|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಒನಕೆ ಓಬವ್ವಳಂತೆಯೇ ಚಿತ್ರದುರ್ಗದ ಚರಿತ್ರೆಯಲ್ಲಿ ಮತ್ತೊಬ್ಬ ವೀರಾಗ್ರಣಿ ಇದ್ದಳು. ಆಕೆಯ ಹೆಸರು ‘ಓಬಳವ್ವ ನಾಗತಿ. ಹೆಬ್ಬುಲಿ ಹಿರೇಮದಕರಿ ನಾಯಕರ ಪತ್ನಿ ವೀರರಾಣಿ ‘ಗಂಡೋಬಳವ್ವ’ಳೆಂದೇ ಇತಿಹಾಸದಲ್ಲಿ ಗುರುತಿಸಲ್ಪಟ್ಟ ಸ್ತ್ರೀಶಕ್ತಿ. ಆಕೆಯ ಮುತ್ಸದ್ಧಿತನ, ಧೈರ್ಯ, ರಣೋತ್ಸಾಹ, ತಂತ್ರ, ಕುತಂತ್ರಗಳ ಮೂಲಕ ೧೨ ವರ್ಷದ ಬಾಲಕ ಮದಕರಿನಾಯಕನಿಗೆ ಪಟ್ಟವನ್ನು ಕಟ್ಟಲು ಆ ಕಾಲಘಟ್ಟದಲ್ಲಿ ಎದುರಿಸಿದ ಸವಾಲು ಸಮಸ್ಯೆಗಳು, ಚಿತ್ರದುರ್ಗದ ಸಿಂಹಾಸನವನ್ನು ಅರ್ಹತೆಯಿರುವ ಗಂಡುಗಲಿ ರಣಕಲಿಯೇ ಏರಬೇಕೆಂಬ ಸದುದ್ದೇಶದಿಂದ ಆಕೆ ನಡೆಸಿದ ಹುನ್ನಾರ ತೋರಿದ ನಾಡಪ್ರೇಮ ಇತಿಹಾಸದ ಕಾಲಗರ್ಭದಲ್ಲಿ ಹುದುಗಿಹೋಗಿ ಬಿಡುವ ಸಾಧ್ಯತೆಯಿತ್ತು.
ಈವರೆಗೆ ಚಿತ್ರದುರ್ಗದ ಗಂಡುಗಲಿಗಳ ಬಗ್ಗೆ ವೀರೋಚಿತವಾಗಿ ಐತಿಹಾಸಿಕ ಕೃತಿಗಳನ್ನು ರಚಿಸಿ ರಂಜಿಸಿದ ಡಾ. ಬಿ.ಎಲ್. ವೇಣು ಇದೀಗ ದುರ್ಗದ ಹೆಣ್ಣುಹುಲಿಯ ಕುರಿತು ರೋಚಕವಾಗಿ ಚಿತ್ರಿಸಿದ್ದಾರೆ. ನದಿಯಂತೆ ಹರಿವ ಭಾಷೆಯ ಸರಳತೆ ಮೋಹಕ ಶೈಲಿ ಮೈನವಿರೇಳಿಸುವ ಸಂಭಾಷಣೆಯ ವಾಗ್ವೈಖರಿ ಗಂಡುಮೆಟ್ಟಿನ ನಾಡಿನ ಗಂಡುಭಾಷೆಯ ವಾಗ್ಸಿರಿ ಎಲ್ಲವೂ ಹದವಾಗಿ ಕಾದಂಬರಿಯಲ್ಲಿ ಬೆರೆತಿರುವ ಪರಿ ನಿಮ್ಮನ್ನು ಆಕರ್ಷಿಸದಿರದು. ಓಮ್ಮೆ ಓದಿರಲ್ಲ.
|
| |
|
|
|
|
|
|
|
|
|