|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ತದ್ರೂಪಿ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡಿದ್ದ ವಿಜ್ಞಾನಿಯೊಬ್ಬನು ತನ್ನ ಹಾಗೇ ಇರುವ ಒಂದು ಡಜನ್ ತದ್ರೂಪಿಗಳನ್ನು ಸೃಷ್ಠಿಮಾಡಿ, ಸಾವನ್ನು ಗೆಲ್ಲುವೆನೆಂಬ ಅಹಂಕಾರದಿಂದ ಬೀಗುತ್ತಿದ್ದನು.
ವಿಜ್ಞಾನಿಯ ಅಂತ್ಯಕಾಲ ಸಮೀಪಿಸಿದಾಗ, ಅವನ ಜೀವನವನ್ನು ಕೊಂಡೊಯ್ಯಲು ಸ್ವಯಂ ಯಮಧರ್ಮನೇ ಬಂದಾಗ, ಅಲ್ಲಿ 13 ಜನರಿದ್ದರು. ಅವರಲ್ಲಿ ನಿಜವಾದ ವಿಜ್ಞಾನಿ ಯಾರು ಎಂದು ತಿಳಿಯದೆ ಯಮನು ಗೊಂದಲದಲ್ಲಿ ಬಿದ್ದನು. ಮನುಷ್ಯರ ಸ್ವಭಾಅವನ್ನು ಚೆನ್ನಾಗಿ ತಿಳಿದಿದ್ದ ಯಮಧರ್ಮನು ನಸುನಗುತ್ತಾ 13 ವಿಜ್ಞಾನಿಗಳ ಕಡೆಗೆ ಬಂದನು. ಎಲ್ಲರ ಕಡೆಯೂ ನೋಡುತ್ತಾ
“ಹುಂ! ಅದ್ಭುತ ತದ್ರೂಪಿ ತಂತ್ರಜ್ಞಾನ! ಅಭಿನಂದನೆಗಳು!! ಆದರೆ ಮನುಷ್ಯ ಎಂದಿಗೂ ಬ್ರಹ್ಮನಾಗಲಾರ. ಈ ತದ್ರೂಪಿ ಸೃಷ್ಠಿಯಲ್ಲಿ ಒಂದೇ ಒಂದು ಸಣ್ಣ ದೋಷವಿದೆ. ಜನಸಾಮಾನ್ಯರ ಕಣ್ಣಿಗೆ ಕಾಣದಂತಹ ದೋಷ. ನನಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ” ಎಂದನು.
“ಸಾಧ್ಯವೇ ಇಲ್ಲ. ನಾನು ನೂರಕ್ಕೆ ನೂರರಷ್ಟು ನಿಖರವಾಗಿರುವ ತದ್ರೂಪಿಗಳನ್ನು ರೂಪಿಸಿದ್ದೇನೆ” ಎಂದು ವಿಜ್ಞಾನಿಯು ಎದ್ದು ನುಡಿಯುತ್ತಿರುವಂತೆಯೇ ಯಮಧರ್ಮನು ಅವನ ಕೊರಳಿಗೆ ಉರುಳನ್ನು ಬೀಸಿ “ಇದುವೇ ನಾನು ಹೇಳಿದ ಆ ಕೊರತೆ!...” ಎಂದೆನ್ನುತ್ತಾ ವಿಜ್ಞಾನಿಯನ್ನು ಕರೆದುಕೊಂಡು ಹೊರಟೇಬಿಟ್ಟನು
ಏನಿದು ಈ ಅಹಂಕಾರ!? ನನಗೇಗೆ ಅಹಂಕಾರ ಬರುತ್ತದೆ?
ವಿಶ್ವಾಸವು, ಯಾವಾಗ ಅಂಧ ವಿಶ್ವಾಸವಾಗಿ, ಅಹಂಕಾರಕ್ಕೆ ಎಡೆಕೊಡುತ್ತದೆ?
ಪ್ರಕೃತಿ ಮಾತ್ರ ಪರಿಪೂರ್ಣ. ಮನುಷ್ಯನು ಸದಾ ಕಾಲಕ್ಕೂ ಅಪೂರ್ಣನಲ್ಲವೆ!?
ಅಹಂಕಾರವು ಆತ್ಮವಿನಾಶಕ್ಕೆ ಕಾರಣವಾಗುವುದನ್ನು ನಾನೇಕೆ ತಿಳಿಯುವುದಿಲ್ಲ?
ಮನುಷ್ಯನು ತನ್ನ ಮೂಲಕಭೂತ ಸ್ವಭಾವಗಳನ್ನು ಎಂದಿಗೆ ಗೆಲ್ಲುತ್ತಾನೆ?
‘ಓ...ನನ್ನ ಚೇತನ!...’ ಬದುಕಿನ ಬಗ್ಗೆ ಹಲವು ಒಳನೋಟಗಳನ್ನು ನೀಡುವ ಕಥಾಸಂಗ್ರಹ. ಇಲ್ಲಿರುವ ಒಂದೊಂದೇ ಕಥೆಗಳನ್ನು ‘ಪೆಪ್ಪರ್ಮೆಂಟ್’ ಚಪ್ಪರಿಸಿದ ಹಾಗೆ ಸವಿಯಬಹುದು. ಇಲ್ಲವೇ ಸಾಮೂಹಿಕವಾಗಿ ಸಮಾನ ಮನಸ್ಕರು ಸೇರಿ ಕಥಾಸತ್ಸಂಗವನ್ನು ನಡೆಸಬಹುದು.
|
| |
|
|
|
|
|
|
|
|
|