದು ನಮ್ಮ ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟರು. ಈಗ ನಮ್ಮ ಕೋರಿಕೆಯಂತೆ ಪ್ರಸಿದ್ಧ ಕತೆಗಾರ ಎಸ್ ದಿವಾಕರ್ ಈ ಪುಸ್ತಕವನ್ನು ಸೊಗಸಾಗಿ ಪರಿಷ್ಕರಿಸಿದ್ದಾರೆ. ಕತೆ ಎಂದರೆ ಕುತೂಹಲ ತಾಳುವ ಮಕ್ಕಳಿಗೂ ಅವರಿಗೆ ಕತೆ ಹೇಳುವ ಪೋಷಕರಿಗೂ ಸದಾ ಪ್ರಿಯವಾಗಬಲ್ಲ ಏಕೈಕ ಕೃತಿ ಈ ನೀತಿಚಿಂತಾಮಣಿ.

ಲೇಖಕರ ಇತರ ಕೃತಿಗಳು
10%
ಮಾಡಿದ್ದುಣ್ಣೋ ಮಹಾರಾಯ
ಪುಟ್ಟಣ್ಣ ಎಂ ಎಸ್, Puttanna M S
Rs. 110    Rs. 99
10%
ನೀತಿ ಚಿಂತಾಮಣಿ : ....
ಪುಟ್ಟಣ್ಣ ಎಂ ಎಸ್, Puttanna M S
Rs. 250    Rs. 225
Best Sellers
ಬದುಕು ಬೆಳಕು
ರುದ್ರೇಶ್ ಬಿ ಟಿ, Rudresh B T
Rs. 108/-   Rs. 120
ತೆನಾಲಿ ರಾಮಕೃಷ್ಣನ ಕಥೆಗಳು
ತೇಜಸ್ವಿನಿ, Tejasvini
Rs. 54/-   Rs. 60
ವಾಲ್ಮೀಕಿ ಯಾರು ?
ನಾರಾಯಣಾಚಾರ್ಯ ಕೆ ಎಸ್, Narayanacharya K S
Rs. 180/-   Rs. 200
ಫಿಸಿಕ್ಸ್ ಮತ್ತು ಐನ್‌ಸ್ಟೈನ್
ಅಡ್ಯನಡ್ಕ ಕೃಷ್ಣಭಟ್, Adyanadka Krishnabhat
Rs. 77/-   Rs. 85

Latest Books
ತೀರ : ಕೆ ಟಿ ಗಟ್ಟಿ ಆತ್ಮ ಕಥೆ
ಗಟ್ಟಿ ಕೆ ಟಿ, Gatti K T
Rs. 266/-   Rs. 295
ಭಾರತ ಬೆಸುಗೆ : ಸಂಪರ್ಕ ಕ್ರಾಂತಿಯ ಹೃದಯಸ್ಪರ್ಶಿ ಕತೆ
ಸ್ಯಾಮ್ ಪಿತ್ರೊಡ, Sam Pitroda
Rs. 356/-   Rs. 395
ಕೊನೆಯ ಕೊಡುಗೆ
ಜಿಮ್ ಸ್ಟೋವಾಲ್, Gim Stowall
Rs. 86/-   Rs. 95
ಸಾಲೋಮನ್ ದೊರೆಯ ಗಣಿಗಳು
ಸರ್ ರೈಡರ್ ಹಗ್ಗಾರ್ಡ್, Sir Rider Haggard
Rs. 162/-   Rs. 180


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.