|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಂಕಿತ ಪುಸ್ತಕ, Ankita Pustaka |
ಈಗಿನ ಮುದ್ರಣದ ಸಂಖ್ಯೆ |
: |
3 |
ಮುದ್ರಣದ ವರ್ಷ |
: |
2012 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
188 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
157465 |
ಕಳೆದ ಕೆಲವು ದಶಕಗಳಲ್ಲಿ ಕವಿ ಮತ್ತು ಸಾಮಾಜಿಕ ಹೋರಾಟಗಾರರಾಗಿ ಮೇಲೆದ್ದು ಬಂದಿರುವ ಡಾ| ಸಿದ್ಧಲಿಂಗಯ್ಯನವರ ಆತ್ಮಕಥಾನಕ ಇದು. ಈ ಆತ್ಮಕಥೆಯಲ್ಲಿ ದಲಿತಲೇಖಕರ ಕೃತಿಗಳಲ್ಲಿ ನಾವು ನಿರೀಕ್ಷಿಸಬಹುದಾದ ಅನೇಕ ಅಂಶಗಳಿವೆ. ಬಡತನ, ರೊಚ್ಚು, ಅವಮಾನ ಇತ್ಯಾದಿಗಳೆಲ್ಲ ಇವೆ. ಆದರೆ, ಇಡೀ ಕೃತಿಯಲ್ಲಿ ಹೊಸದಾದ, ಅನಿರೀಕ್ಷಿತವಾದ ಒಂದು ಮುಖ್ಯಾಂಗವೂ ಇದೆ. ಅದು ಬಡತನ ಮತ್ತು ಹಿಂಸೆಯ ಬಗ್ಗೆ ಭೀತಿಯ ಗೈರುಹಾಜರಿ. ಈ ಕೃತಿಯ ವಸ್ತು ದಲಿತಕೃತಿಗಳಿಗೆ ಸಾಮಾನ್ಯವಾದದ್ದು, ಸಹಜವಾದದ್ದು. ಆದರೆ, ಈ ವಸ್ತುವನ್ನು ನಿರ್ವಹಿಸುವ ಧ್ವನಿ ಭಿನ್ನವಾದದ್ದು, ಚೇತೋಹಾರಿಯಾದದ್ದು. ಬಡತನ, ಜಾತಿ ಅಪಮಾನದ ಭೀತಿಗಳಿರದ ದಲಿತಕಥೆ ಸುಳ್ಳು. ಆದರೆ, ಅವನ್ನು ಪ್ರತಿಭೆಯಲ್ಲಿ ಲೇಖಕ ಗೆಲ್ಲುತ್ತಾನೆ ಎಂಬ ಮಾತು ನಿಜ. ತಮ್ಮ ಬದುಕಿನಲ್ಲಿನ ಹಸಿವು, ಅವಮಾನಗಲನ್ನು ಕೊಂಚ ವಕ್ರೀಕರನಗೊಳಿಸುವ ಮೂಲಕ ಕವಿ ಸಿದ್ಧಲಿಂಗಯ್ಯ ಅವನ್ನು ದಾಟುವ ಮಾರ್ಗಗಳನ್ನು ತೋರಿಸುತ್ತಾರೆ. ಬಡತನ-ಹೋರಾಟಗಳ ಬದುಕು ಈ ಕಥಾನಕದಲ್ಲಿ ತುಂಟತನ, ವ್ಯಂಗ್ಯದಲ್ಲಿ ನಿರೂಪಿತವಾಗಿದೆ; ಆ ಮೂಲಕ ಪ್ರತಿಭೆಯು ಬಡತನವನ್ನು ಗೆಲ್ಲುವ ಹೊಸ ಆತ್ಮವಿಶಾಸವೊಂದನ್ನು ಆವಿಷ್ಕರಿಸುವ ಅಪರೂಪದ ಬರವಣಿಗೆ ಇದು.
|
| |
|
|
|
|
|
|
|
|
|