|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
‘ಒಗ್ಗರಣೆ ಡಬ್ಬಿ‘ ಕಾರ್ಯಕ್ರಮವನ್ನು ಇದುವರೆಗೂ ‘ಝೀ ವಾಹಿನಿ‘ಯಲ್ಲಿ ನೀವು ನೋಡುತ್ತಾ ಬಂದಿದ್ದೀರಿ. ಅದರ ಪುಸ್ತಕ ರೂಪದ ಎರಡು ಭಾಗ ನಿಮ್ಮ ಕೈಯಲ್ಲಿದೆ. ಅಡುಗೆ ಅನ್ನೋದು ನೆನ್ನೆ ಮೊನ್ನೆ ಬಂದುದಲ್ಲ. ಅನಾದಿ ಕಾಲದಿಂದ-ಅಂದರೆ ಮನುಷ್ಯ ಹುಟ್ಟಿದಂದಿನಿಂದಲೂ ತಿನ್ನುತ್ತಲೇ ಬಂದಿದ್ದಾನೆ. ಆದರೆ, ತಿನ್ನುವ ವಿಧಾನಗಳು ಬದಲಾಗಿವೆ, ತಿನ್ನುವ ರುಚಿ ಬದಲಾಗಿದೆ. ತಿನ್ನುವವರಿಗೆ ರುಚಿ ತುಂಬಾ ಮುಖ್ಯ. ಎಲ್ಲರೂ ತಿನ್ನುವಂಥದ್ದು, ರುಚಿಕರವಾದುದನ್ನೇ. ಎಲ್ಲಿ ರುಚಿ ಇರುತ್ತೋ ಅಲ್ಲಿ ಜನ ಹುಡುಕಿಕೊಂಡು ಹೋಗಿ ತಿನ್ನುವಂಥದ್ದು ರುಚಿಕರ ಅಡುಗೆಗಳನ್ನೇ. ತುಂಬಾ ಜನ ಸಾವಿರಾರು ಮೈಲಿ ದೂರ ಹೋಗಿ ಅಡುಗೆಯ ರುಚಿ ಸವಿದ ಉದಾಹರಣೆಗಳು ಸಾಕಷ್ಟಿವೆ. ಈ ‘ಒಗ್ಗರಣೆ ಡಬ್ಬಿ ಭಾಗ-1 (ಸಿಂಪ್ಲಿ ವೆಜ್) ಹಾಗೂ ‘ಒಗ್ಗರಣೆ ಡಬ್ಬಿ ಭಾಗ-೩ (ಹಬ್ಬದಡುಗೆ) ಮನೆಯ ಎಲ್ಲ ಗೃಹಿಣಿಯರಿಗೆ, ಎಲ್ಲ ತಾಯಂದರಿಗೆ ಉಪಯುಕ್ತವಾಗುವಂತಿದೆ. ‘ಒಗ್ಗರಣೆ ಡಬ್ಬಿ ಭಾಗ-2 (ನಾನ್ವೆಜ್ ಧಮಾಕ) ಪುಸ್ತಕವು ಲಭ್ಯ.
ಎಲ್ಲರೂ ತಾಯಿಯ ಕೈ ಅಡುಗೆ ರುಚಿ ಕಂಡಿರುತ್ತಾರೆ. ಅದು ಅವರಿಗೆ ಇಷ್ಟವಾಗಿರುತ್ತೆ. ಮದುವೆಯಾದ ನಂತರ ಹೆಂಡತಿಯ ಕೈ ಅಡುಗೆ ಚೆನ್ನಾಗಿರುತ್ತೆ. ಆ ಅಡುಗೆ ಚೆನ್ನಾಗಿರುವಂಥ ಸಂದರ್ಭದಲ್ಲಿ ಇನ್ನೂ ಹೆಚ್ಚು ರುಚಿಕಟ್ಟಾದ ಅಡುಗೆ ಮಾಡಬೇಕು - ಕೊಡಬೇಕು, ಮನೆಯಲ್ಲೇ ಸಿಗುವಂಥ ಸಾಮಗ್ರಿಗಳಿಂದ ರುಚಿಕರ ಅಡುಗೆಗಳನ್ನು ಹೇಗೆ ಮಾಡ್ಕೋಬೇಕು, ಯಾವ ರೀತಿ ಮಾಡಿದರೆ ಚೆನ್ನಾಗಿರುತ್ತೆ ಅಂತ ತೋರಿಸುವುದೇ ‘ಒಗ್ಗರಣೆ ಡಬ್ಬಿ‘ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಅದೇ ಉದ್ದೇಶ ಈ ‘ಒಗ್ಗರಣೆ ಡಬ್ಬಿ‘ ಪುಸ್ತಕದಲ್ಲೂ ಮುಂದುವರೆದಿದೆ.
|
| |
|
|
|
|
|
|
|
|
|